SearchBrowseAboutContactDonate
Page Preview
Page 339
Loading...
Download File
Download File
Page Text
________________ ೩೩೪) ಪಂಪಭಾರತಂ ಕ೦ll ಮುಡಿಯಂ ಪಿಡಿದೆದವನಂ ಮಡಿಯಿಸಿ ಮತ್ತವನ ಕರುಳ ಏಣಿಲಿಂದೆನ್ನಂ | ಮುಡಿಯಿಸುವಿನೆಗಂ ಮುಡಿಯಂ ಮುಡಿಯಂ ಗಡ ಕೇಳಿಮಾಗಳಾನ್ ನುಡಿ ನುಡಿದಂ || ವ|| ಎಂಬುದುಂ ಭೀಮಸೇನನಾ ಮಾತಂ ಕೇಳು ಸೈರಿಸಲಾಗಿದೆ~ ಉll ಆಲದ ಕೋಪ ಪಾವಕನಿನಣ್ಣನ ನನ್ನಿಯನಿಲ್ಲಿ ಮಾಡುವಂ ಮಾಜವೆನೆನುತ್ತುಮಿರ್ಪ ಪದದಲ್ಲಿಯೆ ನೋಡೆ ಮರುಳೆ ಧೂಪಮಂ || ತೋಜಿದ ಮಾತ್ರೆಯಿಂ ದ್ರುಪದರಾಜಸುತಾ ವಚನಂಗಳಲ್ಲಿ ಮೆ ಯೋತಿ ಮರುತ್ತುತಂ ನುಡಿದನಾ ಸಭೆಯೊಳ್ ನವ ಮೇಘನಾದದಿಂ || ೧೧ ಮll ಮುಳಿಸಿಂದಂ ನುಡಿದೋಂದು ನಿನ್ನ ನುಡಿ ಸಲ್ಲಾರಾಗದೆಂಬರ್ ಮಹಾ ಪ್ರಳಯೋಲೋಪಮ ಮದ್ಧದಾಹತಿಯಿನತ್ಕುಗ್ರಾಜಿಯೊಳ್ ಮುನ್ನಮಾ | ಖಳ ದುಶ್ಯಾಸನನ ಪೊರಳಿ ಬಸಿಅಂ ಪೋಚಿಕ್ಕಿ ಬಂಬಲ್ಲರು ಛಳಿನಾನಿ ವಿಳಾಸದಿಂ ಮುಡಿಯಿಪಂ ಪಂಕೇಜಪತೇಕ್ಷಣೇ | ೧೨ ಮll || ಕುಡಿವಂ ದುಶ್ಯಾಸನೋರಸ್ಥಳಮನಗಲೆ ಪೋಚ್ಚಾರ್ದು ಕೆನ್ನೆತ್ತರಂ ಪೊ ಕುಡಿವೆಂ ಪಿಂಗಾಕ್ಷನೂರುದ್ವಯಮನುರು ಗದಾಘಾತದಿಂ ನುಚ್ಚು ನೂಜಾ | ಗೊಡವೆಂ ತದ್ರತ್ವ ರ ಪ್ರಕಟ ಮಕುಟಮಂ ನಂಬು ನಂಬೆನ್ನ ಕಣ್ಣಿಂ ಕಿಡಿಯುಂ ಕೆಂಡಂಗಳುಂ ಸೂಸಿದಪುವಹಿತರಂ ನೋಡಿ ಪಂಕೇಜವಕ್ತ II ೧೩ ೧೦. ಮುಡಿಯನ್ನು ಹಿಡಿದೆಳೆದವನನ್ನು ಕೊಂದು ಅವನ ಕರುಳಿನ ಜಡೆಯಿಂದ (ಸಮೂಹ) ನನ್ನ ಮುಡಿಯನ್ನು ಮುಡಿಯಿಸುವವರೆಗೂ ಆ ಮುಡಿಯನ್ನು ಪುನಃ ಮುಡಿಯುವುದಿಲ್ಲ; ಕೇಳಿ, ನೀವೆಲ್ಲ ಕೇಳಿ ನಾನು ಪ್ರತಿಜ್ಞೆ ಮಾಡಿದ್ದೇನೆ ಎಂದಳು. ವll ಭೀಮಸೇನನು ಆ ಮಾತನ್ನು ಕೇಳಿ ಸೈರಿಸಲಾರದೆ-೧೧. ಕಡಿಮೆಯಾಗದ ಕೋಪಾಗ್ನಿಯಿಂದ ಅಣ್ಣನ ಸತ್ಯವಾಕ್ಕನ್ನು ಮೀರಲೇ ಬೇಡವೇ ಎನ್ನುತ್ತಿದ್ದ ಸಮಯದಲ್ಲಿಯೇ ಮರುಳಿಗೆ ಧೂಪವನ್ನು ತೋರಿಸಿದ ರೀತಿಯಿಂದ ಬ್ರೌಪದಿಯ ಮಾತುಗಳು ಅಲ್ಲಿ ಕಾಣಿಸಿಕೊಳ್ಳಲು ಭೀಮಸೇನನು ಆ ಸಭೆಯಲ್ಲಿ ಹೊಸಗುಡುಗಿನ ಶಬ್ದದಿಂದ ಹೇಳಿದನು. ೧೨. ಕೋಪದಿಂದ ನೀನು ಆಡಿದ ಮಾತು ಸಲ್ಲಲಿ, ಯಾರು ಬೇಡವೆನ್ನುತ್ತಾರೆ. ಮಹಾಪ್ರಳಯಕಾಲದ ಉಿಗೆ (ಬೆಂಕಿಯ ಕೊಳ್ಳಿ) ಸಮಾನವಾದ ನನ್ನ ಗದೆಯ ಪೆಟ್ಟಿನಿಂದ ಅತಿಭಯಂಕರವಾದ ಯುದ್ಧದಲ್ಲಿ ಮೊದಲು ದುಶ್ಯಾಸನನನ್ನು ಹೊರಳಿಸಿ ಹೊಟ್ಟೆಯನ್ನು ಸೀಳಿ ಹೆಣೆದುಕೊಂಡಿರುವ ಕರುಳಿನಿಂದ ಎಲ್‌ ಕಮಲದಳದ ಹಾಗೆ ಕಣ್ಣುಳ್ಳ ದೌಪದಿಯೇ ವೈಭವದಿಂದ ನಾನೇ ಮುಡಿಯಿಸುತ್ತೇನಲ್ಲವೇ ? ೧೩. ದುಶ್ಯಾಸನನ ಎದೆಯನ್ನು ಅಗಲವಾಗಿ ಹೋಳುಮಾಡಿ ರಕ್ತವನ್ನು ಕುಡಿಯುತ್ತೇನೆ. ಮೇಲೆಬಿದ್ದು ದುರ್ಯೊಧನನ ಎರಡುತೊಡೆಗಳನ್ನೂ ಶ್ರೇಷ್ಠವಾದ ನನ್ನ ಗದೆಯ ಪೆಟ್ಟಿನಿಂದ ಒಡೆಯುತ್ತೇನೆ. ರತ್ನಕಾಂತಿಗಳಿಂದ ಪ್ರಕಾಶವಾದ ಅವನ ಕಿರೀಟವನ್ನು ನುಚ್ಚುನೂರಾಗುವಂತೆ ಪುಡಿಮಾಡುತ್ತೇನೆ. ಬ್ರೌಪದಿ ಈ ನನ್ನ ಮಾತನ್ನು ನಂಬು,
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy