SearchBrowseAboutContactDonate
Page Preview
Page 242
Loading...
Download File
Download File
Page Text
________________ ಚತುರ್ಥಾಶ್ವಾಸಂ | ೨೩೭ ವಿಕ್ರಮಾರ್ಜುನನುಮೋಲಗಂ ಪರೆದಿಂಬಟೆಯಂ ತನ್ನ ಪವಡಿಸುವ ಮಾಡಕೊಡನೊಡ ನೋಲಗಿಸುತ್ತುಂ ಬಂದ ಪಂಡಿತರ್ಕಳುಮನುಚಿತ ಪ್ರತಿಪತ್ತಿಗಳಿಂ ವಿಸರ್ಜಿಸಿ ಸುಭದ್ರೆಯ ರೂಪು ಕಣ್ಣ ಪಾಪೆಯಂತೆ ಕಣೋಳೆ ತೊಲೆ ಕಣ್ಮುಚ್ಚದ ತನ್ನ ಜಸದಂತೆ ಪಸರಿಸಿದಚ್ಚವಳಿಂಗಳನಾಕೆಯ ಕಣ್ಣಳ ಬೆಳ್ಳಿನ ತಳರ್ಪೆನುತ್ತುಂ ಪಳ್ಳಿಸಿ ಚಂದ್ರನಂ ನೋಡಿಚಂ।। ಪ್ರಿಯ ಸತಿಯಾನನೇಂದುವೊಳಮಿಂದುವೊಳಂ ಬಿದಿ ಮುನ್ನಮಾವುದಂ ನಯದೊಳೆ ನೋಡಿ ಮಾಡಿದನದಾವುದನೆಂದಡೆಯ ನಾಡೆ ಸಂ | ದಯಮದು ನೀಳ ನೀರಜ ವನಂಗಳ ಚೆಲ್ಲುಗಳೆಂಬುವಾ ಲತಾಂ ಗಿಯ ಕಡೆಗಣ್ಣ ಬೆಳ್ಳುಗಳ ಸಿಲ್ಕಿದ ಸಿಲ್ಕಿನ ಸಿಲ್ಕಿವಲ್ಲವೇ || ವ|| ಅದಲ್ಲದೆಯುಂ evoll ಆ ನವ ಮಾಳಿಕಾ ಕುಸುಮ ಕೋಮಳೆ ರಾಗ ರಸ ಪ್ರಪೂರ್ಣಂ ಚಂ ದ್ರಾನನ ಲಕ್ಷ್ಮಿ ಯಿಂ ನಭದೊಳಿರ್ದಮೃತಾಂಶುವಿನುದ್ಧಕಾಂತಿ ಸಂ | ತಾನಮನಾವಗಂ ತನಗೆ ಮಾಡಿದಳೆಂದೊಡೆ ತಹಾಂತರೋ ದ್ಯಾನಸರಸ್ಸರೋಜರುಚಿಯೆಂಬುದಿದಾಕೆಯ ಕೆಯ್ಯದನ್ನಿರೇ। 20 20 ಏನೂ ಚಿಂತಿಸಬೇಡ. ನಿನ್ನ ಇಷ್ಟಾರ್ಥವನ್ನು ಇಷ್ಟಾರ್ಥದಂತೆಯೇ ತೀರಿಸುತ್ತೇನೆ ಎಂದು ಅನೇಕ ರೀತಿಯ ಮಾತಿನ ಚಮತ್ಕಾರಗಳಿಂದ ಅವಳ ಮನಸ್ಸು ತೃಪ್ತಿಪಡುವಂತೆ ನುಡಿಯುತ್ತಿರಲು ಈ ಕಡೆ ವಿಕ್ರಮಾರ್ಜುನನಾದ ಅರಿಕೇಸರಿಯು ಸಭೆಯು ವಿಸರ್ಜನೆಯಾದ ಬಳಿಕ ಮಲಗುವ ಮನೆಗೆ ಬಂದನು. ತನ್ನ ಜೊತೆಯಲ್ಲಿಯೇ ಅನುಸರಿಸಿ ಬರುತ್ತಿದ್ದ ಪಂಡಿತರುಗಳನ್ನು ಉಚಿತವಾದ ಸತ್ಕಾರಗಳಿಂದ ವಿಸರ್ಜನೆ ಮಾಡಿದನು. ಸುಭದ್ರೆಯ ಸೌಂದರ್ಯವು ತನ್ನ ಕಣ್ಣಿನಲ್ಲಿ ತನ್ನ ಕಣ್ಣಿನ ಗುಡ್ಡೆಯಂತೆಯೇ ಸುತ್ತಾಡುತ್ತಿರಲು ಕಣ್ಣನ್ನು ಮುಚ್ಚದೆ ತನ್ನ ಯಶಸ್ಸಿನಂತೆ ಪ್ರಸರಿಸಿದ್ದ ಸ್ವಚ್ಛವಾದ ಬೆಳುದಿಂಗಳನ್ನು ಆಕೆಯ ಕಣ್ಣುಗಳ ಬಿಳಿಯ ಬಣ್ಣದ ಚಲನೆಯೆಂದೇ ಭಾವಿಸಿ ಹೆದರಿದನು. ಚಂದ್ರನನ್ನು ನೋಡಿ ೭೦. ಚಂದ್ರನೂ ಪ್ರಿಯಸತಿಯಾದ ಸುಭದ್ರೆಯ ಮುಖಚಂದ್ರನೂ ಒಂದೇ ರೀತಿಯಲ್ಲಿವೆ. ಬ್ರಹ್ಮನು ಇವುಗಳಲ್ಲಿ ಯಾವುದನ್ನು ಮಾದರಿಯಾಗಿ ಮೊದಲು ಮಾಡಿದನು.? ತಿಳಿಯುವುದಕ್ಕೆ ಸಂದೇಹವಾಗಿದೆ. ಕನ್ನೈದಿಲೆಯ ತೋಟದ ಸೌಂದರ್ಯವೆಂಬುದು ಲತಾಂಗಿಯಾದ ಆ ಸುಭದ್ರೆಯ ಕಡೆಗಣ್ಣುಗಳ ಬಿಳಿಯ ಕಾಂತಿಯಲ್ಲಿ ಸಿಕ್ಕಿ ಹೆಣೆದುಕೊಂಡಿರುವ ಬಿಡಿಸಲಾಗದ ಸಿಕ್ಕಲ್ಲವೇ? ವ! ಅದೂ ಅಲ್ಲದೆ-೭೧. ಆ ಹೊಸದಾದ ಪುಷ್ಪಮಾಲಿಕೆಯ ಹೂವಿನಂತೆ ಕೋಮಲವಾಗಿರುವ ಆ ಸುಭದ್ರೆಯು ತನ್ನ ಪ್ರೀತಿರಸದಿಂದ (ಕೆಂಪು ಬಣ್ಣದಿಂದ) ತುಂಬಿದ ಮುಖಚಂದ್ರನ ಕಾಂತಿಯಿಂದ ಆಕಾಶದಲ್ಲಿರುವ ಚಂದ್ರನ ಉತ್ತಮವಾದ ಕಾಂತಿಯ ಸಮೂಹವನ್ನು ತನ್ನದ್ದನ್ನಾಗಿ ಮಾಡಿಕೊಂಡಿದ್ದಾಳೆ ಎನ್ನುವಾಗ ಅವಳಿರುವ ಮನೆಯ ಉದ್ಯಾನದಲ್ಲಿರುವ ಕೊಳಗಳ ತಾವರೆಯ ಕಾಂತಿಯು ಆಕೆಯ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy