SearchBrowseAboutContactDonate
Page Preview
Page 359
Loading...
Download File
Download File
Page Text
________________ ೩೫೪) ಪಂಪಭಾರತಂ , ಕ೦ll ಪನ್ನೆರಡು ವರುಷದವಧಿಯು ಮಿಜಯಲ್ ಬಂದುದಹಿತನಿಳೆಯಂ ಕುಡನಾ | ಸನ್ನಂ ಕಾಳೆಗಮಪಿಯಿರೆ ಪನ್ನಗಕೇತನನ ಚಲದ ಕಲಿತನದಳವಂ || ಅನವದ್ಯಂ || ಪರಶುರಾಮನನಂಜಿಸಿ ಬೀರಕ್ಕಾಗರಮಾದ ನದೀಜನೇ ದೊರೆಯನೇದೊರೆಯಂ ಗಳ ಕುಂಭಪೊದ್ದವನಾತನ ಪುತ್ರನೇ | ದೊರೆಯನೇದೊರೆಯಂ ಕೃಪನಂತಾ ಪಾಟಿಯೊಳಂಕದ ಕರ್ಣನೇ ದೊರೆಯನಿಂತಿವರೊರ್ಬರಿತೊರ್ಬರ್ ಗರ್ವಿತರಗಳಮಲ್ಲರೇ || ೬೫ ಕಂ| ಪ್ರಳಯದುರಿ ಕಾಳಕೂಟದ ಗುಳಿಗೆ ಪುರಾಂತಕ ಲಲಾಟನೇತ್ರಾನಳಂ | ದಳವಿಗಮಗ್ಗಳಮವರ್ಗಳ ಮುಳಿಸುಗಳುಂ ಮುಳಿದು ತುಡುವ ದಿವೈಷುಗಳುಂ || ೬೬ ವಗ ಅದು ಕಾರಣದಿಂದವರಂ ಗೆಲ್ಯಾಗಳ ವಿಕ್ರಮಾರ್ಜುನನಲ್ಲದೆ ಗೆಲ್ಲನದಳಂದಾತಂಗೆ ದಿವ್ಯಾಸಂಗಳಂ ಪಡೆಯುದದಂ ಪಡೆವುಪಾಯಮುಮಂ ಮಂತ್ರಮುಮನುಪದೇಶಂಗಯ್ಯ ಬಂದವೆಂದು ಯುಧಿಷ್ಠಿರಂಗೆ ವೇಚ್ಚು ವಿಕ್ರಮಾರ್ಜುನಂಗೆ ಮಂತ್ರಾಕ್ಷರಂಗಳನುಪದೇಶಂಗೆಯ್ದು ಗುಹ್ಯಕನೆಂಬನಂ ಸರಣಮಾತ್ರದೊಳ್ ಬರಿಸಿ ಸಾಹಸಾಭರಣನನಿಂದ್ರಕೀಲನಗೇಂದ್ರಮನಯಿಸಿ ಬರ್ಪುದೆಂದು ಪೇಳ್ವುದುಂ ಧರ್ಮಪುತ್ರನಾ ಮುನೀಂದ್ರಂಗೆ ಸಾಷ್ಟಾಂಗವೆಂಗಿ ಪೊಡವಡೆ ಸ್ಪಷ್ಟಪಡಿಸುವ ಹಾಗೆ ಪುನಃ ಹೀಗೆಂದನು -೬೪, ಇನ್ನೇನು ಹನ್ನೆರಡು ವರ್ಷದ ಗಡುವು ಮುಗಿಯುತ್ತ ಬಂದಿದೆ. ಶತ್ರುವಾದ ಕೌರವನು ರಾಜ್ಯವನ್ನು ತಾನಾಗಿ ಕೊಡುವುದಿಲ್ಲ. ದುರ್ಯೋಧನನ ಹಟದ ಮತ್ತು ಪರಾಕ್ರಮದ ಪ್ರಮಾಣವು ನಿಮಗೆ ತಿಳಿಯದೇ ? ೬೫. ಪರಶುರಾಮನನ್ನು ಹೆದರಿಸಿ ಪರಾಕ್ರಮಕ್ಕೆ ಆವಾಸಸ್ಥಾನವಾದ ಭೀಷ್ಮನು ಸಾಮಾನ್ಯನೇ ? ಕುಂಭಸಂಭವನಾದ ದ್ರೋಣನು ಸಾಮಾನ್ಯನೇ? ಅವನ ಮಗನಾದ ಅಶ್ವತ್ಥಾಮನೇನು ಸಾಮಾನ್ಯನೇ, ಕೃಪನೇನು ಸಾಮಾನ್ಯನೇ? ಅದೇ ಕ್ರಮದಲ್ಲಿ ಶೂರನಾದ ಕರ್ಣನು ಯಾರಿಗೆ ಸಮಾನನು? ಈ ಗರ್ವಿಷ್ಠರಾದ ಇವರಲ್ಲಿ ಒಬ್ಬರಿಗಿಂತೊಬ್ಬರು ಮತ್ತೂ ಶ್ರೇಷ್ಠರು. ೬೬. ಅವರ ಕೋಪಗಳೂ ಕೋಪಿಸಿಕೊಂಡು ಪ್ರಯೋಗಿಸುವ ದಿವ್ಯಾಸ್ತಗಳೂ ಪ್ರಳಯಕಾಲದ ಬೆಂಕಿ ಕಾಳಕೂಟವೆಂಬ ವಿಷದ ಗುಳಿಗೆ ಈಶ್ವರನ ಹಣೆಗಣ್ಣಿನ ಅಗ್ನಿ ಇವುಗಳ ಪ್ರಮಾಣಕ್ಕಿಂತ ಅತಿಶಯವಾದುವು. ವ|| ಆದ ಕಾರಣದಿಂದ ಅವರನ್ನು ಗೆಲ್ಲಬೇಕಾದರೆ ವಿಕ್ರಾಮಾರ್ಜುನನಲ್ಲ ದವನು ಗೆಲ್ಲಲಾರ. ಆದುದರಿಂದ ಅವನನ್ನು ದಿವ್ಯಾಸ್ತಗಳನ್ನು ಗೆಲ್ಲುವಂತೆ ಹೇಳಬೇಕು. ಅದನ್ನು ಪಡೆಯುವ ಉಪಾಯವನ್ನೂ ಮಂತ್ರವನ್ನೂ ಉಪದೇಶಮಾಡು ವುದಕ್ಕಾಗಿಯೇ ಬಂದಿದ್ದೇವೆ ಎಂಬುದಾಗಿ ಧರ್ಮರಾಜನಿಗೆ ಹೇಳಿ ವಿಕ್ರಮಾರ್ಜುನನಿಗೆ ಮಂತ್ರಾಕ್ಷರಗಳನ್ನು ಉಪದೇಶಮಾಡಿದನು. ಗುಹ್ಯಕನೆಂಬುವನನ್ನು ಸ್ಮರಿಸಿಕೊಳ್ಳುವುದರಿಂದಲೇ ಬರಮಾಡಿ ಸಾಹಸಾಭರಣನಾದ ಅರ್ಜುನನನ್ನು ಇಂದ್ರಕೀಲಪರ್ವತವನ್ನು ಸೇರಿಸಿ ಬರುವುದು ಎಂದು ಹೇಳಿದನು. ಧರ್ಮರಾಜನು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy