SearchBrowseAboutContactDonate
Page Preview
Page 230
Loading...
Download File
Download File
Page Text
________________ ಚತುರ್ಥಾಶ್ವಾಸಂ | ೨೨೫ ಮll ಲತಗಳ ಜಂಗಮರೂಪದಿಂ ನೆರೆದುವೋ ದಿವ್ಯಾಸ್ಪರೋವೃಂದಮಾ ಕ್ಷಿತಿಗನಿಂದ್ರನ ಶಾಪದಿಂದಿಚಿದುವೊ ಪೇಟೆಂಬ ಶಂಕಾಂತರಂ | ಮತಿಗಂ ಪುಟ್ಟುವಿನಂ ಕರಂ ಪರಕೆಗಳ ತಳ್ಕೊಮ್ಮೆ ಸೇಸಿಕ್ಕಿತಿಂ ದ್ರತನೂಜಂಗಿದಿರ್ವಂದು ಷೋಡಶ ಸಹಸ್ರಾಂತಃಪುರಂ ಕೃಷ್ಣನಾ . ೩೯ ವli ಆಗಳ್ ನಾರಾಯಣನ ತಂಗೆ ಸುಭದ್ರೆಯೆಂಬ ಕನ್ನೆ ಕಮುಗಿಲ ತೆರೆಯ ಪೊರೆಯೊಳ್ ನೆಗೆದು ಪೂಜೆಮಡುವ ವಿದ್ಯಾಧರಿಯಂತೆ ತನ್ನ ಚೆಂಬೊನ್ನ ಕನ್ನೆಮಾಡದ ಮೇಗಣ ನೆಲೆಯ ಚಪಳಿಗೆಯ ಬಾಗಿಲೊಳ್ ನಿಂದು ಬಳಸಿದ ಗುಜ್ಜುಗಳ ನೆರೆದ ಮೇಳದ ಕನ್ನೆಯರೆತ್ತಮಿಕೆ ಸಂ '' ಚಳಿಸುವ ಚಾಮರಂ ಕನಕ ಪದ್ಯದ ಸೀಗುರಿ ತೊಟ್ಟ ಮಾಣಿಕಂ | ಗಳ ಬೆಳಗಿಟ್ಟಳಂ ತನಗೂಡಂಬಡ ದೇಸಿ ವಿಳಾಸಮಂ ಪುದುಂ ಗೊಳಿಸಿ ಮರು ಕನ್ನೆ ನಡೆ ನೋಡಿ ಗುಣಾರ್ಣವನೆಂಬನೀತನೇ || ೪೦ ವ|| ಎಂದು ತನ್ನ ಮೇಳದಾಕೆಗಳಂ ಬೆಸಗೊಂಡೊಡಾಕೆಗಳಾಕೆಯ ಹತ್ತಿದ ಕಣ್ಣುಮನತ್ತಿದ ಮನಮುಮಂ ಜೋಲ್ಕ ನಾಣಮಂ ನೇಲ್ಲ ಸರಮುಮನಳದು ಸಹಜಮನೋಜನ ಕುಲದ ಚಲದ ಚಾಗದ ಬೀರದ ಭಾಗ್ಯದ ಸೌಭಾಗ್ಯದಗುಂತಿಗಳನಂತುಮಳವಲ್ಲದೆ ಪೊಗಳಹಾಗೆ ಪುಷ್ಪಬಾಣದ ತುದಿಗೆ ಪ್ರತಿಜ್ಞೆ ಮಾಡಿ ಪ್ರವೇಶಿಸಿ ಅದಕ್ಕಧೀನವಾಗಿರಲು ಅರ್ಜುನನು ನಗರದ ಒಳಭಾಗದಿಂದ ಬಂದು ದೇವೇಂದ್ರನ ವೈಭವವನ್ನೂ ತಿರಸ್ಕರಿಸುವಂತಿದ್ದ ತನಗಾಗಿ ಏರ್ಪಡಿಸಿದ್ದ ಅರಮನೆಯನ್ನು ಪ್ರವೇಶಿಸಿದನು. ೩೯. ಲತೆಗಳೇ ಜಂಗಮರೂಪದಿಂದ ಸೇರಿಕೊಂಡಿವೆಯೋ ಸ್ವರ್ಗದ ಅಪ್ಪರಸ್ತ್ರೀಯರು ಇಂದ್ರನ ಶಾಪದಿಂದ ಭೂಮಿಗೆ ಇಳಿದಿದ್ದಾರೆಯೋ ಎಂಬ ಸಂದೇಹವನ್ನುಂಟು ಮಾಡುತ್ತಿದ್ದ ಕೃಷ್ಣನ ಅಂತಃಪುರದ ಹದಿನಾರು ಸಾವಿರ ಸ್ತ್ರೀಯರು ಎದುರಾಗಿ ಬಂದು ಅರ್ಜುನನಿಗೆ ವಿಶೇಷವಾದ ಆಶೀರ್ವಾದಪೂರ್ವಕವಾಗಿ ಅಕ್ಷತಾರೋಪಣೆ ಮಾಡಿದರು. ವ|| ಆಗ ನಾರಾಯಣನ ತಂಗಿಯಾದ ಸುಭದ್ರೆಯೆಂಬ ಕನ್ಯಯು ಕೆಂಪಾದ ಮೋಡವೆಂಬ ತೆರೆಯ ಮಧ್ಯಭಾಗದಿಂದ ಹೊರಟು ಬರುವ ವಿದ್ಯಾಧರ ಸ್ತ್ರೀಯ ಹಾಗೆ ತನ್ನ ಸುವರ್ಣಖಚಿತವಾದ ಕನ್ಯಾಮಾಡದ ಮೇಲಂತಸ್ತಿನ ತೊಟ್ಟಿಯ ಬಾಗಿಲಲ್ಲಿ ನಿಂತುಕೊಂಡು- ೪೦. ತನ್ನ ಸುತ್ತಲೂ ಬಳಸಿಕೊಂಡಿರುವ ಕನ್ಯಾಂತಃಪುರದ ಸೇವಕರಾದ ಕುಳ್ಳರೂ ಅಲ್ಲಿ ಸೇರಿಕೊಂಡಿದ್ದ ಜನರೂ ಎಲ್ಲ ಕಡೆಯಿಂದಲೂ ಬೀಸಲು ಚಲಿಸುತ್ತಿರುವ ಚಾಮರವೂ ಚಿನ್ನದ ತಾವರೆಯ ಕೊಡೆಯೂ ಧರಿಸಿದ್ದ ಮಾಣಿಕ್ಯ ರತ್ನದ ಕಾಂತಿಯೂ ಚೆಲುವಾಗಿ ತನಗೆ ಒಪ್ಪಿರಲು ಸೌಂದರ್ಯ ಸೌಭಾಗ್ಯಗಳೂ ಹೊಂದಿಕೊಂಡಿರಲು ಕನ್ಯಯಾದ ಸುಭದ್ರೆಯು ದೀರ್ಘದೃಷ್ಟಿಯಿಂದ ನೋಡಿ ಗುಣಾರ್ಣವನೆಂಬುವನೀತನೇ ಎಂದು ತನ್ನ ಸಖಿಯರನ್ನು ಕೇಳಿದಳು. ವಗಿ ಅವರು ಅವಳ ನಟ್ಟದೃಷ್ಟಿಯನ್ನೂ ಪ್ರೀತಿಯಿಂದ ಕೂಡಿದ ಮನಸ್ಸನ್ನೂ ಸಡಿಲವಾದ ಲಜ್ಜೆಯನ್ನೂ ಮೆಲ್ಲಗಾದ ಧ್ವನಿಯನ್ನೂ ತಿಳಿದು ಸಹಜಮನ್ಮಥನಾದ ಅರ್ಜುನನ ಕುಲದ, ಛಲದ, ತ್ಯಾಗದ, ವೀರದ, ಭಾಗ್ಯದ, ಸೌಭಾಗ್ಯದ ಅತಿಶಯಗಳನ್ನು ಅಳತೆಯಿಲ್ಲದೆ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy