SearchBrowseAboutContactDonate
Page Preview
Page 396
Loading...
Download File
Download File
Page Text
________________ ಅಷಮಾಶ್ವಾಸಂ | ೩೯೧ ರಾಜತನೂಜೆಯುಂ ರೂಪುಗರೆದು ಸೈರಂಧೀವೇಷದೊಳ್ ಪೋಗಿ ವಿರಾಟನ ಮಹಾದೇವಿ ಸುದೇಷ್ಟೆಯಂ ಕಾಣ್ಣುದುಮಾಕೆಯುಂ ಕೃಷ್ಣಯ ರೂಪಂ ಕಂಡು ಚೋದ್ಯಂಬಟ್ಟು ಸಾಮಾನೈಯಲ್ಲಿ ನೀನಾರ್ಗನೆಂಬೆಯೆಂದು ಬೆಸಗೊಳಕಂtl. ನವ ಮೃಗಮದ ಪರಿಮಳಮುಮ ನಿವು ಮಸುಳಿಪುವೆನಿಪ ವಿವಿಧ ಗಂಧಂಗಳನಾ | ನವಯವದೊಳ್ ಮಾಡುವ ಘ ಟಿವಳಿಯೆಂ ದೇವಿ ಗಂಡವಳಿಯೆನಲ್ಲಂ || ಹೆಸರೊಳ್ ಸೈರಂಧಿಯನಟಿ ವಸನದ ದೆಸೆಯದೆಯೆನನಗೆ ಗಂಧರ್ವರ ಕಾ || ಪಸದಳವುಂಟರಿಸುವೊಡಾಂ ಬೆಸಕೆಯ್ಯಂ ನಿನ್ನ ಬೆಸಸಿದಂದದೊಳಿರ್ಪೆಂ || ವ|| ಎಂದು ವಿರಾಟನ ಮಹಾದೇವಿಗಾವಗಮಣುಗೆಯಾಗಿ ಪಾಂಚಾಳಿಯಿರ್ದಳಂತು ಪಾಂಡವರೀ ಮಾಳಿಯಿಂದಿರ್ಪನ್ನೆಗಮೊಂದು ದೆವಸಂ ವಿರಾಟಂ ನೆಲದೊಳುಳ್ಳಮಲ್ಲರೆಲ್ಲರುಮಂ ಬರಿಸಿ ಮಲ್ಲಯುದ್ಧಮಂ ನೋಡೆ ಸುಯೋಧನನಮಲ್ಲಂ ವಿಷಖರ್ಪರನೆಂಬಂ ತನ್ನ ಮಲ್ಲರೆಲ್ಲರು ಮಂ ಕೊಂದೊಡೆ ಸಿಗ್ಗಾಗಿ ತನ್ನ ಬಾಣಸಿಗನಾಗಿರ್ದ ವಲಲನು ಕರೆದು ಪೇಸ್ತಾಗಳ್ ೪೭ ಮಹಾರಾಣಿಯಾದ ಸುದೇಷ್ಠೆಯನ್ನು ಕಂಡಳು. ಅವಳು ಬ್ರೌಪದಿಯ ರೂಪವನ್ನು ನೋಡಿ ಆಶ್ಚರ್ಯಪಟ್ಟು “ನೀನು ಸಾಮಾನ್ಯಳಲ್ಲ, ನೀನು ಯಾರವಳು? ನಿನ್ನ ಹೆಸರೇನು ?' ಎಂದು ಪ್ರಶ್ನೆ ಮಾಡಿದಳು- ೫೬. ಹೊಸದಾದ ಕಸ್ತೂರಿಯ ವಾಸನೆಯನ್ನೂ ಮೀರಿಸುವ ನಾನಾಬಗೆಯಾದ ಗಂಧಗಳನ್ನು ಶ್ರಮವಿಲ್ಲದೆ ಅರೆದು ಸಿದ್ಧಪಡಿಸಬಲ್ಲ ಗಟ್ಟಿವಳಿಯು ನಾನು. ದೇವಿ ಗಂಡನಿಲ್ಲದವಳಾಗಿದ್ದೇನೆ-೫೭. ಸೈರಂಧಿಯೆಂಬುದು ನನ್ನ ಹೆಸರು. ನೀಚಕಾರ್ಯದ ಪರಿಚಯವಿಲ್ಲದವಳು, ನನಗೆ ಗಂಧರ್ವರ ರಕ್ಷಣೆ ಪೂರ್ಣವಾಗುಂಟು, ಒಪ್ಪುವುದಾದರೆ ದಾಸಿಯಾಗಿರುತ್ತೇನೆ. ಆಜ್ಞೆ ಮಾಡಿದ ರೀತಿಯಲ್ಲಿ ನಡೆದುಕೊಳ್ಳುತ್ತೇನೆ. ವ|| ಎಂದು ಬ್ರೌಪದಿಯು ವಿರಾಟನ ಮಹಾರಾಣಿಗೆ ಅತ್ಯಂತ ಪ್ರೀತಿಪಾತ್ರಳಾದ ದಾಸಿಯಾಗಿದ್ದಳು. ಪಾಂಡವರು ಈ ರೀತಿಯಿಂದಿರುವಾಗ ಒಂದುದಿನ ವಿರಾಟನು ಭೂಮಿಯಲ್ಲಿರುವ ಜಟ್ಟಿಗಳೆಲ್ಲರನ್ನೂ ಬರಮಾಡಿ ಜಟ್ಟಿಕಾಳಗವನ್ನು ಆಡಿಸಿ ನೋಡಿದನು. ದುರ್ಯೊಧನನ ಜಟ್ಟಿಯಾದ ವಿಷಖರ್ಪರನೆಂಬುವನು ತನ್ನ ಜಟ್ಟಿಗಳೆಲ್ಲರನ್ನೂ ಕೊಲ್ಲಲು ಅವಮಾನಿತನಾಗಿ ತನ್ನ ಅಡುಗೆಯವನಾಗಿದ್ದ ವಲಲನನ್ನು ಕರೆದು ಕಾದಲು ಹೇಳಿದನು. ೫೮. ವಿಷಖರ್ಪರನು ತನ್ನ ವಿಶೇಷ ಕ್ರೌರ್ಯದಿಂದ ಪ್ರತಿಭಟಿಸಲು ವಲಲನು ಭೂಮಿಯನ್ನು ಕಮ್ಮಿಂದ ಉಜ್ಜಿ ಎದುರಿಸಿ ಕಣ್ಣುಗಳು ತಿರುಗುವ ಹಾಗೆ ಅವುಕಿಕೊಂಡು ಸಿಂಹಧ್ವನಿಯಿಂದ ಘರ್ಜಿಸಿದನು. ವ|| ದುರ್ಯೊಧನನ ಜಟ್ಟಿಯನ್ನು ಕೊಂದು ವಲಲನು ವಿರಾಟನ ಮನೆಯಲ್ಲಿ ತನ್ನ ಮಾತೇ ಮಾತಾಗಿದ್ದನು. ಅಷ್ಟರಲ್ಲಿ ವಿರಾಟನ ಮೈದುನನೂ ಸುದೇಷ್ಟೆಯ ಸೋದರನೂ ಸಿಂಹಬಲವುಳ್ಳವನೂ ಆದ ಕೀಚಕನೆಂಬುವನು ..
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy