SearchBrowseAboutContactDonate
Page Preview
Page 394
Loading...
Download File
Download File
Page Text
________________ ಅಷಮಾಶ್ವಾಸಂ | ೩೮೯ ಮೇಲೊಟ್ಟಿ ಪರದೂರೊರ್ವರೊಂದೊಂದು ಬಟ್ಟೆಯೊಳ್ ಪೊಗಿ ಬೇಜವೇ ಪೊಬಲಂ ಪೊಕ್ಕು ಧರ್ಮಪುತ್ರಂ ಧರಾಮರವೇಷದೊಳ್ ವಿರಾಟನಂ ಕಂಡಾಶೀರ್ವಾದಮಂ ಕುಡ ವಿರಾಟಂ ನೀಮತಣಿಂ ಬಂದಿರೆಂಬುದುಮಾಂ ಧರ್ಮರಾಜನ ಸಮೀಪದೂಳಿರ್ಪವರಸಂಗ ಪೊಟ್ಟು ಪೋಗದಾಗಳೆನ್ನೊಡನೆ ನೆತ್ತಮನಾಡುವನದಲ್ಲದೆಯುರಿಕoll ಕನವರಿಸಿ ನಾಲ್ಕು ವೇದಮು ಮನಗೆ ಮುಖೋದ್ಯಮದಲ್ಲದಾಯಿಂಗದ ಮಾ | ತನಿತ ಗಡ ನೃಪತಿ ಬಂದಂ ನಿನಗಾಳಾಗಿ ಕಂಕಭಟ್ಟನನೆಂಬಂ || ೫೩ ವಗಿ ಎಂಬುದುಂ ವಿರಾಟನಾತನ ಭದ್ರಾಕಾರಮುಮಂ ಮೃದುಮಧುರಗಂಭೀರ ವಾಣಿಯುಮಂ ಕಂಡು ಕರಂ ಮನದಗೊಂಡು ಕರಮೋಳ್ಳಿತೆಂದು ಕಂಕಭಟ್ಟನನಿರಿಸಿದನನ್ನೆಗಂ ಭೀಮಸೇನನುಂ ಬೋನವೀಳಿಗೆಯಂ ಸಟ್ಟುಗಮುಮನೊರ್ವ ಪರಿಚಾರಕನಿಂ ಪಿಡಿಯಿಸಿಕೊಂಡು ಬಂದು ನಿಂದನಂ ಕಂಡು ವಿರಾಟಂ ನಿನ್ನ ಬಿನ್ನಾಣವೇನೆಂದು ಬೆಸಗೊಳೆಕoll ಎನ್ನಟ್ಟಡುಗಯನುಂಡೂಡ ಬಿನ್ನಣಮೇನರಸ ನರಗಳಾಗವು ಸವಿಯೋಳ್ || ನಿನ್ನಂ ಮೆಚಿಪನಡದೂ ಡನ್ನರೊಳಂ ಮಲ್ಕನೊರ್ವ ವಲ್ಲಲನೆಂಬಂ || ೫೪ ಮೇಲೆ ಮನುಷ್ಯಾಕೃತಿಯಲ್ಲಿ ನೇತುಹಾಕಿದರು. ಪಕ್ಕದಲ್ಲಿದ್ದ ಹೆಣಗಳೆಲ್ಲವನ್ನೂ ಆದರ ಮೇಲೆ ರಾಶಿ ಹಾಕಿದರು. ಬೇರೆಬೇರೆಯಾಗಿ ಒಬ್ಬೊಬ್ಬರೂ ಒಂದೊಂದು ದಾರಿಯಲ್ಲಿ ಪ್ರತ್ಯೇಕವಾಗಿ ಪುರಪ್ರವೇಶಮಾಡಿದರು. ಧರ್ಮರಾಯನು ಬ್ರಾಹ್ಮಣವೇಷದಲ್ಲಿ ವಿರಾಟನನ್ನು ನೋಡಿ ಆಶೀರ್ವದಿಸಿದನು. ವಿರಾಟನು 'ನೀವೆಲ್ಲಿಂದ ಬಂದಿರಿ' ಎನ್ನಲು ನಾವು ಧರ್ಮರಾಜನ ಸಮೀಪದಲ್ಲಿದ್ದವರು. ರಾಜನಿಗೆ ಹೊತ್ತುಹೋಗದಾಗ ಅವನು ನಮ್ಮೊಡನೆ ಪಗಡೆಯಾಡುತ್ತಿದ್ದನು. ಅದಲ್ಲದೆ ೫೩. ನಾನು ನಾಲ್ಕು ವೇದಗಳನ್ನು ಕನಸಿನಲ್ಲಿಯೂ ಹೇಳಬಲ್ಲೆ, ಅದಲ್ಲದೆ ಶಿಕ್ಷಾವ್ಯಾಕರಣವೇ ಮೊದಲಾದ ಆರು ವೇದಾಂಗಗಳೂ ಹಾಗೆಯೇ ಕಂಠಪಾಠವಾಗಿವೆ. ನಿನಗೆ ಆಳಾಗಿರುವುದಕ್ಕೆ ಬಂದಿದ್ದೇನೆ. ಕಂಕಭಟ್ಟನೆಂದು ನನ್ನ ಹೆಸರು ಎಂದನು. ವ|| ವಿರಾಟನು ಆತನ ಮಂಗಳಾಕಾರವನ್ನೂ ಮೃದುಮಧುರಗಂಭೀರವಾದ ಮಾತನ್ನೂ ನೋಡಿ ವಿಶೇಷವಾಗಿ ಸಂತೋಷಪಟ್ಟು ಬಹಳ ಒಳ್ಳೆಯದು ಎಂದು ಕಂಕಭಟ್ಟನನ್ನು ತನ್ನಲ್ಲಿ ಇರಿಸಿಕೊಂಡನು. ಅಷ್ಟರಲ್ಲಿ ಭೀಮಸೇನನು ಊಟದ ಪೆಟ್ಟಿಗೆಯನ್ನೂ ಸೌಟನ್ನೂ ಒಬ್ಬ ಆಳಿನ ಕಯ್ಯಲ್ಲಿ ತೆಗೆಸಿಕೊಂಡು ಬಂದು ನಿಂತನು. ಅವನನ್ನು ನೋಡಿ ನಿನ್ನ ವಿದ್ಯೆಯೇನು (ಕಸುಬು ವೃತ್ತಿ) ಎಂದು ಪ್ರಶ್ನೆಮಾಡಿದನು. ೫೪. ಅದಕ್ಕೆ ಭೀಮನು ನಾನು ಮಾಡಿದ ಅಡಿಗೆಯನ್ನು ಊಟಮಾಡಿದರೆ ತಲೆಯಲ್ಲಿ ನರೆಕೂದಲೇ ಬರುವುದಿಲ್ಲ. ಎಲೈ ರಾಜನೆ ವಿಚಾರಮಾಡುವುದೇನು ರುಚಿಯಲ್ಲಿ ನಾನು ನಿಮ್ಮನ್ನು ತೃಪ್ತಿಪಡಿಸಬಲ್ಲೆ, ಪ್ರತಿಭಟಿಸಿ ಬಂದರೆ ಎಂತಹವರನ್ನೂ ನೋಡಿಕೊಳ್ಳಲೂ ಸಮರ್ಥನಾದ ಜಟ್ಟಿ ನಾನು,
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy