SearchBrowseAboutContactDonate
Page Preview
Page 243
Loading...
Download File
Download File
Page Text
________________ ೨೩೮ / ಪಂಪಭಾರತಂ ವ|| ಎಂದು ತನ್ನ ಮನಮುಮನರ್ದಯುಮನುಜ ಸೆಳೆವಿಡಿದಿರ್ದಪೂರ್ವ ರೂಪಯ ರೂಪುಮಂ ಮನದೊಳೆ, ಬಗೆದು ಭಾವಿಸಿ ಮತ್ತಮಿಂತೆಂದಂಚಂ|| ಕುಸುರಿಯ ರೂಪನೆಯ ಪೊಗಬಲ್ಕಚಿಯಂ ನಡು ಪುರ್ವು ಬಾಸೆ ಕ ಸಗೆಯನುಂಟುಮಾ ಜಘನಂ ಬೆಳರ್ವಾಯ್ ಮೋಲೆಗಳ ಕದ೦ಪುಗು | ರ್ವಸಿಆನೆ ನೋಡ ಮೊಕ್ಕಳಮದಾರ್ ನಡೆ ನೋಡಮಂತುಮಿಂತುಂ ಮೂ ಅಸಿಯವು ಮೂಟು ದೊಡ್ಡಿದುವು ಮೂಡ ತಳ್ಳಿದುವೆಂಬುಜಾಕ್ಷಿಯಾ ||೭೨ ಕಂ| ಮೃಗಶಿಶುನೇತ್ರಯ ನಡುವೆರ್ದ ಯುಗುರ್ಗಳ್ ಕರಮಸಿದು ಕನಕ ಕಾಂಚೀ ನಿನದ | ಪ್ರಗಣಿತಮಗಲ್ಲ ನಲ್ಗಳ ಜಗನಮಿದನ್ನೆರ್ದೆಯನೆಂತು ಪೊಕ್ಕಳಿಪುವುದೋ || ವಗ ಎಂದು ಸೈರಿಸದೆಮನ ಮೊಲೆಗಳ್ ಬಟ್ಟಿದುವಾಗಿ ಕರ್ಗಿದ ಕುರುಳ್ ಕೊಂಕಾಗಿ ಕಣೆ ನೀ ಛಲರ್ಗಳ್ ಚಪಳಂಗಳಾಗಿ ಜಘನಂ ಕಾಂಚೀ ಕಳಾಪ ಪ್ರಭೋ | ಜೈಲಮುಡ್ಡ ಪ್ರಮುಮಾಗಿ ತಾಮಲೆಗೆ ಮಧ್ಯಸ್ಟಂಗಳಾಗಿರ್ದುವ ಕಲೆಯ ತಕ್ಕುದೆ ಕೆನ್ನಮಾ ತ್ರಿವಳಿಗಳೆನ್ನಂ ಸರೋಜಾಕ್ಷಿಯಾ || ೭೪ ಅಧೀನದಲ್ಲಿರುವ ವಸ್ತು ಎಂದು ಹೇಳಲಾಗುವುದಿಲ್ಲವೇ? ವ| ಎಂದು ತನ್ನ ಮನಸ್ಸನ್ನೂ ಹೃದಯವನ್ನೂ ಪೂರ್ಣವಾಗಿ ಸೆರೆಹಿಡಿದಿದ್ದ ಅಪೂರ್ವ ಸೌಂದರ್ಯದಿಂದ ಕೂಡಿದ ಆಕೆಯ ರೂಪವನ್ನು ತನ್ನ ಮನಸ್ಸಿನಲ್ಲಿ ಯೋಚಿಸಿಕೊಂಡು ಪುನಃ ಭಾವಿಸಿ ಹೀಗೆಂದನು-೭೨. ಹೂವಿನ ಸೂಕ್ಷ್ಮ ಕೇಸರಗಳಂತಿರುವ ಅವಳ ಸೌಂದರ್ಯವನ್ನು ಹೊಗಳಲು ನನಗೆ ಶಕ್ಯವಿಲ್ಲ. ಇಷ್ಟುಮಾತ್ರ ಹೇಳಬಲ್ಲೆ : ಅವಳ ಸೊಂಟ, ಹುಬ್ಬು, ಹೊಟ್ಟೆಯ ಮೇಲಿನ ಕೂದಲಿನ ಸಾಲು, ಕಣ್ಣು, ಹಬ್ಬವನ್ನುಂಟುಮಾಡುವ ಪಿತ್ರೆಗಳು, ಬೆಳ್ಳಗಿರುವ ಬಾಯಿ, ಮೊಲೆಗಳು, ಕೆನ್ನೆ, ಉಗುರು, ಹೊಟ್ಟೆ ಇವುಗಳನ್ನು ಯಾರಾದರೂ ದೃಷ್ಟಿಸಿ ನೋಡಿದರೂ ಕಮಲಾಕ್ಷಿಯಾದ ಆ ಸುಭದ್ರೆಯ (ಮೇಲೆ ನಿರೂಪಿಸಿರುವ) ಅಂಗಗಳಲ್ಲಿ ಮೂರು ಕೃಶವಾದುವು, ಮೂರು ದಪ್ಪವಾದುವು, ಮೂರು ತೆಳುವಾದುವು. ೭೩. ಹುಲ್ಲೆಯ ಮರಿಯ ಕಣ್ಣುಗಳಂತೆ ಕಣ್ಣುಳ್ಳ ಸುಭದ್ರೆಯ ಸೊಂಟ, ಎದೆ, ಉಗುರುಗಳು ವಿಶೇಷ ತೆಳುವಾಗಿರುವುವು. ಚಿನ್ನದ ಡಾಬಿನ ಸದ್ದಿನ ಸಮೂಹವಿಲ್ಲದ ಪ್ರಿಯೆಯ ಜಘನಗಳು ನನ್ನ ಹೃದಯವನ್ನು ಪ್ರವೇಶಿಸಿ ಪ್ರೀತಿಯನ್ನುಂಟುಮಾಡುತ್ತಿವೆಯೋ? ವll ಎಂಬುದಾಗಿ ಸೈರಿಸಲಾರದೆ-೭೪. ಅವಳ ದುಂಡುಮೊಲೆಗಳು ಕಪ್ಪಾದ ಕುರುಳುಗಳು ಕಣ್ಣಿನವರೆಗೆ ಕೊಂಕಾಗಿಯೂ ಉದ್ದವಾಗಿಯೂ ಬೆಳೆದು ಹೂವಿನಂತಿರುವ ಚಂಚಲವಾದ ಕಣ್ಣುಗಳು ಡಾಬಿನ ಕಾಂತಿಯ ಸಮೂಹದಿಂದ ಕೊಬ್ಬಿ ಬೆಳೆದ ಜಘನಗಳು ನನ್ನನ್ನು ಪೀಡಿಸುವುದಂತಿರಲಿ; ಕಮಲದಂತಿರುವ ಆ ಸುಭದ್ರೆಯ ಮಧ್ಯಪ್ರದೇಶದ ತ್ರಿವಳಿಗಳು ನನ್ನ ಮನಸ್ಸನ್ನು ವಿಶೇಷವಾಗಿ ಕಲಕಲು ಯೋಗ್ಯವಾಗಿವೆ. ಎಂಬುದಾಗಿ ಸ್ವಲ್ಪ ಹೊತ್ತು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy