SearchBrowseAboutContactDonate
Page Preview
Page 340
Loading...
Download File
Download File
Page Text
________________ ಸಪ್ತಮಾಶ್ವಾಸಂ | ೩೩೫ ಮ|| ಮುಳಿಸಂ ಮಾಡಿಯುಮೇವಮಂ ಪಡೆದುಮಿನ್ನೀ ಪಂದಗಳ ಪ್ರಾಣದಿಂ ದೊಳರಿನ್ನುಂ ತಲೆ ಮತ್ತಮಟ್ಟೆಗಳ ಮೇಲಿರ್ದಪುವೆಂದಂತೆ ದಲ್ | ಮುಳಿಸಿಲ್ಲಣ್ಣನ ನನ್ನಿಯೆಂಬುದನೆ ಪೇವೇಚ್ಚುಮಿ ಕೌರವ ರ್ಕಳನುಂತಿನ್ನೆಗಮುರ್ಚಿ ಮುಕ್ಕದೆ ಸಡಿಲ್ಲಿ ಭೀಮನೇಂ ಮಾಣ್ಣುಮೇ ll೧೪ ವl ಎಂದು ಪಾಂಚಾಳರಾಜತನೂಜೆಯ ಮನಮನಾ ನುಡಿದು ಮತ್ತಮಿಂತೆಂದಂಸುರಸಿಂಧುಪ್ರಿಯಪುತ್ರ ಕೇಳ್ ಕಳಶಜಾ ನೀಂ ಕೇಳ್ ಕೃಪಾ ಕೇಳ ಮಂ ದರದಿಂದಂಬುಧಿಯಂ ಕಲಂಕಿದಸುರಪ್ರಧ್ವಂಸಿವೋಲ್ ಬಾಹುಮಂ | ದರದಿಂ ವೈರಿಬಲಾಭಿ ಪೂರ್ಣಿಸ ಬಿಗುರ್ತಿ ಕೌರವರ್ ಕೂಡ ನೂ ರ್ವರುಮಂ ಕೊಲ್ವೆನಿದೆನ್ನ ಪೂಣೆ ನುಡಿದಂ ನಿಮ್ಮಿಾ ಸಭಾಮಧ್ಯದೊಳ್ || ೧೫ ಮ|| ವ|| ಎಂದು ವಿಳಯಕಾಳಜಳಧರನಿನಾದದಿಂ ಗಿರಿ ತಾಟಿಸಿದಂತಾನುಂ ನೆಲಂ ಮೊಲಗಿದಂತಾನುಂ ಗಜ ಗರ್ಜಿಸಿ ನುಡಿದು ಮಹಾಪ್ರತಿಜ್ಞಾರೂಢನಾದ ಭೀಮಸೇನನ ನುಡಿಯಂ ಕೇಳು ಕೌರವ‌ ಕಡಲ ನಡುವಣ ಪರ್ವತದಂತಾಡೆ ಕುರುವೃದ್ಧನುಂ ಬುದ್ಧಿವೃದ್ಧನುಮಪ್ಪ ಗಾಂಗೇಯಂ ಧೃತರಾಷ್ಟ್ರಂಗಿಂತೆಂದಂ ಚoll ಭರತ ಯಯಾತಿ ಕುಳ್ಳ ಪುರುಕುತ್ಸ ಪುರೂರವರಿಂದಮಿನ್ನೆಗಂ ಪರಿವಿಡಿಯಿಂದ ಬಂದ ಶಶಿವಂಶಮದೀಗಳಿವಂದಿರಿಂದ ನಿ | ತರಿಸುವುದಕ್ಕುಮೆಂದ ಬಗೆದಿರ್ದೊಡ ಕೀಲೊಳೆ ಕಿಚ್ಚು ಪುಟ್ಟ ಭೋ ರ್ಗರೆದುರಿದಂತೆ ನಿನ್ನ ಮಗನಿಂದುರಿದತ್ತಿದನಾರೋ ಬಾರಿಪರ್ | ೧೬ ನಂಬು; ಶತ್ರುಗಳನ್ನು ನೋಡಿ ನನ್ನ ಕಣ್ಣಿನಿಂದ ಕಿಡಿಯೂ ಕೆಂಡಗಳೂ ಚೆಲ್ಲುತ್ತಿವೆ. ೧೪. ನಮಗೆ ಇಷ್ಟು ಕೋಪವನ್ನುಂಟುಮಾಡಿಯೂ ದುಃಖವನ್ನು ಬರಿಸಿಯೂ ಇನ್ನೂ ಈ ಹೇಡಿಗಳು ಜೀವದಿಂದಿದ್ದಾರೆ. ಇನ್ನೂ ಅವರ ತಲೆಗಳು ಅವರು ಮುಂಡಗಳ ಮೇಲಿವೆ ಎನ್ನುವುದು ಕೋಪವಿಲ್ಲವೆಂದೇ ಅರ್ಥಮಾಡುವುದಿಲ್ಲವೇ? ಅಣ್ಣನ ಸತ್ಯವೆಂಬುದೊಂದು ಇಲ್ಲದಿದ್ದರೆ ಏನು ಹೇಳಿದರೂ ಈ ಕೆರಳಿದ ಭೀಮನು ಇಷ್ಟು ಹೊತ್ತಿಗೆ ಸುಲಿದು ಬಾಯಿಗೆ ಹಾಕಿಕೊಳ್ಳದೆ ಬಿಡುತ್ತಿದ್ದನೇ? ವ|| ಎಂದು ದೌಪದಿಯ ಮನಸ್ಸಮಾಧಾನವಾಗುವ ಹಾಗೆ ನುಡಿದು ಪುನಃ ಹೀಗೆಂದನು-೧೫, ಭೀಷ್ಮರೇ ಕೇಳಿ, ದ್ರೋಣರೇ ಕೇಳಿ, ಕೃಪರೇ ಕೇಳಿ, ಮಂದರಪರ್ವತದಿಂದ ಕ್ಷೀರಸಮುದ್ರವನ್ನು ಕಲಕಿದ ನಾರಾಯಣನ ಹಾಗೆ ನನ್ನ ತೋಳೆಂಬ ಮಂದರದಿಂದ ಘೋಷಿಸುತ್ತಿರುವ ಶತ್ರುಸೇನಾಸಮುದ್ರವನ್ನು ಕಡೆದು ಮದಿಸಿರುವ ಈ ನೂರು ಕೌರವರನ್ನೂ ಒಟ್ಟಿಗೆ ಕೊಲ್ಲುತ್ತೇನೆ. ನಿಮ್ಮ ಈ ಸಭೆಯ ಮಧ್ಯದಲ್ಲಿ ಈ ನನ್ನ ಪ್ರತಿಜ್ಞೆಯನ್ನು ತಿಳಿಸಿದ್ದೇನೆ. ವ|| ಎಂದು ಪ್ರಳಯಕಾಲದ ಸಮುದ್ರಘೋಷದಂತೆ ಪರ್ವತವು ಅಪ್ಪಳಿಸಿದ ಭೂಮಿಯ ಗುಡುಗಿನಂತೆ ಆರ್ಭಟಿಸಿ ಗರ್ಜನೆಮಾಡಿ ನುಡಿದು ಮಹಾಪ್ರತಿಜ್ಞೆಯನ್ನು ಅಂಗೀಕರಿಸಿದ ಭೀಮಸೇನನ ಮಾತನ್ನು ಕೇಳಿ ಕೌರವರು ಸಮುದ್ರಮಧ್ಯದ ಪರ್ವತದಂತೆ ನಡುಗಿದರು. ಕೌರವರಲ್ಲಿ ಹಿರಿಯನೂ ಆದ ಭೀಷ್ಮನು ಧೃತರಾಷ್ಟ್ರನಿಗೆ ಹೀಗೆ ಹೇಳಿದನು. ೧೬. ಭರತ ಯಯಾತಿ ಕುಳ್ಳ ಪುರೂರವರಿಂದ ಹಿಡಿದು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy