SearchBrowseAboutContactDonate
Page Preview
Page 241
Loading...
Download File
Download File
Page Text
________________ ೨೩೬ / ಪಂಪಭಾರತಂ ಚoll ಮನಸಿಜನಂಬರಲ್ಲ ಪೊಸ ಮಲ್ಲಿಗೆ ತೆಂಕಣ ಗಾಳಿಯೆಂಬಿವಿಂ ತನುಬಲದಿಂದವೆನ್ನನಲೆದಪ್ಪುವವೆನ್ನನೆ ಪೆಟ್ಟುವರ್ಚಿ ಚಂ | ದನ ಬಲದಿಂದಮನ್ನ ನಲೆದಪುವದರ್ಕೆನಗೀಗಳೊಂದಿ ಚಂ ದನ ಬಲಮೊಳ್ಳಿತಾಗಿ ಸಲೆಯಿಲ್ಲದೊಡಾವುದುಮೊಳ್ಳಿಕೆಯ್ದುಮೇ || ೬೮ ವ|| ಎಂದು ಮನದ ಮಲಕಮುಮನೆರ್ದೆಯ ಕುದಿಪಮುಮಂ ಬಗೆಯ ಕುಜೆಪಮುಮಂ ಮೆಯ್ಯ ಬಡತನಮುಮನಯ ತೋಟಿ ನುಡಿದೊಡೆ ರಾಜಹಂಸಿ ಮಾನಸ ಸರೋವರಮನಲ್ಲದೆ ಪಂತನೇಕೆ ಬಯಸುಗುಂ ಕಳಹಂಸಗಮನೆಯಾ ಸುರತಮಕರಧ್ವಜನನಲ್ಲದೆ ಪೆಂತನೇಕೆ ಬಯಸುಗುಮೆಂದು ಮನದೊಳೆ ಮಂತಣಮಿರ್ದು ಬಗೆಯೊಳೆ ಗುಡಿಗಟ್ಟಿ ಸಂತಸಂಬಟ್ಟಂತೆಂದಳ್ ಮ|| ನನೆಯಂಬಂ ತೆಗೆದೆಚ್ಚನಂಗಜನ ತಪ್ಪೇನಾನುಮಂ ತೋ ಕಾ ನಿತಂ ಮಾಡದೆ ಪದ್ಮಜಂ ಮದನನಂ ಬೈದಂತುಟೇ ಬೇಡಮ ಬಿನದಂ ತಪ್ಪಲೆ ಕಲ್ಪಿತಂ ಪರಿಯದಾತಂಗೆಂದು ನಿನ್ನೀ ಮನಂ ನಿನಗಾತಂ ದೊರೆ ನೆಟ್ಟನಾದಿ ಪುರುಷಂಗೇಕಕ್ಕೆ ನೀನ್ನಾಣ್ಣು * ವ ನೀನಿರ್ದನುಂ ಬಗೆಯಲ್ವೇಡ ನಿನ್ನ ಬಗೆಯಂ ಬಗೆದಂತೆ ತೀರ್ಚುವನೆಂದನೇಕ ಪ್ರಕಾರ ವಚನ ರಚನೆಗಳಿಂದಾಕೆಯ ಮನಮನಾ ನುಡಿಯುತ್ತಿರ್ಪಿನಮಿತ್ತ ೬೮. ಮನ್ಮಥನ ಬಾಣ ಹೊಸಮಲ್ಲಿಗೆ ದಕ್ಷಿಣಗಾಳಿ ಇವು ಪರಸ್ಪರ ಒಟ್ಟುಗೂಡಿ ನನ್ನನ್ನು ಹಿಂಸಿಸುತ್ತವೆ. ಇವು ಚಂದ್ರಬಲದಿಂದ (ಬೆಳದಿಂಗಳಿನಿಂದ) ಮತ್ತಷ್ಟು ಕೊಬ್ಬಿ ನನ್ನನ್ನು ಮತ್ತೂ ಹಿಂಸಿಸುತ್ತವೆ. ಈಗ ನನಗೆ ಚಂದ್ರಬಲವು (ಅದೃಷ್ಟ-ಗ್ರಹಬಲ) ಸರಿಯಾಗಿಲ್ಲದಿದ್ದರೆ ಮತ್ತಾವುದು ತಾನೆ ಒಳ್ಳೆಯದನ್ನು ಮಾಡಬಲ್ಲುದು? ವ!! ಎಂದು ಮನಸ್ಸಿನ ದುಃಖವನ್ನೂ ಹೃದಯದ ಬೇಗೆಯನ್ನೂ ಮನಸ್ಸಿನ ಗುರಿಯನ್ನೂ ಶರೀರದ ಬಡತನವನ್ನೂ ಸ್ಪಷ್ಟವಾಗಿ ತಿಳಿಯುವ ಹಾಗೆ ನಿರ್ದೆಶನ ಮಾಡಿ ನುಡಿಯಲಾಗಿ ಆ ಸಖಿಯು ತನ್ನ ಮನಸ್ಸಿನಲ್ಲಿಯೇ ರಾಜಹಂಸಪಕ್ಷಿಯು ಮಾನಸಸರೋವರವನ್ನಲ್ಲದೆ ಬೇರೆಯದನ್ನೇಕೆ ಅಪೇಕ್ಷಿಸುತ್ತದೆ. ಕಳಹಂಸಗಮನೆಯಾದ ಸುಭದ್ರೆಯು ಸುರತಮಕರಧ್ವಜನಾದ ಅರ್ಜುನನನ್ನಲ್ಲದೆ ಇತರರನ್ನೇಕೆ ಆಶಿಸುತ್ತಾಳೆ? ಎಂದು ಯೋಚಿಸುತ್ತಿದ್ದು ಮನಸ್ಸಿನಲ್ಲಿ ಉತ್ಸಾಹಗೊಂಡು ಸಂತೋಷಪಟ್ಟು ಹೀಗೆಂದಳು೬೯. ಪುಷ್ಪಬಾಣವನ್ನು ಪ್ರಯೋಗಿಸಿದ ತಪ್ಪೇನನ್ನೂ ಪ್ರಕಟವಾಗಿ ತೋರುವಂತೆ ಮಾಡದುದರಿಂದ ಬ್ರಹ್ಮನು ಮನ್ಮಥನನ್ನು ತಪ್ಪಿತಸ್ಥನನ್ನಾಗಿಯೇ ಮಾಡಿದಂತಾಗಿದೆ. ಈ ಆರೋಪಿತವಾದ ವಿನೋದವೂ ತಪ್ಪಾಗುವುದಿಲ್ಲವೇ ? ನಿನ್ನ ಮನಸ್ಸು ಆತನನ್ನು ಬಿಟ್ಟು ಹರಿಯದು. ನಿನಗೆ ಅವನೇ ಸರಿಸಮಾನನಾಗಿರುವವನು. ಆದಿಪುರುಷನಾದ ಅರಿಕೇಸರಿಯ ವಿಷಯದಲ್ಲಿ ಏತಕಕ್ಕ ಲಜ್ಜೆಪಡುತ್ತೀಯೇ? ವ|| ನೀನು ಇದಕ್ಕೆ * (ಈ ಪದ್ಯದ ಅರ್ಥ ಸ್ಪಷ್ಟವಿಲ್ಲ. ಇದರರ್ಥ ಹೀಗಿದ್ದರೂ ಇರಬಹುದು - ಬ್ರಹ್ಮನು ಸುಭದ್ರೆಗೆ ಅರ್ಜುನನ ವಿಷಯದಲ್ಲಾದ ಮನ್ಮಥಚೇಷ್ಟೆಯನ್ನು ಸ್ವಭಾವಸಹಜವನ್ನಾಗಿ ಮಾಡಿ ಕಲ್ಪಿತವೆನ್ನುವ ಹಾಗೆ ಮಾಡಬಾರದಾಗಿತ್ತು. ಹೇಗಾದರೂ ನಿನಗೆ ಅವನೂ ಅವನಿಗೆ ನೀನೂ ಸಮಾನರಾಗಿರುವವರು.)
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy