SearchBrowseAboutContactDonate
Page Preview
Page 364
Loading...
Download File
Download File
Page Text
________________ ಸಪ್ತಮಾಶ್ವಾಸಂ | ೩೫೯ ಮ|| ಸ || ಭಸಿತಂ ಕರ್ಪೂರ ಕಾಳಾಗರು ಬಹುಳ ರಜಂ ವಲಂ ಕಲ್ಪವೃಕ್ಷ ಪ್ರಸವಂ ಯಜ್ಯೋಪವೀತಂ ಕನಕ ಕಮಳನಾತ್ಕರಂ ನಿಚ್ಚನಿಚ್ಚಂ | ಪೊಸತೆಂಬಂತಾಗೆ ಪಾರ್ಥಂಗೊಸೆದು ತುಡಲುಡಲ್ ಪೂಸಲುಂ ಸಾಲ್ವಿನಂ ಸಾ ಧಿಸಿತುದದಕ್ತಿ ಭಾರಾನತ ವನವನಿತಾವೃಂದಮಾನಂದದಿಂದಂ || 20 ಚoll ಅದಿರದ ಚಿತ್ರಮಳ್ಳದ ಮನಂ ಬಗೆಗೊಳ್ಳದ ಮೋಹಮೆತ್ತಿ ಕ ಟ್ಟಿದ ಜಡೆ ತೊಟ್ಟ ರತ್ನಕವಚಂ ಕೊರಲೊಳ್ ಸಲೆ ಕೋದ ಬಿಲ್ ಪ್ರಯ | ಇದೆ ಬಿಗಿದಿರ್ದರು ಮಿಸುಪ್ಪಸಿಖೇಟಕಮಿಂತಿವೊಂದು ಗುಂ ದದೆ ನಿಲೆ ನೋಟ್ಟಿ ನೋಟಕರ್ಗೆ ಸೌಮ್ಯಭಯಂಕರನಾದನರ್ಜುನಂ || ವ|| ಅಂತು ಪರಾಶರನಂದನನುಪದೇಶದೊಳ್ ತಪನಪ್ರಭಂ ತಪಂಗೆಯ್ಯಲ್ ತಗುಡ ಚoll ಕರಿಣಿಯ ಸೀಯನಪ್ಪ ಮೊಲೆವಾಲೆ ತಗುಳುದು ತತಿಶೋರ ಕೇ ಸರಿ ಹರಿಪೋತಮಂ ಬೆದಲತುಂ ಕರಿಪೋತಮವುಂಡುಗರ್ಚಿ ಕೇ | ಸರಿಣಿಯ ಕೆಚ್ಚಲಂ ತುಡುಕುತುಂ ಪರಿದತ್ತು ಕುರಂಗಯೂಧದೊಳ್ ಬೆರಸಿದುವುದು ಪೆರ್ಬುಲಿಗಳಿಂದ್ರತನೂಜತಪಃಪ್ರಭಾವದಿಂ || 26 eso ನಿಷ್ಠನಾದನು. ೭೮. ಅರ್ಜುನನಲ್ಲುಂಟಾದ ಅತ್ಯತಿಶಯವಾದ ಭಕ್ತಿಯ ಭಾರದಿಂದ ನಮ್ರರಾದ ಅರಣ್ಯಾಭಿಮಾನಿ ದೇವತಾಸ್ತ್ರೀಯರ ಸಮೂಹವು ಅವನಿಗೆ ಪ್ರತಿನಿತ್ಯವೂ ಹೊಸಹೊಸದು ಎನ್ನುವ ಹಾಗೆ ಉಡಲು ತೊಡಲು ಲೇಪನಮಾಡಿಕೊಳ್ಳಲು ಸಾಕಾಗುವಷ್ಟು ವಿಭೂತಿ, ಪಚ್ಚಕರ್ಪೂರ, ಕರಿಯ ಅಗರಿನ ಶ್ರೇಷ್ಠವಾದ ಧೂಳು, ಕಲ್ಪವೃಕ್ಷದ ತೊಗಟೆಯಿಂದ ಮಾಡಿದ ನಾರುಮಡಿ, ಹೊಂದಾವರೆಯ ದಂಟಿನ ನೂಲಿನ ಸಮೂಹದಿಂದ ಮಾಡಿದ ಜನಿವಾರ ಇವುಗಳನ್ನು ಒದಗಿಸಿಕೊಟ್ಟಿತು. ೭೯. ಚಂಚಲವಾಗದ ಬುದ್ಧಿ, ಭಯಪಡದ ಮನಸ್ಸು, ಹೃದಯವನ್ನು ಪ್ರವೇಶಿಸಿದ ಪ್ರೀತಿ (ವಿರಕ್ತಿ), ಎತ್ತಿಕಟ್ಟಿರುವ ಜಡೆ, ತೊಟ್ಟಿರುವ ರತ್ನಖಚಿತವಾದ ಕವಚ (ಮೈಜೋಡು), ಕತ್ತಿನಲ್ಲಿ ವಿಶೇಷವಾಗಿ ಪೋಣಿಸಿಕೊಂಡಿರುವ ಬಿಲ್ಲು, ಪ್ರಯತ್ನ ಪೂರ್ವಕವಾಗಿ ಬಿಗಿದುಕೊಂಡಿರುವ ಎರಡು ಬತ್ತಳಿಕೆ, ಪ್ರಕಾಶಮಾನವಾಗಿರುವ ಕತ್ತಿಗುರಾಣಿಗಳು ಇವು ಸ್ವಲ್ಪವೂ ಊನವಾಗಿರದೆ ನೆಲಸಿರಲು ನೋಡುವವರಿಗೆ ಅರ್ಜುನನು ಸೌಮ್ಯವಾಗಿಯೂ ಭಯಂಕರವಾಗಿಯೂ ಕಂಡನು. ವ| ವ್ಯಾಸ ಮಹರ್ಷಿಯ ಉಪದೇಶದಿಂದ ಸೂರ್ಯನ ಕಾಂತಿಯನ್ನುಳ್ಳ ಅರ್ಜುನನು ತಪಸ್ಸು ಮಾಡಲು ಪ್ರಾರಂಭಿಸಿದನು. ೮೦. ಇಂದ್ರಪುತ್ರನಾದ ಅರ್ಜುನನ ತಪಸ್ಸಿನ ಪ್ರಭಾವ ದಿಂದ ಸಿಂಹದ ಮರಿಗಳು ಹೆಣ್ಣಾನೆಯ ಸಿಹಿಯಾದ ಮೊಲೆಹಾಲಿಗಾಗಿ ಅದರ ಹಿಂದೆಯೇ ಹೋದುವು. ಆನೆಯ ಮರಿಗಳು ಸಿಂಹದ ಮರಿಗಳನ್ನು ಹೆದರಿಸುತ್ತ ಅವಡುಗಚ್ಚಿ (ತುಟಿಯನ್ನು ಕಚ್ಚಿಕೊಂಡು) ಹೆಣ್ಣು ಸಿಂಹದ ಕೆಚ್ಚಲನ್ನು ಹಿಡಿದುಕೊಳ್ಳುತ್ತ ಓಡಿದುವು. ಹೆಬ್ಬುಲಿಗಳು ಜಿಂಕೆಯ ಸಮೂಹದಲ್ಲಿ ಬೆರಸಿಕೊಂಡವು. (ಅರ್ಜುನನ ತಪಃಪ್ರಭಾವದಿಂದ ಕಾಡುಪ್ರಾಣಿಗಳೂ ತಮ್ಮ ಸಹಜವೈರವನ್ನು ತೊರೆದು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy