SearchBrowseAboutContactDonate
Page Preview
Page 245
Loading...
Download File
Download File
Page Text
________________ ೨೪೦ / ಪಂಪಭಾರತಂ ಚಂll ನೆಗೊಳೆ ಗಾಡಿ ನೋಬ್ಬ ಬಗೆ ಬರ್ಪುದುಮಾನ ದಲಂದು ದಂತಿಯಂ ನಿಟಿಸಿ ಮರಲ್ಲು ನೋಡುವುದುಮೆನ್ನುಮನಾ ಸತಿ ಸೋಲದತ್ತ ಮ | ತೆಅಗಿ ಬಬಿಲ್ಲು ಜೋಲ್ವಳಿಪಿ ನೋಡಿದಳಂತೆಲೆ ಸತ್ತ ಪೊತ್ತ ಕ ಇಳೆಯದ ಬೆಳ್ಳನಿನದೆಂ ಧವಳಾಕ್ಷಿಯ ನೋಟದಂದಮಂ ೭೬ ಹರಿಣೀಪುತ || ದಳಿತ ಕಮಲಚ್ಚಾಯಾಟೋಪಂ ಮನೋಜ ರಸ ಪ್ರಭಾ ವಳಯ ನಿಳಯಂ, ಪೋದದ್ದೂ ವಿಭ್ರಮಂ ಮುಕುಳೀಕೃತಂ || ಲಳಿತ ಮಧುರಂ ಲಜ್ಞಾಳಂ ಸರಾಕುಳಿತಂ ಮನಂ ದಳಿತಮಪಸನ್ನುಗ್ಗಂ ಸಿಗ್ನಂ ವಿಲೋಕನಮೋಪಳಾ | ಚಂt ಉಡಮೊಗಮೆಂಬ ತಾವರೆಯ ನೀಳ್ಗಳೊಳ್ ಮಣಿದುಂಬಿ ಪಾಲ್ಗೊಡಂ ಬಡನೊಳಕೊಂಡು ಕಣಲರ ಬೆಳುಗಳಾಲಿಯ ಕಟ್ಟಿನೊಳ್ ಪೊದ | ಳೊಡನೊಡನೋಡುವಟ್ಟೆನಗೆ ಸಂತಸಮಂ ಮಜುಕಕ್ಕೆ ಮಾಗ್ರೂಡೀ ನಡೆಗಿಡ ಸತ್ವಮಂ ತಮಮುಮಂ ಕಡೆಗಣೋಳೆ ಕಂಡೆನೋಪಳಾll ೭೮ ಚಂll ಒದವಿದ ಬೇಟವನ್ನೊಡೆನಗಳಗಂ ಬಗೆವೇಡನ್ನ ಮೇ ಳದ ಕೆಳೆಯರ್ಕಳಿಲ್ಲವಳುಮಪ್ರೊಡ ಜನಮತ್ತೆ ನಾಣ ಕಾ | ಪದು ಪಿರಿದೋತು ಮಾತಡಕಲೊಂದಿದ ದೂದವರಿಲ್ಲ ನೆಟ್ಟನ ಪುದಳನದಿಂತರರುದಿತಂ ವಲವನ್ನೊಲವಿಂದುವಯಾ || ೭೯ - ೭೭ ಭಾವಿಸಿಕೊಂಡು ೭೬. ಅವಳ ಸೌಂದರ್ಯವು ನನ್ನನ್ನು ಪೂರ್ಣವಾಗಿ ಆಕರ್ಷಿಸಿತು. ನಾನೇ ಆ ಆನೆಯನ್ನು ನಿಲ್ಲಿಸಿ (?) ಪುನಃ ಅವಳನ್ನು ನೋಡಿದೆನು. ಆ ಸ್ತ್ರೀಯು ನನ್ನನ್ನೂ ಪ್ರೇಮದ ಕಡೆಗೆ ಬಾಗಿಸಿ ತಾನೂ ನನಗೆ ಸೋತು ಪ್ರೀತಿಯಿಂದ ನೋಡಿದಳು. ಬೆಳ್ಳಗಿರುವ ಕಣ್ಣುಳ್ಳ ಆ ಸುಭದ್ರೆಯ ದೃಷ್ಟಿಯ ಮರ್ಮವನ್ನು ತಿಳಿಯದ ಜ್ಞಾನ ಶೂನ್ಯನಾದ ಬೆಪ್ಪನು ನಾನಲ್ಲ, ೭೭. ಪ್ರಿಯಳಾದ ಸುಭದ್ರೆಯ ನೋಟವು ಅರಳಿದ ಕಮಲದ ಬಣ್ಣವುಳ್ಳದ್ದು; ಪ್ರೇಮರಸದ ಕಾಂತಿಸಮೂಹಕ್ಕೆ ಆವಾಸಸ್ಥಾನವಾದುದು. ಎತ್ತಿದ ಹುಬ್ಬಿನ ವೈಭವವುಳ್ಳದ್ದು; ಮೊಗ್ಗಾಗಿ ಮಾಡಲ್ಪಟ್ಟುದು; ಸುಂದರವೂ ಮಧುರವೂ ಆದುದು; ಲಜ್ಜೆಯಲ್ಲಿ ಆಸಕ್ತವಾದುದು; ಮನ್ಮಥನಿಂದ ಬಾಧಿಸಲ್ಪಟ್ಟುದು; ಮನಸ್ಸನ್ನು ಸೀಳಿರುವುದು; ಮುಗ್ಧತೆಯಿಲ್ಲದುದು (ಸರಳವಾದುದು) ನಯವಾದುದು. ೭೮. ಬಾಗೆಯ ನಕ್ಷತ್ರದ ಮುಖ ಎಂಬಂತಿರುವ ಅವಳ ಮುಖವೆಂಬ ತಾವರೆಯ ದೀರ್ಘವಾದ ಎಸಳುಗಳಲ್ಲಿ ಮರಿದುಂಬಿಯು ಹೋಗಿ ಸೇರಿ ಸಮನ್ವಯ ಗೊಂಡಿರುವಂತೆ ಹೂವಿನಂತಿರುವ ಅವಳ ಕಣ್ಣಿನ ಬಿಳಿಯ ಬಣ್ಣವು ಗುಡ್ಡೆಯ ಕಪ್ಪು ಬಣ್ಣದಲ್ಲಿ ಹೊಂದಿಕೊಂಡು ಅವಳನ್ನೇ ನೋಡುತ್ತಿರುವ ನನಗೆ ಸಂತೋಷವನ್ನೂ ದುಃಖವನ್ನೂ ಸ್ಥಿರೀಕರಿಸಿರುವುದರಿಂದ ನಾನು ಅವಳ ಕಡೆಗಣ್ಣಿನಲ್ಲಿ ಸತ್ವತಮೋಗುಣ ಗಳನ್ನು ಏಕತ್ರ ನೋಡುತ್ತಿದ್ದೇನೆ.* ೭೯. ನನಗೆ ಈಗ ಉಂಟಾಗಿರುವ * (ಈ ಪದ್ಯದ ಅನ್ವಯವೂ ಅರ್ಥವೂ ಕ್ಲಿಷ್ಟವಾಗಿದೆ)
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy