SearchBrowseAboutContactDonate
Page Preview
Page 228
Loading...
Download File
Download File
Page Text
________________ . ಚತುರ್ಥಾಶ್ವಾಸಂ | ೨೨೩ ಕಾಂತ ಕಂಡು ದಿಕ್ಕರಿಕರಾನುಕಾರಿಗಳಪ್ಪ ಬಾಹುಗಳಿಂದಮೋರೊರ್ವರಂ ತಗೆದಪ್ಪಿ ನಿಬಿಡಾಲಿಂಗ ನಂಗಯಾನಂದಜಳಪರಿಪೂರ್ಣವಿಸ್ತೀರ್ಣವಿಲೋಚನಂಗಳಿಂದಂ ಮುಹುರ್ಮುಹು ರಾಲೋಕನಂ ಗೆಯುತ್ತುಮುತ್ತುಂಗ ಮತ್ತವಾರಣಂಗಳನೇಟೆ ಪೊಲೀಲಂ ಪುಗೆಚಂl ಸುರ ನರ ಕಿನ್ನರೋರಗ ನಭಶ್ವರ ಕಾಂತೆಯರೇವರೆಂದು ಮಾಂ ಕರಿಸುವ ಕೆಯ್ಯದಂದದ ಮುರಾರಿಯ ತಂಗೆಯನಪುಕೆಯು ಚ | ಚರಮೋಳಪೊಯ್ತು ನೀಂ ನಿನಗೆ ಮಾಡುವುದೆಂದಮರೇಂದ್ರಪುತ್ರನಂ ಕರೆವವೊಲಾದುವಾ ಪುರದ ವಾತ ವಿಧೂತವಿನೂತ ಕೇತುಗಳ್ || ೩೪ ವ|| ಆಗಳ್ ಮೊಲಗುವ ಬದ್ದವಣದ ಪಣಿಗಳುಂ ಪಿಡಿದ ಕೆಂಬೊನ್ನ ತಳಿಗೆಯೊಳ್ ತೆಕ್ಕನೆ ತೀವಿದ ಬಿಡುಮುತ್ತಿನ ಸೇಸೆಯುಂ ಬೆರಸುಚoll ಒದವಿದ ನೂಲ ತೊಂಗಲುಲಿ ದೇಸಿಯನಾಂತು ವಿಳಾಸದಿಂದಿಜುಂ ಕಿದ ನಿಳಿ ಗಂಡರಿರ್ದಗಳಂ ತುಟಿವೊಜೆಯನುಂಟುಮಾಡುವಂ | ದದ ನಿಡುಗಣ್ಣಳೊಳಡ ಮನೋಭವನೊಡ್ಡಣದಂತೆ ತಂಡ ತಂ ಡದೆ ಪರಿತಂದು ಸೂಸಿದುದು ಸೇಸೆಯನಂದು ಪುರಾಂಗನಾಜನಂ || ೩೫ ಮಿಳಿರ್ವ ಕುರುಳಳೊಳ್ ಪೊಳೆವ ಕಣ್ಣಳ ಬೆಳ್ಳು ಪಳಂಚಿ ಚಿನ್ನ ಪೂ ಗಣೆಗೆಣೆಯಾಗೆ ಪುರ್ವುಮೆಮೆಗಳ ಬಿಡದಿಳಿದಿಕುಚಾಪದೊಳ್ | ಖಳ ಕುಸುಮಾಸ್ತನಿಟ್ಟ ಗೊಣೆಯಕ್ಕೆಣೆಯಾಗಿರೆ ನಿಳ್ಳಿ ನಿಳ್ಳಿ ಕೋ ಮಳೆ ನಡೆ ನೋಡಿದಳ್ ಕರಿಯನೇಳಿದನಂ ಪಡಮಚ್ಚಗಂಡನಂ || ೩೬ ಆಕಾರವನ್ನೇ ಕಾಣುವ ಹಾಗೆ ಕಂಡು ದಿಗ್ಗಜಗಳ ಸೊಂಡಲಿನಂತಿದ್ದ ತೋಳುಗಳಿಂದ ಒಬ್ಬೊಬ್ಬರನ್ನೂ ಬಿಗಿದು ಆಲಿಂಗನ ಮಾಡಿಕೊಂಡರು. ಆನಂದ ಜಲ (ಸಂತೋಷದ ಕಣ್ಣೀರು) ದಿಂದ ತುಂಬಿದ ವಿಸ್ತಾರವಾದ ಕಣ್ಣುಗಳಿಂದ ಪುನಃ ಪುನಃ ನೋಡುತ್ತ ಎತ್ತರವಾದ ಮದ್ದಾನೆಯನ್ನು ಹತ್ತಿ ಪುರಪ್ರವೇಶ ಮಾಡಿದರು. ೩೪. ದೇವ, ಮಾನವ, ಕಿನ್ನರ, ಉರಗ, ಖೇಚರ ಸ್ತ್ರೀಯರು (ಇವಳ ಮುಂದೆ) ಅವರು ಯಾರು ಎಂತಹವರು - ಎಂದು ತಿರಸ್ಕರಿಸುವ ರೂಪವುಳ್ಳ ಸೌಂದರ್ಯವತಿಯೂ ಆದ ಶ್ರೀಕೃಷ್ಣನ ತಂಗಿಯಾದ ಆ ಸುಭದ್ರೆಯನ್ನು ಅಂಗೀಕಾರಮಾಡಿ ಜಾಗ್ರತೆಯಾಗಿ ಒಲಿಸಿಕೊಂಡು ನಿನ್ನವಳನ್ನಾಗಿ ಮಾಡಿಕೊ ಎಂದು ಇಂದ್ರಪುತ್ರನಾದ ಅರ್ಜುನನನ್ನು ಕರೆಯುವ ಹಾಗೆ ಆ ನಗರದ ಗಾಳಿಯಿಂದ ಅಲುಗಾಡುತ್ತಿರುವ ಪ್ರಸಿದ್ದವಾದ ಧ್ವಜಗಳು ತೋರಿದುವು. ವ|| ಆಗ ಮಂಗಳವಾದ್ಯಗಳು ಭೋರ್ಗರೆಯುತ್ತಿರಲು ಅಪರಂಜಿಯ ಆ ನಗರದ ಸ್ತ್ರೀಯರು ಚಿನ್ನದ ತಟ್ಟೆಯಲ್ಲಿ ಬಿಡಿಮುತ್ತಿನ ಅಕ್ಷತೆಯನ್ನು ತುಂಬಿಕೊಂಡು ೩೫, ಧರಿಸಿದ ನಡುಪಟ್ಟಿಯ ಕುಚ್ಚಿನ ಶಬ್ದಗಳೂ ಸೌಂದರ್ಯದಿಂದ ಕೂಡಿ ವೈಭವದಿಂದ ತೊಡೆಗಳ ಮಧ್ಯೆ ಸೇರಿಸಿಕೊಂಡಿರುವ ಸೀರೆಗಳ ನೆರಿಗೆಗಳೂ ಶೂರರಾದ ಪುರುಷರ ಹೃದಯವನ್ನು ತುಳಿದು ಯಮನಂತಿರಲು ಆಕರ್ಷಕವಾಗಿರುವ ದೀರ್ಘದೃಷ್ಟಿಯಿಂದ ಕೂಡಿ ಮನ್ಮಥನ ಸೈನ್ಯದ ಹಾಗೆ ಗುಂಪುಗುಂಪಾಗಿ ಓಡಿ ಬಂದು ಅರ್ಜುನನಿಗೆ ಅಕ್ಷತೆಯನ್ನು ಚೆಲ್ಲಿದರು (ಆಶೀರ್ವದಿಸಿದರು). ೩೬. ಚಲಿಸುತ್ತಿರುವ ಮುಂಗುರುಳುಗಳಲ್ಲಿ ಹೊಳೆಯುವ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy