SearchBrowseAboutContactDonate
Page Preview
Page 363
Loading...
Download File
Download File
Page Text
________________ ೩೫೮ / ಪಂಪಭಾರತಂ ವ|| ಎಂದು ಗುಹಕಂ ಕೈಲಾಸಶೈಲದಲ್ಲೆಡೆಗಳುಮಂ ವಿಕ್ರಮಾರ್ಜುನಂಗೆ ತೋಜುತ್ತುಂ ಬಂದುಉll ಸಾಳ ತಮಾಳ ಕಾನನಭರೋಧೃತ ಸಿಂಧುರಕಂಠಗರ್ಜನಾ ಭೀಳಮನಂಬರೇಚರವಧ್ರಕರಪಲ್ಲವಸಂಚಳಲ್ಲತಾಂ | ದೂಳಮನಾಶ್ರಿತಾದ್ರಿ ನದ ಕೂಳಮನತ್ಯಧರೀಕೃತಾನ್ಮ ಕು ತ್ರೀಳಮನಿಂದುಕಾಂತ ಸುಸಲೀಳಮನೆಯ್ದಿದನಿಂದ್ರಕೀಳಮಂ | ೭೬ ಮll ಕಮಳಾಂತರ್ಗತ ಗಂಧ ಬಂಧು ನಯದಿಂ ಬಂದಪ್ಪಿಕೊಳ್ವಂತ ಗಾ ಆ ಮನಂಗೊಂಡಿರೆ ತೀಡ ಶೃಂಗರುತಿಗಳ ಮಾಂಗಲ್ಯಗೇಯಂಗಳಂ | ದಮನಂದೀಯೆ ಮಡಲ್ಲು ಪೂತ ಲತೆಗಳ ಕೆಯ್ದೆಯು ಪೂನೀಡಲ್ಕ ರ್ಫಮವಂತೆವೋಲಾದುದದಿ ಹರಿಗಂಗಿಷ್ಟಾರ್ಥಸಂಸಿದ್ಧಿಯಂ || ೭೭ ವ| ಆಗಳ ಗುಹಕನಿಂದ್ರಸುತನನಿಂದ್ರಕೀಲನಗೇಂದ್ರದ ಚಂದ್ರಕಾಂತಲಾ ತಲದೊಳಿಪಿ ಬೀಳ್ಕೊಂಡು ಪೋದನಿತ್ತ ವಿಕ್ರಮಾರ್ಜುನಂ ಪರಂತಪಂ ತಪೋನಿಯಮ ನಿಯಮಿತನಾಗಿ ವಿಷಕಂಠನಾದ ಈಶ್ವರನು ಆ ಗೌರಿಯನ್ನು ನಂಬಿಸುವುದಕ್ಕಾಗಿಯೂ ತನ್ನ ವಿಟವಿದ್ಯೆಯನ್ನು ಪ್ರದರ್ಶಿಸುವುದಕ್ಕಾಗಿಯೂ ಗಂಗೆಯನ್ನು ತಲೆಯಲ್ಲಿ ಮರೆಮಾಡಿ ಇಟ್ಟುಕೊಂಡು ಈ ಸ್ಥಳದಲ್ಲಿ ಕವಲೊಡೆದ ಬೇರೆಯ ನದಿಯನ್ನುಂಟುಮಾಡಿದನು. ಅಂದರೆ ತಲೆಯಲ್ಲಿಯೇ ಗಂಗೆಯನ್ನಿಟ್ಟುಕೊಂಡು ಅದನ್ನು ತೊರೆದುಬಿಟ್ಟ ಹಾಗೆ ಅದರ ಕವಲೊಡೆದ ಒಂದೆರಡು ಪ್ರವಾಹವನ್ನು ಹೊರಕ್ಕೆ ಬಿಟ್ಟನು. ವರ ಎಂದು ಗುಹ್ಯಕನು ಕೈಲಾಸಪರ್ವತದ ಎಲ್ಲಾ ಸ್ಥಳಗಳನ್ನೂ ಅರ್ಜುನನಿಗೆ ತೋರುತ್ತ ಬಂದನು. ೭೬. ಮುಂದೆ ಒತ್ತಾಗಿ ಬೆಳೆದ ತೆಂಗು ಮತ್ತು ಹೊಂಗೆಯ ಮರಗಳ ಕಾಡಿನಲ್ಲಿ ಎತ್ತರವಾಗಿ ಬೆಳೆದ ಮದ್ದಾನೆಗಳ ಕೊರಳಿನಿಂದ ಬರುತ್ತಿದ್ದ ಘೀಳಿಡುವಿಕೆಯಿಂದ ಭಯಂಕರವಾಗಿದ್ದರೂ ಆಕಾಶಗಾಮಿಗಳಾದ ಖೇಚರಸ್ತ್ರೀಯರ ಚಿಗುರಿನಂತಿರುವ ಕೈಗಳಿಂದ ಚಲಿಸಲ್ಪಟ್ಟ ಬಳ್ಳಿಗಳ ಉಯ್ಯಾಲೆಯನ್ನುಳ್ಳುದೂ (ತನ್ನ ಔನ್ನತ್ಯದಿಂದ) ಇತರ ಎಲ್ಲ ಪರ್ವತಗಳನ್ನೂ ಬಹು ಕೀಳನ್ನಾಗಿ ಮಾಡಿರುವುದೂ ಚಂದ್ರಕಾಂತಶಿಲೆಯ ಉಚ್ಚವೈಭವವನ್ನುಳ್ಳುದೂ ಆದ ಇಂದ್ರಕೀಲಪರ್ವತವನ್ನು ಅರ್ಜುನನು ಬಂದು ಸೇರಿದನು. ೭೭. ಕಮಲದ ಹೂವಿನಲ್ಲಿರುವ ವಾಸನೆಗೆ ಸ್ನೇಹಿತನಾದ ವಾಯುವು ವಿನಯದಿಂದ ಬಂದು ಆಲಿಂಗನಮಾಡಿಕೊಳ್ಳುವ ಹಾಗೆ ಆಹ್ಲಾದಕರವಾಗಿ ಬೀಸಲು ದುಂಬಿಯ ಶಬ್ದಗಳು ಮಂಗಳವಾದ್ಯದ ಸೊಗಸನ್ನುಂಟುಮಾಡುತ್ತಿರಲು ಹಬ್ಬಿ ಹೂವಿನಿಂದ ಕೂಡಿರುವ ಬಳ್ಳಿಗಳು ಅಲಂಕಾರಮಾಡಿಕೊಂಡು ಕೈಗೆ ನೀರನ್ನು ಕೊಡುವ ಹಾಗೆ ಹೂವನ್ನು ಕೊಡಲು ಅರ್ಜುನನಿಗೆ ಆ ಪರ್ವತವು ಇಷ್ಟಾರ್ಥಸಿದ್ದಿಯನ್ನುಂಟು ಮಾಡುವ ಹಾಗೆ ಕಂಡಿತು. ವll ಆಗ ಗುಹ್ಯಕನು ಅರ್ಜುನನನ್ನು ಶ್ರೇಷ್ಠವಾದ ಇಂದ್ರಕೀಲಪರ್ವತದ ಚಂದ್ರಕಾಂತಶಿಲಾತಲದಲ್ಲಿ ಇಳಿಸಿ ಅವನ ಅಪ್ಪಣೆಪಡೆದು ಹೋದನು. ಈ ಕಡೆ ಶತ್ರುಗಳನ್ನು ಸುಡುವ ಸ್ವಭಾವವುಳ್ಳ ಅರ್ಜುನನು ತಪೋನಿಯಮ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy