SearchBrowseAboutContactDonate
Page Preview
Page 358
Loading...
Download File
Download File
Page Text
________________ ಉ|| ನೀಗಿದುದಿಗಳಮ್ಮ ವನವಾಸಪರಿಶ್ರಮಮಾಗಳಾಳವಾ ಸಾಗರ ಮೇಖಳಾವೃತ ಧರಿತ್ರಿಯನೀಗಳಡಂಗಿತಮ್ಮ ಹೈ ದ್ರೋಗಮನೇಕ ಮಂಗಳಪರಂಪರೆಗಳ್ ದೊರೆಕೊಂಡುವೀಗಳೇ ನಾಗದೆ ಪೇ ಭವಚ್ಚರಣಪದ್ಮನಿರೀಕ್ಷಣದಿಂ ಮುನೀಶ್ವರಾ || ಕಂ11 ಆಪಯೋಧಿಯೊಳಗ ತ್ಯಾಪತ್ತೆಂದುಳ್ಳಿಮುಟ್ಟಿ ನಮವೆಮಗೆ ಶರಣ್ | ಸಪ್ತಮಾಶ್ವಾಸಂ |೩೫೩ ಪಾಪಹರ ನೀಮ ಬಗೆದಮ ಗಾಪತ್ಪತಿಕಾರಮಾವುದೀಗಳೆ ಬೆಸಸಿಂ || ವ|| ಎಂಬುದುಮಾ ಮುನೀಂದ್ರನಾಮುಮಂತೆಂದ ಬಂದವೆಂದು ಕಂ ಸುರರ್ಗಮೃತಮನುಂತ ಕಳಾ ತರದಿಂದಿತ್ತಸಿಯನಾದ ಚಂದ್ರನವೋಲ್ ಭೂ | ಭರಮಂ ನನ್ನಿಗೆ ದಾಯಿಗೆ ರ್ಗಿರದಿತ್ತೆಡರೊತ್ತ ನೀನೆ ಧನ್ಯನೆಯಲ್ಲೇ || 20 ೬೧ وه ನೀಂ ಬೇಮಗೆ ಸುಯೋಧನ ನೇಂ ಬೇಜಯ ಕೂಸುತನದೊಳಾದೊಡಮಿನ್ನೇ | ನೆಂಬುದೂ ಪಿರಿದೈವರೊಳಂ ಪಂಬಲ್ ಗುಣಪಕ್ಷಪಾತಮವುದು ನಿಮ್ಮೊಳ್ 11 ವ|| ಎಂದು ತನ್ನ ವರ್ತನಮುಂ ಮೋಹಮನುಂಟುಮಾಡಿ ಮತ್ತಮಿಂತೆಂದಂ ೬೩ ೬೦. ಎಲೈ ಮುನೀಶ್ವರನೇ ನಿಮ್ಮಪಾದಕಮಲದ ದರ್ಶನದಿಂದ ನಮ್ಮವನವಾಸದ ಆಯಾಸಗಳೆಲ್ಲವೂ ಮಾಯವಾದುವು. ಸಾಗರವೆಂಬ ಒಡ್ಯಾಣದಿಂದ ಸುತ್ತುವರಿಯಲ್ಪಟ್ಟ ಭೂಮಂಡಲವನ್ನು ನಾವು ಈಗ ಆಳಿದವರಾದೆವು. ನಮ್ಮ ಹೃದಯಬೇನೆಗಳು ಅಡಗಿದುವು. ನಮಗೆ ಅನೇಕ ಶುಭಪರಂಪರೆಗಳುಂಟಾದುವು. ಇನ್ನೇನುತಾನೆ ಆಗವು ? ೬೧, ಆಪತ್ತುಗಳೆಂಬ ಸಮುದ್ರದಲ್ಲಿ ಅತಿಯಾದ ಅಪಾಯಗಳಿಂದ ಹೆದರಿ ಮುಳುಗಿ ಕೃಶವಾಗುತ್ತಿರುವ ನಮಗೆ ಪಾಪ ಹೋಗಲಾಡಿಸುವ ನೀವೇ ಶರಣು(ಆಶ್ರಯ). ನೀವು ಯೋಚಿಸಿ ಈ ಆಪತ್ತಿಗೆ ಪರಿಹಾರವಾವುದೆಂಬುದನ್ನು ಈಗಲೆ ತಿಳಿಸಿ. ವ|| ಎನ್ನಲು ಆ ಋಷಿಶ್ರೇಷ್ಠನು ನಾವೂ ಅದಕ್ಕಾಗಿಯೇ ಬಂದಿದ್ದೇವೆ ಎಂದನು. ೬೨. (ಯಾವ ಪ್ರತಿಫಲವೂ ಇಲ್ಲದೆ) ಸುಮ್ಮನೆ ದೇವತೆಗಳಿಗೆ ತನ್ನ ಕಲಾಸಮೂಹಗಳಿಂದ ಅಮೃತವನ್ನು ಕೊಟ್ಟು ಕೃಶವಾದ ಚಂದ್ರನ ಹಾಗೆ ಸತ್ಯಕ್ಕಾಗಿ ದಾಯಾದ್ಯರಿಗೆ ಭೂಭಾರವನ್ನು ಕೊಟ್ಟು ಅಪಾಯಕ್ಕೊಳಗಾದ ನೀನೇ ಧನ್ಯನಲ್ಲವೇ? ೬೩. ಬಾಲ್ಯದಿಂದ ನಮಗೆ ನೀವು ಬೇರೆಯಲ್ಲ ಸುಯೋಧನನು ಬೇರೆಯಲ್ಲ ಈಗ ಹೇಳುವುದು ತಾನೆ ಏನಿದೆ. ನಿಮ್ಮ ಅಯ್ದು ಜನರಲ್ಲಿ ಗುಣಪಕ್ಷಪಾತದಿಂದ ನನ್ನ ಮೆಚ್ಚಿಗೆ (ನಿಮ್ಮಲ್ಲಿ ಹೆಚ್ಚಾಗಿದೆ ವ ಎಂದು ಹೇಳಿ ತನ್ನ ನಡತೆಯನ್ನೂ ಮೋಹವನ್ನೂ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy