SearchBrowseAboutContactDonate
Page Preview
Page 403
Loading...
Download File
Download File
Page Text
________________ ೩೯೮ | ಪಂಪಭಾರತಂ ವ|| ಅನ್ನೆಗಮಿತ್ತ ಕೀಚಕನೆಂಬ ಪಾರಿಉll ಅಚ್ಚಗದಿಂದನನಡಂಗದ ಬೇಸತೊಳಂತೆ ನೀರೊಳಂ ಕಿಚ್ಚನೊಳಂ ಪೊರಳು ಪಗಲಂದಿರುಳಾದೊಡೆ ರಾಜಮಾದವೋಲ್ || ಪರ್ಚಿ ಮನಕ್ಕೆ ಬಿಚ್ಚತಿಕವಂದಿರೆ ನಾಟಕಶಾಲೆವೊಕ್ಕು ವಿ ದ್ಯುಚ್ಚಪಳಂ ಮನೋಜಪರಿತಾಪದಿನೋಪಳೆಗತ್ತು ಭೀಮನಂ || ೭೫ ಚಂ|| ನುಡಿಯದೆ ಕೆಮ್ಮನಿರ್ಪಿರವಿದಾವುದು ಕಾರಣವಾವುದೀ ಮೊಗಂ ಗುಡದಿರವಿಂತು ಕಣ್ಮಡಿಗರದ್ದರೆ ಮಾನಸರಪ್ಪರೆಂದು ಮ | ಛಡ ನುಡಿದೆಯ್ದವಂದು ಮುಸುಕಂ ತಗೆದಾಗಡೆ ಮೇಲೆವಾಯ್ತು ಬ ಅಡಿಗನವುಂಕಿ ಬಲ್ಲಡಿಗನಂ ಪಿಡಿದೊರ್ಮೆಯ ಮಲ್ಲಯುದ್ಧದೊಳ್ || ೭೬ ವಗ ಪೋರ್ದು ಮಾಮಲ್ಲಿಯಾಗ ಪಲವುಂ ಗಾಯಗಳೊಳಾಯಂದಪ್ಪದ ತನಗವಂ ಸಮಾನಬಳನಪ್ಪುದಂ ಪಿರಿದು ಪೊಟ್ಟು ಸಂತರ್ಪಿನಂ () ಪೋರ್ದು ಬಳೆಯ ಅನಾನೆ ಮಟ್ಟಿದಂತ ನುರ್ಚುನೂಅಪಿನಮವುಂಕಿ ಪಿಡಿದಡಸಿಯಗುರ್ವು ಪರ್ವ ಬೀಸಿ ಗುಣಣೆಯ ಕಂಭಂಗಳೊಳಂ ಕೇರ್ಗಳೊಳಮಾಸ್ಫೋಟಿಸಿ ತಾಟಿಸಿದಾಗಳ್ಕ೦ll ಬಿಸುನೆತ್ತರ್ ನೆಣನಡಗೆ ಲ್ಕು ಸಮಸ್ತಂ ಸುರಿಯ ಕೈಗೆ ತೊವಲುಟಿಯಲಗು | ರ್ವಿಸಿದುದು ತೀವಿದ ಗುಳ್ಳೆಯ ಪಸುಂಬೆಯಂ ಸೋರ್ಚಿದಂತ ತನು ಕೀಚಕನಾ || ಶರಭಗವಿರುವ ಹಾಗಿದ್ದನು. ವ! ಸೂರ್ಯನು ಇನ್ನೂ ಅಸ್ತಮಯವಾಗದ ಬೇಸರಿಕೆಯ ದುಃಖದಿಂದ ವ್ಯಥೆಪಟ್ಟು ನೀರಿನಲ್ಲಿಯೂ ಬೆಂಕೆಯಲ್ಲಿಯೂ ಹೊರಳಿ ಹಗಲು ರಾತ್ರಿಯಾದ ತಕ್ಷಣ ರಾಜ್ಯಪ್ರಾಪ್ತಿಯಾದ ಹಾಗೆ ಉಬ್ಬಿ ಮನಸ್ಸಿಗೆ ಸಂತೋಷವುಂಟಾಗಿರಲು ನಾಟಕಶಾಲೆಯನ್ನು ಪ್ರವೇಶಿಸಿ ಮಿಂಚಿನಂತೆ ಚಪಲನಾದ ಕೀಚಕನು ಕಾಮತಾಪದಿಂದ ಭೀಮನನ್ನು ಪ್ರಿಯೆಯೆಂದೇ ಭಾವಿಸಿ ಇದೇನಿದು ಪ್ರಿಯ. ೭೬. ಮಾತನಾಡದೆ ಸುಮ್ಮನೆ ಇರುವುದಕ್ಕೆ ಕಾರಣವೇನು ? ಮುಖವನ್ನು ತೋರಿಸದೇ ಇರುವ ಈ ಸ್ಥಿತಿಯೇನು ? ಮನುಷ್ಯರಾಗಿರುವವರು ಈ ಸ್ಥಿತಿಯಲ್ಲಿ ಮೋಸಗಾರ ರಾಗುವುದುಂಟೇ ?' ಎಂದು ಮೋಹದ ಮಾತಗಳನ್ನಾಡಿ ಸಮೀಪಕ್ಕೆ ಬಂದು ಮುಸುಕನ್ನು ತೆಗೆದೊಡನೆಯೇ ಬಲುದಡಿಗನಾದ ಭೀಮನು ಬಲುದಡಿಗನಾದ ಕೀಚಕನನ್ನು ಅಮುಕಿ ಹಿಡಿದುಕೊಂಡು ಮಲ್ಲಯುದ್ದದಲ್ಲಿ ಒಂದೇ ಸಮನಾಗಿ ವ|| ಹೋರಾಡಿ ದ್ವಂದ್ವಯುದ್ದವಾಡಿ ಅನೇಕ ಪಟ್ಟುಗಳಲ್ಲಿ ಶಕ್ತಿಹೀನನಾಗದೆ ತನಗೆ ಅವನು ಸಮಾನಬಲನಾದುದರಿಂದ ಬಹಳಹೊತ್ತು ಸಮಾನನಾಗಿ ಕಾದಿ ಬಳೆಯ ರಾಶಿಯನ್ನು ಆನೆಯು ತುಳಿದ ಹಾಗೆ ನುಚ್ಚುನೂರಾಗುವಂತೆ ಅಮುಕಿ ಹಿಡಿದು ನಗ್ಗಿ ಭಯವು ಹಬ್ಬುವ ಹಾಗೆ ಬೀಸಿ ನಾಟ್ಯಶಾಲೆಯ ಕಂಭಗಳಿಗೂ ಗೋಡೆಗಳಿಗೂ ಬಡಿದು ಆಸ್ಫೋಟಿಸಿ ಬೀಸಿದನು. ೭೭. ಬಿಸಿರಕ್ತ, ಕೊಬ್ಬು, ಮಾಂಸ, ಎಲುಬು ಎಲ್ಲವೂ ಸುರಿದು ಹೋಗಿ ಕೈಯಲ್ಲಿ ತೊಗಲು ಮಾತ್ರ ಉಳಿಯಿತು. (ಪದಾರ್ಥದಿಂದ) ತುಂಬಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy