SearchBrowseAboutContactDonate
Page Preview
Page 244
Loading...
Download File
Download File
Page Text
________________ ಚತುರ್ಥಾಶ್ವಾಸಂ | ೨೩೯ ವll ಎಂದು ಕಿವಿದುಂ ಬೇಗಮಳೆಮರುಳಂತು ಪಲುಂಬಿ ಪಂಬಲಿಸಿ ಮತ್ತಮಾಕೆಯ ಹಾವ ಭಾವ ವಿಳಾಸ ವಿಭ್ರಮ ಕಟಾಕ್ಷೇಕ್ಷಂಗಳ ಮನಮನೊನಲಿಸೆಯುಮರ್ದಯಂ ಕನಲಿಸೆಯು ಮನಂಗ ಮತಂಗಜ ಕೋಳಾಹಳಾಕುಳೀಕೃತಾಂತರಂಗನಾಗಿಮ! ಜಗಮಂ ಮಾಡಿದ ಪದ್ಮಜಂ ಪಡೆದನಿ ಕನ್ನೆಯಂ ಮಾಡುವ ಲಿಗೆ ಚಂದ್ರಂ ಮಳಯಾನಿಳಂ ಮಳಯಜಂ ನೀರೇಜಮಿಮ್ಮಾವು ಮ | ಲಿಗೆಯಂದಿಂತಿವನಂದಮರ್ದಿನೊಳ್ ತಾನಚಿಯಿಂ ತೋಯ್ದು ಮ ಲ್ಯಗೆ ಸಂದಂಗಜನೆಂಬಜಂ ಪಡೆದನಂತಾ ಕಾಂತಿಯಿಂ ಕಾಂತೆಯಂ || ೭೫ ವ|| ಅಂತಲಸ್ಪಂದಾ ಕಾಂತಯಂ ವಿಧಾತ್ರಂ ಮಾಡುವಂದು ಕೊಡಗಿನ ಕೇಸರಂಗಳನತರಸದೊಳಂ ಶೃಂಗಾರರಸದೊಳಂ ಭಾವಿಸಿ ರಸಸಿದ್ದಮಪ್ಪ ಪೊನ್ನ ಲತೆಯ ಮಯುಮಂ ನೀಲದ ತಲೆನವಿರುಮಂ ಪವಳದ ಬಾಯ್ದೆಯುಮಂ ಮುತ್ತಿನ ಪಲ್ಲುಮಂ ರಾಜಾವರ್ತದ ಸೆಳುಗುರುಮಂ ಧೂಪದ ಸುಯ್ಯುಮಂ ರತಿಯ ಸೌಭಾಗ್ಯಮುಮಂ ಸೀತೆಯ ಸೈರಣೆಯುಮನದ್ರಿಜಾತೆಯ ಶೃಂಗಾರಮುಮಂ ಮನೋಮಥನ ಮದನ ಮೋಹನ ಸಂತಾಪನ ವಶೀಕರಣಂಗಳೆಂಬ ಕಾಮದೇವನಯ್ಯಲರಂಬಿನ ಶಕ್ತಿಗಳುಮನೋಂದುಮಾಡಿ ಲೋಕಮಲ್ಲಂ ಮರುಳಾಡಲೆಂದು ಪಣಾಡಿದನಕ್ಕುಮೆಂದು ಮತ್ತಮಾಕೆಯ ನೋಡಿದ ನೋಟಮಂ ಭಾವಿಸಿ ಜ್ಞಾನಶೂನ್ಯನಾದಂತೆ ಹಲುಬಿ ಹಂಬಲಿಸಿ ಪುನಃ ಹಾವ, ಭಾವ, ವಿಳಾಸ, ವಿಭ್ರಮ, ಕಟಾಕ್ಷ ದೃಷ್ಟಿಗಳು ಮನಸ್ಸನ್ನು ಒಲಿಸಿಯೂ ಎದೆಯನ್ನು ಕಲಕಿಯೂ ಮನ್ಮಥನೆಂಬ ಆನೆಯಿಂದ ಕೋಳಾಹಳ ಮಾಡಲ್ಪಟ್ಟ ಮನಸ್ಸುಳ್ಳವನಾಗಿ ೭೫. ಲೋಕವನ್ನೇ ಸೃಷ್ಟಿಸಿದ ಬ್ರಹ್ಮನು ಈ ಕನೈಯನ್ನು ಸೃಷ್ಟಿಸಿರಲಾರ; ಇಷ್ಟು ಕಾಂತಿಯುಕ್ತಳಾದ ಈ ಕನ್ನೆಯನ್ನು ಮನ್ಮಥನೆಂಬ ಬ್ರಹ್ಮನು ಸೃಷ್ಟಿಸುವಾಗ ಚಂದ್ರ, ಮಲಯಮಾರುತ, ಶ್ರೀಗಂಧ, ತಾವರೆ, ಸಿಹಿಮಾವು, ಮಲ್ಲಿಗೆ ಇವುಗಳನ್ನು ತನಗೆ ತೃಪ್ತಿಯಾಗುವವರೆಗೆ ಒಟ್ಟುಗೂಡಿಸಿ, ಪ್ರೀತಿಯಿಂದ ಅಮೃತದಲ್ಲಿ ನೆನೆಯಿಸಿ ಅವಳನ್ನು ಸೃಷ್ಟಿಸಿರಬೇಕು. ವ ಹಾಗಿಲ್ಲದ ಪಕ್ಷದಲ್ಲಿ ಈ ಕಾಂತೆಯನ್ನು ಬ್ರಹ್ಮನು ಮಾಡುವರೆ ಬೆಟ್ಟದಾವರೆಯ ಎಸಳುಗಳನ್ನು ಅಮೃತರಸದಲ್ಲಿಯೂ ಶೃಂಗಾರರಸದಲ್ಲಿಯೂ ನೆನೆಯಿಸಿ ರಸವಿದ್ಯೆಯಿಂದ ಸಿದ್ಧವಾಗಿರುವ ಚಿನ್ನದ ಬಳ್ಳಿಯಂತಿರುವ ಮೈಯನ್ನೂ ಕಪ್ಪಗಿರುವ ತಲೆಗೂದಲನ್ನೂ ಹವಳದಂತಿರುವ ತುಟಿಯನ್ನು ಮುತ್ತಿನಂತಿರುವ ಹಲ್ಲನ್ನೂ ಎಳೆನೀಲದಂತಿರುವ ತೆಳುವಾದ ಉಗುರುಗಳನ್ನೂ ಧೂಪದ ವಾಸನೆಯಿಂದ ಕೂಡಿದ ಉಸಿರನ್ನೂ ಸೀತಾದೇವಿಯ ಸಹನ ಸ್ವಭಾವವನ್ನೂ ಗೌರೀದೇವಿಯ ಶೃಂಗಾರವನ್ನೂ ಮನ್ಮಥನ ಮನೋಮಥನ (ಮನಸ್ಸನ್ನು ಕಲಕುವಿಕೆ) ಮದನ (ಕಾಮೋದ್ರೇಕವನ್ನುಂಟುಮಾಡುವಿಕೆ) ಮೋಹನ (ಪರವಶವನ್ನಾಗಿಸುವಿಕೆ) ಸಂತಾಪನ (ದುಃಖವನ್ನುಂಟುಮಾಡುವಿಕೆ) ವಶೀಕರಣ (ತನ್ನದನ್ನಾಗಿ ಮಾಡಿಕೊಳ್ಳುವಿಕೆ) ಎಂಬ ಅಯ್ತು ಪುಷ್ಪಬಾಣಗಳ ಶಕ್ತಿಗಳನ್ನು ಒಂದುಗೂಡಿಸಿ ಲೋಕವನ್ನೆಲ್ಲ ಹುಚ್ಚು ಮಾಡುವುದಕ್ಕೋಸ್ಕರ ಮೂರ್ತಿಯನ್ನಾಗಿ ಮಾಡಿರಬೇಕು ಎಂದು ಭಾವಿಸಿ ಪುನಃ ಆಕೆಯ ನೋಟದ ನೋಟವನ್ನು ಮನಸ್ಸಿನಲ್ಲಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy