SearchBrowseAboutContactDonate
Page Preview
Page 362
Loading...
Download File
Download File
Page Text
________________ ಸಪ್ತಮಾಶ್ವಾಸಂ / ೩೫೭ ಕ೦ll - ಲಳಿತೋತ್ಸವ ಧ್ವಜಾಂಶುಕ ವಿಳಸನಮಂ ಮುಂದೆ ನಿನಗೆ ತೋರ್ಪಂತಿರೆ ಕ || ಹೊಳಿಸಿರ್ದುದು ನೋಡ ಹಿಮಾ ಚಳ ಶಿಖರದ ಮೇಲೆ ಹಾಯ್ದ ಗಂಗಾಸ್ಕೋತಂ | ವ|| ಎಂದು ಗುಹಕಂ ಹಿಮವನಹೀಧರಮಂ ತೋಜುತ್ತುಂ ಬಂದು ಕೈಲಾಸ ಪರ್ವತಮಂ ಕಂಡು ಮt 4 | ಇದು ಕೈಲಾಸಂ ಭವಾನೀಭವನ ನೆಲೆ ಮನೋಜಾತನಂ ಬೂದಿಮಾಡಿ ದಜಿಲ್ ದಕ್ಷಾಧ್ವರಧ್ವಂಸಕನ ನೊಸಲ ಕಣ್ಣಾತನೊಳ್ ತನ್ನ ದೋರ್ಗ | ರ್ವದಗುರ್ವಂ ಪ್ರಾಕಟಂ ಮಾಡುವ ಬಗೆಯೊಳಿದಂ ಪತ್ನಿ ಕಿತ್ತಿ ಪತ್ತೆ ದೂಡಿತ್ತಂ ಮಚ್ಚಿ ಲಂಕಾಧಿಪತಿಗೆ ಬರವಂ ರಾಗದಿಂ ನೀಲಕಂಠಂ || ೭೪ ಚಂll ತೊ ತೊಜಯಂಬ ಮಾತನಿನಿತಿಲ್ಲದೊಡಾಂ ತ್ವಂ ದಲೆಂದೂಡಾ ತೋಣಿಯೊಳೆ ಪೋಯ್ತು ಸೂರುಳನೆ ಸೂರುಳವೇವುವೂ ನಂಬೆನೆಂಬುದುಂ | ಕಣ್ಣಿಗೊರಲಾತನಾತ್ಮ ಎಟತತ್ತಮನುಂಟೊಡತಾಗಿ ಮಾಡಿ ಬಾಂ ದೂಳಿಯನ ಪೊತ್ತು ಗೌರಿಗೆ ಕವಲೊಜಿಗೆಯ್ದಿದ ಪ್ರದೇಶದೊಳ್ || ೭೫ ತುಂಬಿದ ದರಿಗಳಿಂದ ಕೂಡಿ ಮನೋಹರವಾಗಿರುವ ಕಣಿವೆಗಳನ್ನುಳ್ಳುದೂ ಸಿಂಹದ ಅತಿಶಯವಾದ ಶಬ್ದದಿಂದ ಕೂಡಿದ ಗರ್ಜನೆಯನ್ನುಳ್ಳ ಗುಹೆಯನ್ನುಳ್ಳುದೂ ಮದ್ಯಪಾನದ ಅಮಲೇರಿದ ದೇವತೆಗಳ ಮತ್ತು ಕಿಂಪುರುಷಸೀಯರಿಂದ ಪ್ರಾರಂಭಿಸಲ್ಪಟ್ಟ ಸಂಗೀತವನ್ನುಳ್ಳುದೂ ದೇವತೆಗಳು ಮತ್ತು ಸಿದ್ದದಂಪತಿಗಳ ರತಿಕ್ರೀಡೆಯ ವೈಭವದಿಂದ ಮನೋಹರವಾಗಿರುವುದೂ ಆದ ಇದು ಹಿಮವತ್ಪರ್ವತ ಎಂದು ಹೇಳಿದನು. ೭೩. ಅದೋ ನಿನಗೆ ಶುಭೋತ್ಸವಸೂಚಕವಾದ ಬಾವುಟದ ಬಟ್ಟೆಯ ವಿಲಾಸವನ್ನು ನಿನ್ನೆದುರಿಗೆ ತೋರುವಂತೆ ಹಿಮವತ್ಪರ್ವತದ ಶಿಖರದ ಮೇಲೆ ಹರಿಯುತ್ತಿರುವ ಗಂಗಾಪ್ರವಾಹವು ಕಣ್ಣನ್ನು ಆಕರ್ಷಿಸುತ್ತಿದೆ ನೋಡು. ವ|| ಎಂದು ಗುಯ್ಯಕನು ಹಿಮಾಲಯಪರ್ವತವನ್ನು ತೋರಿಸುತ್ತ ಮುಂದೆ ಬಂದು ಕೈಲಾಸಪರ್ವತವನ್ನು ಕಂಡು-೭೪, ಇದು ಕೈಲಾಸಪರ್ವತ; ಪಾರ್ವತೀಪತಿಯ ವಾಸಸ್ಥಾನ, ದಕ್ಷಬ್ರಹ್ಮನ ಯಜ್ಞವನ್ನು ನಾಶಮಾಡಿದ ಈಶ್ವರನ ಹಣೆಗಣ್ಣು ಮನ್ಮಥನನ್ನು ಬೂದಿಮಾಡಿದುದು ಇದರಲ್ಲಿಯೇ, ಶಿವನ ಮುಂದೆ ತನ್ನ ಬಾಹುಬಲದ ಅಹಂಕಾರವನ್ನೂ ಅತಿಶಯವನ್ನೂ ಪ್ರಕಟಿಸುವ ಆಶೆಯಿಂದ ಈ ಪರ್ವತವನ್ನೇ ಬೇರಿನಿಂದ ಕಿತ್ತು ಹೊತ್ತು ಮೇಲಕ್ಕೆತ್ತಲು ಈಶ್ವರನು ತೃಪ್ತನಾಗಿ ಲಂಕಾಧಿಪತಿಯಾದ ರಾವಣನಿಗೆ ಸಂತೋಷದಿಂದ ಇಲ್ಲಿ ವರಪ್ರದಾನ ಮಾಡಿದನು. ೭೫. ನದಿ (ಗಂಗಾನದಿ)ಯೆಂಬ'ಮಾತನ್ನು ತಕ್ಷಣ ಬಿಟ್ಟುಬಿಡು. ಹಾಗಿಲ್ಲವಾದರೆ ನಾನು ಖಂಡಿತ ವಾಗಿಯೂ ನಿನ್ನನ್ನು ಬಿಟ್ಟುಬಿಡುತ್ತೇನೆ ಎಂದು (ಗೌರಿಯು ಸವತಿಮಾತ್ಸರ್ಯದಿಂದ) ಹೇಳಿದಳು. ಶಿವನು ಆ ನಿನ್ನ ಪ್ರತಿಜ್ಞೆಯು ಆ ನದಿಯ ಜೊತೆಯಲ್ಲಿಯೇ ಹೋಯಿತು, ಎಂದನು. ಗೌರಿಯು ಆ ಪ್ರತಿಜ್ಞೆಯದೇನು ನಾನು ನಂಬುವುದಿಲ್ಲ ಎನ್ನಲು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy