SearchBrowseAboutContactDonate
Page Preview
Page 338
Loading...
Download File
Download File
Page Text
________________ ಸಪ್ತಮಾಶ್ವಾಸಂ | ೩೩೩ ಮll ನಲನಂ ನುಂಗುವ ಮೇರುಮಂ ಪಿಡಿದು ಕೀಬಾಶಾಗಜೇಂದ್ರಂಗಳಂ ಚಲದಿಂ ಕಟ್ಟುವ ಸಪ್ತ ಸಪ್ತಿಯನಿಳಭಾಗಕ್ಕೆ ತರ್ಪೋಂದು ತೋ | ಜ್ವಲಮುಂ ಗರ್ವಮುಮು ಪೊಸ್ಮ ಮನದೊಳ್ ಕೋಪಾಗ್ನಿ ಕೆಯ್ಯಣ್ಮಕ ಇಲರೊಳ್ ಬಂದಿರೆ ನೋಡಿದಂ ಕಲುಷದಿಂ ಗಾಂಡೀವಿ ಗಾಂಡೀವಮಂ || ೭ ಕಂll ಪ್ರಕುಪಿತ ಮೃಗಪತಿ ಶಿಶು ಸ ಕಾಶರತಿ ವಿಕಟ ಭೀಷಣ ಭೂ ಭಂಗರ್ || ನಕುಲ ಸಹದೇವರಿರ್ವರು - ಮಕಾಲ ಕಾಲಾಗ್ನಿರೂಪಮಂ ಕಯ್ಯೋಂಡರ್ 11 ವ|| ಅಂತು ವಿಳಯಕಾಲಜಳನಿಧಿಗಳಂತೆ ಮೇರೆದಪ್ಪಲ್ ಬಗೆದ ತನ್ನ ನಾಲ್ವರ್ ತಮ್ಮಂದಿರ ಮುನಿದ ಮೊಗಮಂ ಕಂಡು ತನ್ನ ನುಡಿದ ನನ್ನಿಯ ಕೇಡಂ ಬಗೆದರೆಂದು ಕಟಾಕ್ಷ ವಿಕ್ಷೇಪದಿಂ ಬಾರಿಸಿಮll ಅನಿತೂಂದುರ್ಕಿನೋಳುರ್ಕಿ ಕೌರವ ಖಳರ್ ಪಾಂಚಾಳರಾಜಾಜಾ ನನ ಪದಗ್ನಪನೈಕ ಕಾರಣಪರರ್ ತಾಮಾತೆಯುಂ ಮತ್ತಮ್ | ಇನ ಕಣ್ಣನ್ನೆಗೆ ಮಾಜಿಲಣದ ಸಮಂತಿರ್ದರ್ ವೃಥಾಪುರಂ ತಿನಿತೊಂದಾದೊಡಮೇಂ ಮಹಾಪುರುಷರಾಜ್ಞಾಲಂಘನಂಗೆಯ್ದರೇ || ೯ ವ|| ಆಗಳ ದೌಪದಿ ತನ್ನ ಕೇಶಪಾಶಮಂ ದುಶ್ಯಾಸನಂ ಪಿಡಿದು ತೆಗೆದನೆಂಬ ಸಿಗ್ಗಗಳಂ ಪೆರ್ಚ ಸಭೆಯೊಳಿಂತಂದಳ . ತಿರುಗಿ ಶತ್ರುಗಳ (ಕತ್ತನ್ನು ಹಿಡಿಯುವಂತಾಯಿತು. ೭. ಭೂಮಿಯನ್ನು ನುಂಗುವ, ಮೇರುಪರ್ವತವನ್ನು ಹಿಡಿದು ಕೀಳುವ, ದಿಗ್ಗಜಗಳನ್ನು ಹಟದಿಂದ ಕಟ್ಟುವ, ಸೂರ್ಯನನ್ನು ಭೂಭಾಗಕ್ಕೆ ತರುವ, ಬಾಹುಬಲವೂ ಅಹಂಕಾರವೂ ಚಿಮ್ಮಿ ಹೊಮ್ಮಲು ಕೋಪದ ಬೆಂಕಿಯು ಮಿತಿಮೀರಿ ಹೂವಿನಂತಿದ್ದ ಕಣ್ಣಿನಲ್ಲಿ ಬಂದಿರಲು ಅರ್ಜುನನು ಕೋಪದಿಂದ ತನ್ನ ಗಾಂಡೀವವನ್ನು ನೋಡಿದನು. ೮. ವಿಶೇಷವಾಗಿ ಕೋಪಗೊಂಡಿರುವ ಸಿಂಹದ ಮರಿಗೆ ಸಮಾನರೂ ಅತ್ಯಂತ ವಿಕಟವೂ ಭಯಂಕರವೂ ಹುಬ್ಬಿನ ಗಂಟುಳ್ಳವರೂ ಆದ ನಕುಲ ಸಹದೇವರಿಬ್ಬರೂ ಅಕಾಲದಲ್ಲಿ ಬರುವ ಪ್ರಳಯಾಗ್ನಿರೂಪವನ್ನು ತಾಳಿದರು. ವll ಹಾಗೆ ಪ್ರಳಯಕಾಲದ ಸಮುದ್ರಗಳ ಹಾಗೆ ಎಲ್ಲೆಮೀರಲು ಯೋಚಿಸಿದ ತನ್ನ ನಾಲ್ಕು ತಮ್ಮಂದಿರ ಕೋಪಗೊಂಡ ಮುಖಗಳನ್ನು ನೋಡಿ ಧರ್ಮರಾಜನು ತಾನಾಡಿದ ಸತ್ಯದ ಕೇಡನ್ನು ಯೋಚಿಸಿದ್ದಾರೆಂದು ತಿಳಿದು ಕಣ್ಮನ್ನೆಯಿಂದಲೇ ನಿವಾರಿಸಿದನು. ೯. ಅಷ್ಟೊಂದು ಗರ್ವದಲ್ಲಿ ಉಬ್ಬಿ ದುಷ್ಟಕೌರವರು ಬ್ರೌಪದಿಯ ಮುಖಕಮಲವು ಬಾಡುವುದಕ್ಕೆ ಮುಖ್ಯ ಕಾರಣರಾದರೂ ಅಣ್ಣನಾದ ಧರ್ಮರಾಜನ ಕಣ್ಣನ್ನೆಗೆ ಮೀರಲು ಸಮರ್ಥರಾಗದೆ ಪಾಂಡವರು ಸುಮ್ಮನೆ ಶಾಂತಿಯಿಂದಿದ್ದರು. ಮಹಾಪುರುಷರಾದವರು ಹಿರಿಯರ ಆಜ್ಞೆಯನ್ನು ದಾಟುತ್ತಾರೆಯೇ? ವಗಿ ಆಗ ದುಶ್ಯಾಸನನು ತನ್ನ ಕೂದಲಿನ ಗಂಟನ್ನು ಹಿಡಿದು ಸೆಳೆದನೆಂಬ ನಾಚಿಕೆಯು ವಿಶೇಷವಾಗಿ ಹೆಚ್ಚಲು ಬ್ರೌಪದಿಯು ಸಭೆಯಲ್ಲಿ ಹೀಗೆಂದಳು.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy