SearchBrowseAboutContactDonate
Page Preview
Page 360
Loading...
Download File
Download File
Page Text
________________ ೬೭ ಸಪ್ತಮಾಶ್ವಾಸಂ | ೩೫೫ ಪರಸಿ ಪಯೋಧರಪಥಕೊಗೆದನಿತ್ತ ವಿಕ್ರಾಂತತುಂಗನುಂ ಧರ್ಮಪುತ್ರಂಗಂ ವಾಯುಸುತಂಗಂ ಪೊಡವಟ್ಟು ಬೆಸಕೇಳ್ವೆನೆಂದಾಗಲ್ ಪಾಂಚಾಳರಾಜತನೂಜೆಯಿಂತೆಂದಳಕಂ| ಬಗೆಯದೆ ಮಯೋಕಮಂ ಬಗೆ : ಪಗೆವರ ಕಡುವೆರ್ಚನೆನ್ನ ಪೂಣೆಯನೆರ್ದೆಯೊಳ್ | ಬಗ ಮುನಿಯ ಮಂತ್ರಪದಮಂ ಬಗೆ ಕೂಡುಗೆ ನಿನ್ನ ಬಗೆದ ಬಗೆಯೋಳ್ ಪಾರ್ಥಾ || ವ|| ಎಂದು ಬುದ್ಧಿವೇಚ್ಚು ಮನದಟಕಂ ಮನೋವೇಗದಿಂ ಪರಿಯೆ ಸೈರಿಸಲಾಗಿದೆಉll ಬಳ್ಳಳ ನೀಳ ಕಣಲರ ತಿಮೆಯಿಂ ಕರೆಗಣಿ ಬೆಳಡ ಅಳ್ವರಿಯಲ್ಯಮಾಟಿಸಿದೊಡೊಯ್ಯನೆ ಮಂಗಳ ಭಂಗ ಭೀತಿಯಂ | ತಳ್ಳದೆ ಮಾಡ ಬಾಷ್ಪಜಳಮಂ ಕಳದನೀಯ ಸಂಬಳಂ ಗೊಲ್ವವೊಲಾ ತಳೋದರಿಯ ಚಿತ್ರಮನಿಲ್ಕಟಿಗೊಂಡನರ್ಜುನಂ || ೬೮ ವ| ಅಂತು ಯಾತ್ರೋದ್ಯುಕ್ತನಾಗಿ ಗುಹಕನ ಹೆಗಲನೇ ಗಂಧೇಭ ವಿದ್ಯಾಧರಂ ವಿದ್ಯಾಧರನಂತೆ ಗಗನತಳಕೊಗೆದು ಮಹೇಂದ್ರಕೀಲಾಭಿಮುಖನಾದಾಗಚಂ|| ಕಡವಿನ ಕಂಪಡಂಗಿದುದು ಜಾದಿಯ ಕಂಪೊದವಿತ್ತು ಸೋಗೆಯು ರ್ಕುಡುಗಿದುದಂಚೆಯುರ್ಕು ಪೊಸತಾಯ್ತು ಮುಗಿಲ್ಗಳ ಕರ್ಪುಪೀ ನಮೋ | ಗಡಿಸಿದುದಿಂದುಮಂಡಳದ ಕರ್ಪೆಸೆದತ್ತು ಘನಾಗಮಂ ಮೊದ ಅಡ ಶರದಾಗಮಂ ನೆಣಿಯೆ ಪರ್ಬೆ ಸಮಸ್ತ ಮbವಿಭಾಗಮಂ || ೬೯ ಋಷಿಶ್ರೇಷ್ಠನಿಗೆ ಸಾಷ್ಟಾಂಗಪ್ರಣಾಮ ಮಾಡಿ ನಮಸ್ಕರಿಸಲು ವ್ಯಾಸನು ಆಶೀರ್ವದಿಸಿ ಆಕಾಶಪ್ರದೇಶಕ್ಕೆ ತೆರಳಿದನು. ಈಕಡೆ ಪರಾಕ್ರಮದಲ್ಲಿ ಶ್ರೇಷ್ಠನಾದ ಅರ್ಜುನನು ಧರ್ಮರಾಜನಿಗೂ ಭೀಮಸೇನನಿಗೂ ನಮಸ್ಕಾರಮಾಡಿ ಅಪ್ಪಣೆಯನ್ನು ಕೇಳುತ್ತಿದ್ದೇನೆ ಎಂದು ಹೇಳಿದಾಗ ದೌಪದಿಯು ಹೀಗೆಂದಳು-೬೭.ನಿನ್ನ ಶರೀರಸೌಖ್ಯವನ್ನು ಚಿಂತಿಸದೆ ಶತ್ರುಗಳ ಹೆಚ್ಚಿನ ಅಭಿವೃದ್ಧಿಯನ್ನೂ ನನ್ನ ಪ್ರತಿಜ್ಞೆಯನ್ನೂ ಋಷಿಯ ಮಂತ್ರೋಪದೇಶವನ್ನೂ ಹೃದಯದಲ್ಲಿ ಚಿಂತಿಸು, ಅರ್ಜುನ ನಿನ್ನ ಇಷ್ಟಾರ್ಥಸಿದ್ದಿ ಯಾಗಲಿ ವ|| ಎಂದು ಬುದ್ಧಿಹೇಳಿ ಮನಸ್ಸಿನ ಪ್ರೀತಿಯು ಮನೋವೇಗದಿಂದ ಹರಿಯುತ್ತಿರಲು ಸಹಿಸಲಾರದೆ ೬೮, ಅತ್ಯಂತ ದೀರ್ಘವಾಗಿ ಬೆಳೆದಿರುವ ಹೂವಿನಂತಿರುವ ಕಣ್ಣುಗಳ ಮುಚ್ಚಿದ ರೆಪ್ಪೆಯಿಂದ ಎಲ್ಲೆ ಮೀರಿ ಬಿಳಿಯ ಕಾಂತಿ ಸಮುದ್ರವು ಹರಿಯುವುದಕ್ಕೆ ಬಯಸಲು ಅಮಂಗಳವಾಗುತ್ತದೆಯೆಂಬ ಭಯದಿಂದ ಕಣ್ಣೀರನ್ನು ಒರಸಿ ಬ್ರೌಪದಿಯು ಒಂದು ಮುತ್ತನ್ನು ಕೊಡಲು (ಚುಂಬಿಸಲು) ಅವಳಿಂದ ದಾರಿಯ ಬುತ್ತಿಯನ್ನು ಪಡೆಯುವ ಹಾಗೆ ಆ ಕೃಶಾಂಗಿಯಾದ ಬ್ರೌಪದಿಯ ಮನಸ್ಸನ್ನು ಅರ್ಜುನನು ಸೆಳೆದುಕೊಂಡನು. ವರ ಹಾಗೆ ಪ್ರಯಾಣದಲ್ಲಿ ಯಕ್ಷನ ಹೆಗಲನ್ನೇರಿ ಗ೦ಧೇಭವಿದ್ಯಾಧರನಾದ ಅರ್ಜುನನು ವಿದ್ಯಾಧರನಂತೆ ಆಕಾಶಕ್ಕೆ ತೆರಳಿ ಮಹೇಂದ್ರಕೀಲದ ಕಡೆಗೆ ನಡೆದನು. ೬೯. ವರ್ಷಾಕಾಲವು ಕಳೆದು ಶರತ್ಕಾಲವು ಪ್ರಾಪ್ತವಾಗಲು ಕದಂಬಪುಷ್ಪಗಳ ವಾಸನೆಯು ಅಡಗಿಹೋಯಿತು. ಜಾಜಿಯ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy