SearchBrowseAboutContactDonate
Page Preview
Page 227
Loading...
Download File
Download File
Page Text
________________ ೨೨೨/ ಪಂಪಭಾರತಂ ಖಚರಸ್ತುತ || ಸಾರ ವಸ್ತುಗಳಿಂ ನೆಳೆದಂಭೋರಾಶಿಯ ಕಾದಿಗೆ ಕಾವನುಂ ಸೀರವಾಣಿ ವಿಳಾಸದಿನಾಳಂ ಚಕ್ರಧರಂ ಬಗೆವಂಗ ಸಂ | ಸಾರಸಾರಮಿದೆಂಬುದನೆಂದೆಯಂದನಸಂಚಳ ಕಾಂಚನ ದ್ವಾರ ಬಂಧುರ ಬಂಧ ಗೃಹೋದ್ಯದ್ವಾರವತೀಪುರಮಂ ನರಂ || ೩೨ ವll ಅನ್ನೆಗಂ ತನ್ನ ಮಯ್ತುನನಪ್ಪಮೋಘಾಸ್ತ್ರ ಧನಂಜಯನ ಬರವಿನ ಸಂತಸದೊಸಗೆ ಪಡೆಮಾತು ಮುಂದುವರಿದಳಪುವಂತಮll ಪಲವುಂ ಜನ್ಮದೊಳಾದ ನಿನ್ನ ಕೆಳೆಯಂ ಬಂದಪ್ಪನಾತಂಗೆ ಬೆಂ ಬಲಮಿನ್ನೀಂ ನಿನಗಾತನಾತನನಿಳಾವಿಖ್ಯಾತನಂ ಕೂರ್ತು ನೋ | ಡಲುಮಂರ್ತಮರ್ದಪ್ತಲುಂ ಪಡವೆಯಿಂದೆಂಬಂತೆ ಕೆತ್ತಿತ್ತು ದಲ್ ಬಲಗಣ್ಣುಂ ಬಲದೋಳುಮಾ ಬಲಿ ಬಲಪ್ರಧ್ವಂಸಿಗಂದಿಟ್ಟಳಂ || ೩೩ ವ|| ಅಂತು ದಕ್ಷಿಣಾಕ್ಷಿ ಸ್ಪಂದನದೊಳಂ ಸೂಚಿಸುವ ಶುಭಸೂಚನೆಯೊಳಂ ನಾರಾಯಣನುದಾತ್ತನಾರಾಯಣನ ಬರವನಳಿದು ಬಲದೇವ ಸಾತ್ಯಕಿ ಕೃತವರ್ಮಾದಿಗಳಪ್ಪ ತನ್ನೊಡವುಟ್ಟಿದರುಂ ವೃಷ್ಠಿಕಾಂಭೋಜಕುಳತಿಳಕರಪ್ಪ ಯಾದವರುಂಬೆರಸು ಮದಕರಿ ಕರೇಣು ತುರಗಾದಿ ನಾನಾವಿಧವಾಹನಂಗಳನೇಟೆ ಮಯ್ತುನಂಗಿದಿರ್ವಂದು ತಮ್ಮಲಂಪಿನಲ್ಕಟಿನ ರೂಪನೆ ವಿಲ್ಲದೆಯೇ ಜಯಿಸಿ ವಶಪಡಿಸಿಕೊಂಡು ಪಶ್ಚಿಮ ದಿಕ್ಕಿಗೆ ಎದುರಾಗಿ ಬಂದನು. ೩೨. ಸಾರವತ್ತಾದ ಪದಾರ್ಥಗಳಿಂದ ತುಂಬಿದ ಸಮುದ್ರವೇ ಅಗುಳು (ಕಂದಕ) ಅದರ ರಕ್ಷಕ ಬಲರಾಮ, ವೈಭವದಿಂದ ಅದನ್ನು ಆಳುವವನು ಶ್ರೀಕೃಷ್ಣ, ವಿಚಾರ ಮಾಡುವವನಿಗೆ ಇದೇ ಸಂಸಾರಸಾರ ಎಂದೆನಿಸಿಕೊಳ್ಳುವ ಸ್ಥಿರವೂ ಚಿನ್ನದ ಬಾಗಿಲುಗಳಿಂದ ಕೂಡಿದ ಎತ್ತರವಾದ ಉಪ್ಪರಿಗೆಗಳನ್ನುಳ್ಳದೂ ಆದ ದ್ವಾರಾವತೀ ಪಟ್ಟಣವನ್ನು ಅರ್ಜುನನು ಬಂದು ಸೇರಿದನು. ವ|| ಅಷ್ಟರಲ್ಲಿ ತನ್ನ ಮಯ್ತುನನಾದ ಅಮೋಘಾಸ್ತಧನಂಜಯನ ಬರುವಿಕೆಯ ಸಂತೋಷ ಸಮಾಚಾರವನ್ನು ತನಗೆ ಮೊದಲೇ ತಿಳಿಸುವಂತೆ ೩೩. ನಿನ್ನ ಹಿಂದಿನ ಅನೇಕ ಜನ್ಮಗಳ ಸ್ನೇಹಿತನು ಬರುತ್ತಾನೆ. ಆತನಿಗೆ ನೀನು ಬಲ, (ಸಹಾಯಕ) ನಿನಗೆ ಆತನು ಸಹಾಯಕ; ಲೋಕಪ್ರಸಿದ್ಧನಾದ ಆತನನ್ನೂ ಕಣ್ಣುಂಬ ನೋಡಿ ಪ್ರೀತಿಯಿಂದ ಗಾಢಾಲಿಂಗನ ಮಾಡುವ ಸುಯೋಗವನ್ನು ಪಡೆಯುವೆ (ಎಂಬುದನ್ನು ಸೂಚಿಸುವ) ಎನ್ನುವ ಹಾಗೆ (ಬಲಿ ಚಕ್ರವರ್ತಿಯ ಬಲವನ್ನು ನಾಶಪಡಿಸಿದ) ಕೃಷ್ಣನಿಗೆ ಬಲಗಣ್ಣ ಬಲದೋಳೂ ಏಕಪ್ರಕಾರವಾಗಿ ಅದುರಿದುವು. ವll ಹಾಗೆ ಬಲಗಣ್ಣಿನ ಅದುರುವಿಕೆ (ಕುಣಿತ, ಸ್ಪಂದನ) ಯಿಂದಲೂ ಸೂಚಿತವಾದ ಶುಭಶಕುನಗಳಿಂದಲೂ ನಾರಾಯಣನಾದ ಕೃಷ್ಣನು ಉದಾತ್ತ ನಾರಾಯಣನಾದ ಅರ್ಜುನನ ಬರುವಿಕೆಯನ್ನು ತಿಳಿದು ಬಲರಾಮ, ಸಾತ್ಯಕಿ, ಕೃತವರ್ಮ ಮೊದಲಾದ ಒಡಹುಟ್ಟಿದವರನ್ನು ದೃಷ್ಟಿ ಮತ್ತು ಕಾಂಭೋಜಕುಲಶ್ರೇಷ್ಠರಾದ ಯಾದವರನ್ನೂ ಕೂಡಿಕೊಂಡು ಮದ್ದಾನೆ, ಹೆಣ್ಣಾನೆ, ಕುದುರೆ ಮೊದಲಾದ ಅನೇಕ ವಾಹನಗಳನ್ನು ಹತ್ತಿ ಮಯ್ತುನನಿಗೆ ಇದಿರಾಗಿ ಬಂದು ತಮ್ಮ ಸಂತೋಷಕ್ಕೂ ಪ್ರೀತಿಗೂ ಕಾರಣವಾದ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy