SearchBrowseAboutContactDonate
Page Preview
Page 401
Loading...
Download File
Download File
Page Text
________________ وع ೩೯೬ | ಪಂಪಭಾರತಂ . ವll ಪೊಯೊಡ ಬಲುಬಂ ಪೊಯಿಲ್ವೆಂತೇನುಮನಳಿಯದ ಪರಿಭವಾನಿಲನಿಂ ಶೋಕಾನಲನಿರ್ಮಡಿಸೆ ನಡನಡುಗಿ ಕಾಯ್ತಿನೊಳ್ ಪಿಡುಗಿ ತಳೋದರಿ ವೃಕೋದರನಲ್ಲಿಗೆ ವಂದು ಕೃಟೇಕಾಂತದೊಳಿಂತೆಂದಳಮಗ ಸll ಪೆಜನಿಕುಂಗೂಬಳೊಳಂ ಕೀಚಲೋಳಮಳವಿಗಟ್ಟಿರ್ಷ ನಿಮ್ಮಿರ್ಪುದರ್ಕಂ ಮಲುಗುತ್ತಿರ್ಪಳೆ ನೋಡಾದಲನೆನಗೆ ಕಸ್ತೂಲದಿಂ ಕೀಚಕಂ ಬಂ | ದುಂದೆನ್ನಂ ಕಾಡಿ ಕೈಗೆಲ್ಲುಗಿದನವನದೊಂದುರ್ಕನೇವೇಶ್ವಿನಿ ನಟಿವಯ್ ಪೂಣ್ಣನ್ನದೊಂದಂ ಪರಿಭವಮನಿದಂ ನೀಗು ನೀಂ ಭೀಮಸೇನಾ || ೭೧ ವll ಎಂಬುದುಂ ಭೀಮಸೇನನೇವದೊಳ್ ಕಾಣದಿವನೊರ್ವಂ ದುಶ್ಯಾಸನನ ನಂಟನಕುಮಾದೊಡೇನಾಯ್ತುಕಂ11 ಮುಳಿಸೆಂಬುದೆನಗೆ ಕೌರವ ರೊಳೆ ಹಿರಿದಾ ಬಲಿದ ಬಯಕೆಯಂ ಮಾಧುರದೊಳ್ | ಕಳೆವಂತನ್ನೆಗಮಿವನೊಲ್ ಕಳೆವೆ ನಿನ್ನೊಂದು ಮುಳಿಸನಬ್ಬದಳಾಕ್ಷೀ | ವll ಎಂದು ನೀನೀ ವಿರಾಟನ ನಾಟಕಶಾಲೆಯನೆ ಸಂಕೇತನಿಕೇತನಂ ಮಾಡಿ ನೇಸರ್ಪಡಲೊಡಮೆನ್ನಿ೦ ಮುನ್ನಮ ಪೋಗಿರ್ಪುದಾನಲ್ಲಿಗೆ ವರ್ಹೆನೆಂದಾ ಪಾನಂ ನಂಬಿ ಗಂಧರ್ವರೆ ಬಿಡಿಸಿಕೊಳ್ಳಲಿ ಹೋಗು ಎಂದು ದುರಾತ್ಯನಾದ ಅವನು ಅವಳನ್ನು ಹೊಡೆದನು. ವll ಹೊಡೆಯಲಾಗಿ ಸಹಾಯವಿಲ್ಲದವನು ಪೆಟ್ಟು ತಿಂದಹಾಗೆ ಏನುಮಾಡಲೂ ತಿಳಿಯದೆ ಅವಮಾನವೆಂಬ ಗಾಳಿಯಿಂದ ದುಃಖಾಗ್ನಿಯು ಇಮ್ಮಡಿಸಲು ವಿಶೇಷವಾಗಿ ನಡುಗಿ ಕೋಪದಿಂದ ಸಿಡಿದು ದೌಪದಿಯು ಭೀಮನ ಬಳಿಗೆ ಬಂದು ಅತ್ಯಂತ ರಹಸ್ಯವಾಗಿ ಹೀಗೆಂದು ತನ್ನ ದುಃಖವನ್ನು ತೋಡಿಕೊಂಡಳು. ೭೧. ಪರಾನ್ನದಿಂದಲೂ ಪರರ ಸೇವಾವೃತ್ತಿಯಿಂದಲೂ ಕೀಳಂತಸ್ತಿನಲ್ಲಿ ದುಃಸ್ಥಿತಿಯಿಂದ ದುಃಖಪಡುತ್ತಿರುವ ನನಗೆ ಉಂಟಾದ ದುಃಖವನ್ನು ನೋಡು. ನನ್ನ ಮೇಲಿನ ಮೋಹದಿಂದ ಕೀಚಕನು ಬಂದು ವಿಶೇಷವಾಗಿ ನನ್ನನ್ನು ಹಿಂಸಿಸಿ ಕೈಮೀರಿ ಹೊಡೆದು ಬಿಸಾಡಿದನು. ಅವನ ಕೊಬ್ಬನ್ನು ಏನೆಂದು ಹೇಳಲಿ ; ಭೀಮಸೇನಾ ನನ್ನನ್ನು ಆವರಿಸಿರುವ ಈ ಅವಮಾನವನ್ನು ನೀನು ತಿಳಿದಿದ್ದೀಯೆ. ಇದನ್ನು ನೀನು ಪರಿಹಾರಮಾಡು ಎಂದು ಬಾಯಳಿದಳು. ವ|| ಭೀಮಸೇನನು ಕೋಪದಲ್ಲಿ ಕುರುಡನಾಗಿರುವ ಇವನು ಮತ್ತೊಬ್ಬ ದುಶ್ಯಾಸನನ ನೆಂಟನಾಗಿರಬೇಕು, ಆದರೇನಾಯ್ತು? ೭೨. ನನಗೆ ಕೌರವರಲ್ಲಿ ವಿಶೇಷ ಆಗ್ರಹವುಂಟು. ಈ ಸಂಪೂರ್ಣವಾದ ಬಯಕೆಯನ್ನು ಮಹಾಯುದ್ದದಲ್ಲಿ ಕಳೆಯುವವರೆಗೆ ನಿನಗಾಗಿ ಉಂಟಾದ ಕೋಪವನ್ನು ಎಲ್‌ ಕಮಲದಳನೇತ್ರೇ ಇವನಲ್ಲಿ ತೀರಿಸಿಕೊಳ್ಳುತ್ತೇನೆ. ವ ನೀನು ಈ ವಿರಾಟನ ನಾಟಕಶಾಲೆಯನ್ನೇ ರಹಸ್ಯವಾಗಿ ಕೂಡುವ ಮನೆಯನ್ನಾಗಿ ಮಾಡಿಕೊಂಡು ಸೂರ್ಯಾಸ್ತಮಾನವಾದ ಕೂಡಲೇ ನಮಗಿಂತ ಮುಂಚೆಯೇ ನೀನು ಹೋಗಿರು, ನಾನು ಅಲ್ಲಿಗೆ ಬರುತ್ತೇನೆಂದು ಕಾಮುಕನನ್ನು ನಂಬಿಕೆ ಬರುವಂತೆ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy