SearchBrowseAboutContactDonate
Page Preview
Page 395
Loading...
Download File
Download File
Page Text
________________ ೩೯೦) ಪಂಪಭಾರತಂ ವ|| ಎಂಬುದುಂ ನಿನ್ನನಾಳ್ವೆನೆಂದು ಬಾಣಸಿನ ಕರಣಕ್ಕೆ ನಿರೂಪಣಂಗಯ್ಯನನ್ನೆಗಂ ನಕುಳನುಮಂಕವಣಿಯುಂ ಬಾಳುಂ ಬಾರುಂ ಚಮ್ಮಟಗೆಯುಮನೊರ್ವ ಕೀಬಾಳಿ೦ ಪಿಡಿಯಿಸಿ ಕೊಂಡು ಬಂದು ವಿರಾಟನಂ ಕಂಡಂತಪ್ಪ ದುಷ್ಟಾಶ್ವಂಗಳುಮನೇಯಲುಂ ತಿರ್ದಲುಂ ಬಲ್ಲೆನೆಂದು ಪೇಯ್ಡಾಳಾಗಿ ತಂತ್ರನಾಳವೆಸರೊಳ ಮಾಸಾದಿಯಾಗಿರ್ದಂ ಸಹದೇವನುಂ ಗೋಪಾಳವೇಷದೊಳ್ ಬಂದು ಕಂಡವನ ಗೋಮಂಡಳಾಧ್ಯಕ್ಷನಾಗಿರ್ದಾಗಲ್ಮll ಎಳೆಯ ವಿಕ್ರಮದಿಂ ತರಲ್ ಮಹಿಧರ ಮುನ್ ಪಂದಿಯಾದಂತ ಪೋ ಬೆಳೆಯಂ ದಾಯಿಗರಂ ಪಡಲ್ವಡಿಸಿ ಕೊಂಡಾಳಲ್ಕಮಾದೇವದಿಂ || ಮುಳಿಸಿಂ ರಂಭೆಯ ಕೊಟ್ಟ ಶಾಪಮನದಂ ನೀಗಲ್ಯಮಾಗಳ ಬೃಹಂ ದಳೆಯಾದಂ ನರನಾತ್ಮಕಾರ್ಯವಶದಿಂ ಶುದ್ಧಾಂತದೊಳ್ ಮತ್ರ ನಾ || ೫೫ ವ|| ಅಂತು ಬೃಹಂದಳೆಯಾಗಿ ಗಾಂಡೀವ ಜ್ಞಾಘಾತದೊಳಿಂದ್ರನೀಲಂಗಳನಡಸಿದಂತಿರ್ದ ರಡುಂ ಮುಂಗಯ್ಸಳ ಕರ್ಪ೦ ತೀವ ತೊಟ್ಟ ಬಳೆಗಳ ಮಆಸೆ ವಿರಾಟನ ಮಗಳಪುತ್ತರ ಮೊದಲಾಗೆ ಪಲವುಂ ಪಾತ್ರಂಗಳನಾಡಿಸುತ್ತುಂ ಮಹಾ ಭಾರಾವತಾರದೊಳಪ್ಪ ಸಂಗ್ರಾಮರಂಗದೋಳ ರಾತಿನಾಯಕರ ಕಬಂಧಪಾತ್ರಂಗಳನಾಡಿಸುವುದನುದಾಹರಿಸುವಂತಿರ್ದಂ ಪಾಂಚಾಳ ವಲಲನೆಂಬುದು ನನ್ನ ಹೆಸರು ಎಂದನು. ವ|| ನಿನ್ನನ್ನಾಳುತ್ತೇನೆ ಎಂದು ವಿರಾಟನು ಅವನನ್ನು ಅಡುಗೆಯ ಕಾರ್ಯಕ್ಕೆ ನೇಮಿಸಿಕೊಂಡನು. ಅಷ್ಟರಲ್ಲಿ ನಕುಳನು ಕುದುರೆಯ ಮೇಲಿನ ತಡಿಯನ್ನೂ ಕತ್ತಿಯನ್ನೂ ಚರ್ಮದ ಲಗಾಮನ್ನೂ ಚಾವಟಿಯನ್ನೂ ಒಬ್ಬ ಸೇವಕನಿಂದ ತೆಗೆಯಿಸಿಕೊಂಡು ಬಂದು ವಿರಾಟನನ್ನು ಕುರಿತು ಎಂತಹ ದುಷ್ಟಕುದುರೆಯನ್ನಾದರೂ ಹತ್ತಲು ತಿದ್ದಲೂ ಬಲ್ಲೆ ಎಂದು ಹೇಳಿ ಆತನಲ್ಲಿ ಆಳಾಗಿ ಸೇರಿ ತಂತ್ರಪಾಲನೆಂಬ ಹೆಸರಿನಿಂದ ಕುದುರೆಯ ರಕ್ಷಕನಾಗಿದ್ದನು. ಸಹದೇವನೂ ದನಕಾಯುವವನ ವೇಷದಲ್ಲಿ ಬಂದು ಕಂಡು ಅವನ ಗೋಸಮೂಹದ ಮುಖ್ಯಾಧಿಕಾರಿಯಾಗಿದ್ದನು. ಆಗ ೫೫. ಪೌರುಷದಿಂದ ವಿಷ್ಣುವು ಭೂಮಿಯನ್ನು ತರಲು ಹಿಂದೆ ಹಂದಿಯಾದಂತೆ (ವರಾಹವತಾರವನ್ನೆತ್ತಿದ ಹಾಗೆ) ತಮಗೆ ನಷ್ಟವಾದ ರಾಜ್ಯವನ್ನು ದಾಯಾದಿಗಳಿಂದ ಬಿಡಿಸಿಕೊಂಡು ಆಳುವುಕ್ಕೂ ತನಗುಂಟಾದ ಅವಮಾನದಿಂದಲೂ ಕೋಪದಿಂದಲೂ ರಂಭೆಯು ಕೊಟ್ಟ ಶಾಪವನ್ನು ನೀಗುವುದಕ್ಕೂ ಆಗ ಅರ್ಜುನನು ತನ್ನ ಕಾರ್ಯಸಾಧನೆಗಾಗಿ ವಿರಾಟನ ಅಂತಃಪುರದಲ್ಲಿ ಬೃಹಂದಳೆಯೆಂಬ ನಪುಂಸಕನಾದನು. ವ|| ಗಾಂಡೀವದ ಹೆದೆಯ ಪೆಟ್ಟಿನಿಂದಾದ ಇಂದ್ರನೀಲಮಣಿಗಳನ್ನು ಕೆತ್ತಿಸಿದ ಹಾಗಿದ್ದ ಎರಡು ಮುಂಗೈಗಳ ಕಪ್ಪನ್ನು ಪೂರ್ಣವಾಗಿ ತೊಟ್ಟುಕೊಂಡಿದ್ದ ಬಳೆಗಳು ಮರೆಮಾಡಿದುವು. ವಿರಾಟನ ಮಗಳಾದ ಉತ್ತರೆಯೇ ಮೊದಲಾದ ಅನೇಕ ಪಾತ್ರಗಳನ್ನು ನಾಟ್ಯವಾಡಿಸುವ ಕಾರ್ಯವು ಅವನದಾಯಿತು. ಮುಂದೆ ಅದು ಬರುವ ಮಹಾಭಾರತ ಯುದ್ಧಭೂಮಿಯಲ್ಲಿ ಶತ್ರುನಾಯಕರ ರುಂಡಗಳೆಂಬ ಪಾತ್ರಗಳನ್ನು ಈ ರೀತಿಯಲ್ಲಿ ಆಡಿ ತೋರಿಸುತ್ತೇನೆ ಎನ್ನುವಂತಿದ್ದಿತು. ಬ್ರೌಪದಿಯೂ ಆಕಾರವನ್ನು ಮರೆಸಿಕೊಂಡು ಸೈರಂದ್ರೀವೇಷದಿಂದ ಹೋಗಿ ವಿರಾಟನ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy