SearchBrowseAboutContactDonate
Page Preview
Page 229
Loading...
Download File
Download File
Page Text
________________ ೨೨೪ | ಪಂಪಭಾರತಂ ವll ಮತ್ತೊರ್ವಳತಿ ಸಂಭ್ರಮ ತ್ವರಿತದಿಂ ಮೇಖಳಾಕಳಿತ ರುಚಿರ ಲುಳಿತಾಧರ ಪಲ್ಲವೆ ನೋಟ್ಟಿ ದಂಡುಗಳೊಳಂಡುಗೊಂಡು ಸೊರ್ಕಿದಾನೆ ಬರ್ಪಂತೆ ಬಂದುಉll ಕಾಯದೆ ಕಾಮನಾರ್ದಿಸ ತೂವಲಿಡಿವಂತಡಗಯೊಳೊಪ ತೋ ರ್ಪಾಯಲೆ ನೋಟ ಬೇಟದ ಕೋನರ್ ತಲೆದೂರ್ಪವೊಲಾಗಿ ಬಾಯೊಳಿ ', ರ್ದಾಯಲೆ ಕಣ್ಣೆವಂದೆಸೆಯ ಕಯ್ಯಲೆ ಕಲ್ಗೊಳ ಬಾಯ ತಂಬುಲಂ ಬಾಯೊಳೆ ತೋಟಿ ಮೆಮ್ಮದು ನೋಡಿದಳ್ ಸಮರೈಕಮೇರುವಂ || ೩೭ ವll ಮತ್ತೊರ್ವಳ್ ಕರ್ವಿನ ಬಿಲ್ಲ ತಿರುವಿಂ ಬರ್ದು೦ಕಿ ಬರ್ಪಲರಂಬು ಬರ್ಪಂತ ಬಂದು - ಮಗ ಸರನಂ ರೂಪಿನೊಳಿಂದ್ರನಂ ವಿಭವದೊಳ್ ಪೋ ಮಚೆನಾನಾವ ಗಂ ಡರುಮಂ ಕಚ್ಚೆಯೊಳಿಟ್ಟು ಕಟ್ಟುವೆನೆನುತ್ತಿರ್ಪಾಕ ಗಂಧೇಭ ಕಂ | ಧರ ಬಂಧ ಪವಿಭಾಸಿಯಪ್ಪರಿಗನಂ ಕಾಣುತ್ತ ಕಸ್ತೂಲ್ಕು ಕಾ ಮರಸಂ ಭೋಂಕನೆ ಸೂಸೆ ತಾಳಲರಿದಂದಿರ್ಕಚೆಯಂ ಕಟ್ಟದಳ ೩೮ ವಗ ಅಂತು ನೋಡಿದ ಪಂಡರೆಲ್ಲಂ ಕಾಮದೇವನೆಂಬ ಬೇಂಟೆಕಾಯಂಗೊಡ್ಡಿದ ಪುಳ್ಳೆಗಳಂತರಲಂಬಿನ ಮನೆಗೆ ಪೂಡ ಪೊಕ್ಕು ಪಕ್ಕಾಗಿರೆ ಪೊಲೊಳಗಣಂ ಬಂದು ದಿವಿಜೇಂದ್ರ ವಿಳಾಸೋಪಹಾಸಿತಮಪ್ಪ ನಿಜಮಂದಿರಮಂ ಪುಗ ಕಣ್ಣುಗಳ ಬಿಳಿಯ ಬಣ್ಣವು ಸೇರಿಕೊಂಡು ಚಿನ್ನದ ಪುಷ್ಪಬಾಣಕ್ಕೆ ಸಮಾನವಾಗಿರಲು ಹುಬ್ಬುಗಳೂ ಕಣ್ಣಿನ ರೆಪ್ಪೆಗಳೂ ಒಂದೇ ಸಮನಾಗಿ ಕುಣಿಯುತ್ತ ದುಷ್ಟನಾದ ಮನ್ಮಥನು ಕಬ್ಬಿನ ಬಿಲ್ಲಿನಲ್ಲಿ ಹೂಡಿದ ಬಿಲ್ಲಿನ ಹೆದೆಗೆ ಸಮಾನವಾಗಿರಲು ನೀಡಿನೀಡಿ ನಿಂತು ಆನೆಯ ಮೇಲಿದ್ದ ಅರ್ಜುನನನ್ನು ಸುಂದರಿಯೊಬ್ಬಳು ದೀರ್ಘವಾಗಿ ನೋಡಿದಳು. ವll ನಡುಪಟ್ಟಿಯಿಂದ ಕೂಡಿದ ಮನೋಹರವಾಗಿ ಬಾಗಿರುವ ಚಿಗುರಿನಂತಿರುವ ತುಟಿಯುಳ್ಳ ಮತ್ತೊಬ್ಬಳು ಓಡಿಬಂದು ನೋಡಬೇಕೆಂಬ ಸಂಭ್ರಮದಿಂದ ಆನೆಯು ಬರುವ ಹಾಗೆ ಬರುತ್ತಿದ್ದ ಅರ್ಜುನನ ಹತ್ತಿರಕ್ಕೆ ಬಂದು ೩೭. ಕಾಮನು ಕರುಣೆಯಿಲ್ಲದೆ ಬಾಣಪ್ರಯೋಗ ಮಾಡಲು ಹೆದರಿ ಚಿಗುರನ್ನು ಹಿಡಿಯುವ ಹಾಗೆ ಎಡಗಯ್ಯಲ್ಲಿ ವೀಳೆಯದೆಲೆಯು ಒಪ್ಪಿರಲು ಪ್ರೇಮದ ಚಿಗುರು ಕಾಣಿಸಿಕೊಂಡ ಹಾಗೆ ಬಾಯಲ್ಲಿದ್ದ ತಾಂಬೂಲವು ಮನೋಹರವಾಗಿರಲು, ಕಮ್ಮಿನೆಲೆಯು ಕಯ್ಯಲ್ಲಿಯೂ ಬಾಯಿದಂಬುಲವು ಬಾಯಲ್ಲಿಯೂ ಇರುವ ಹಾಗೆಯೇ ತನ್ನನ್ನು ತಾನು ಮರೆತುಕೊಂಡು 'ಸಮರೈಕಮೇರುವಾದ ಅರ್ಜುನನನ್ನು ನೋಡಿದಳು. ವ| ಮತ್ತೊಬ್ಬಳು ಕಬ್ಬಿನ ಬಿಲ್ಲಿನ ಹೆದೆಯಿಂದ ಬದುಕಿ ಬರುವ ಹೂಬಾಣವು ಬರುವ ಹಾಗೆ ಬಂದು ೩೮, ರೂಪದಲ್ಲಿ ಮನ್ಮಥನನ್ನೂ ವೈಭವದಲ್ಲಿ ಇಂದ್ರನನ್ನೂ ನಾನು ಮೆಚ್ಚುವುದಿಲ್ಲ, ಬಿಡು ಎಂತಹ ಶೂರನನ್ನಾದರೂ ನನ್ನ ಕಚ್ಚೆಯಲ್ಲಿಟ್ಟು ಕಟ್ಟಿಬಿಡುತ್ತೇನೆ ಎನ್ನುತ್ತಿದ್ದವಳೂ ಮದ್ದಾನೆಯ ಕುಂಭಸ್ಥಳದಲ್ಲಿ ಪ್ರಕಾಶಮಾನವಾಗಿದ್ದ ಅರಿಗನನ್ನು ನೋಡಿದ ತಕ್ಷಣವೆ ಅವನಿಗೆ ಅಧೀನಳಾಗಿ ಕಾಮರಸವು ಇದ್ದಕ್ಕಿದ್ದ ಹಾಗೆ ಸೂಸುತ್ತಿರಲು ಸಹಿಸುವುದಕ್ಕಸಾಧ್ಯವೆಂದು ಎರಡು ಕಚ್ಚೆಯನ್ನು ಬಿಗಿಯಾಗಿ ಕಟ್ಟಿದಳು. ವll ಹಾಗೆ ನೋಡಿದ ಹೆಂಗಸರೆಲ್ಲರೂ ಕಾಮದೇವನೆಂಬ ಬೇಟೆಗಾರನಿಗೆ ಒಡ್ಡಿದ ಹುಲ್ಲೆಗಳ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy