SearchBrowseAboutContactDonate
Page Preview
Page 220
Loading...
Download File
Download File
Page Text
________________ ೧೫ ಚತುರ್ಥಾಶ್ವಾಸಂ | ೨೧೫ ವ|| ಎಂದು ಮೆಚ್ಚಿ . ಕಂ ಚಾರು ವಿವಿಧಾಗ್ನಿಕಾರ್ಯ ಪ್ರಾರಂಭ ಮಹಾದ್ವಿಜನ್ಯ ಘೋಷದಿನಂಹೂ | ದೂರಮುಮವನಿತಳಾಳಂ ಕಾರಂ ಸಂಸಾರ ಸಾರ ಗಂಗಾದ್ವಾರಂ || ವ ಎನೆ ಸೊಗಯಿಸುವ ಗಂಗಾದ್ವಾರದೊಳ್ ಮುನಿಜನಂಗಳ ಬೇಳ್ವೆಗಳುಪದ್ರವಂಗೆಯ ನಿಶಾಟಕೋಟಿಯಂ ನಿಶಿತ ಶರಕೋಟಿಯಿಂದಮುಚ್ಚಾಟಿಸಿ ಕೆಲವು ದಿವಸಮಿರ್ದಲ್ಲಿ ಪಡೆಮೆಚ್ಚಿ ಗಂಡನ ಗಂಡಗಾಡಿಯಂ ಕಂಡು ಫಣೀಂದ್ರನ ಕನ್ನೆ ಮದನಲತಯೆಂಬ ನಾಗಕನ್ನೆ ಕಸ್ಟೇಟಂಗೊಂಡು ತನ್ನ ಲೋಕಕೊಡಗೊಂಡು ಪೋಗಲ್ಉl ಆಗಳುಮಿಂದು ಸೂರ್ಯರಣವಿಲ್ಲದೆ ಕತ್ತಲೆಯಂಬುದಿಲ್ಲ ತ ದ್ಯೋಗಿ ಫಣಾಮಣಿ ದ್ಯುತಿಯೆ ಕತ್ತಲೆಯಂ ತಲೆದೋಜಲೀಯದಾ | ನಾಗರ ನಾಗಕನ್ನೆಯರ ರೂಪುಗಳಿಟ್ಟಳಮಾಗೆ ಭೋಗಿಗಳ ಭೋಗಿಗಳೆಂಬ ಭೋಗಿಗಳೆ ಭೋಗಿಗಳಲ್ಲಿಯು ಭೋಗನಾಯಕಮ್ || ೧೬ ವಗಿರಿ ಎಂದು ನಾಗಕನ್ನೆ ನಾಗಲೋಕದ ವಿಳಾಸಂಗಳಂ ತೋಜುತ್ತುಂ ತನ್ನ ಕೆಂಗಣ ನಾಗವಿಮಾನಕ್ಕೆ ಎಂದು ನಾಗಕನ್ನೆಯರುಂ ತಾನುಂ ಮನಂಬುಗಿಸುವಂತೆ ಮಜ್ಜನಂಬುಗಿಸಿ ರಸರಸಾಯನಂಗಳನೂಡುವಂತೆ ದಿವ್ಯಾಹಾರಂಗಳನೂಡಿಮಾನ್ಯತೆಯುಂಟಾಗಲು ಚಮರೀಮೃಗಗಳ ಮನೋಹರವಾದ ಬಾಲದ ತುದಿಯ ಕೂದಲುಗಳ ಸಮೂಹದ ಬೀಸುವಿಕೆಯಿಂದ ಚಾಮರಗಳನ್ನು ಬೀಸುವ ವೈಭವವು ಅಧಿಕವಾಗುತ್ತಿರಲು ಅಖಂಡ ಪ್ರಪಂಚದಲ್ಲಿರುವ ಎಲ್ಲ ಬೆಟ್ಟಗಳ ಚಕ್ರವರ್ತಿ ಪದವಿಯನ್ನು ಶ್ರೇಷ್ಠವಾದ ಈ ಹಿಮಾಚಲ ಪರ್ವತವು ತಾಳಿತು. ೧೫. ಗಂಗಾದ್ವಾರವೆಂಬ ಪುಣ್ಯಕ್ಷೇತ್ರವು ಮನೋಹರವೂ ನಾನಾ ವಿಧವೂ ಆದ ಮಹಾಬ್ರಾಹ್ಮಣರ ವೇದಘೋಷದಿಂದ ಪಾಪದೂರವೂ ಭೂಮಂಡಲಕ್ಕೆ ಅಲಂಕಾರ ಪ್ರಾಯವೂ ಸಂಸಾರಸಾರವೂ ಆಯಿತು. ವ ಇಂತಹ ಸೊಗಸಾಗಿರುವ ಗಂಗಾದ್ವಾರದಲ್ಲಿ ತಪಸ್ವಿಗಳ ಯಜ್ಞಕಾರ್ಯಕ್ಕೆ ಹಿಂಸೆಯನ್ನು ಮಾಡುವ ರಾಕ್ಷಸ ಸಮೂಹವನ್ನು ಹರಿತವಾದ ಬಾಣಗಳ ರಾಶಿಯಿಂದ ಹೊಡೆದೋಡಿಸುತ್ತ ಅಲ್ಲಿ ಕೆಲವು ದಿವಸವಿದ್ದನು. ಅಲ್ಲಿಯೇ ಪಡೆಮೆಚ್ಚೆಗಂಡನಾದ ಅರ್ಜುನನ ಸೌಂದರ್ಯವನ್ನು ನಾಗಕನ್ಯಯಾದ ಮದನಲತೆಯೆಂಬುವಳು ನೋಡಿ ಮೋಹಗೊಂಡು ಅವನನ್ನು ತನ್ನ ನಾಗಲೋಕಕ್ಕೆ ಕೊಂಡುಹೋದಳು. ೧೬. ಚಂದ್ರಸೂರ್ಯರು ಇಲ್ಲದಿದ್ದರೂ - ಅಲ್ಲಿ ಕತ್ತಲೆಯೆಂಬುದೇ ಇಲ್ಲ. ಆ ಹಾವುಗಳ ಹೆಡೆಗಳಲ್ಲಿರುವ ರತ್ನಕಾಂತಿಯೇ ಕತ್ತಲೆಯು ತಲೆಹಾಕುವುದಕ್ಕೆ ಅವಕಾಶಕೊಡುವುದಿಲ್ಲ. ಆ ನಾಗರ ಮತ್ತು ನಾಗಕನ್ನಿಕೆ ಯರ ರೂಪಗಳು ಮನೋಹರವಾಗಿವೆ. ಆದುದರಿಂದಲೇ ಸರ್ಪಗಳು ಭೋಗಿಗಳು ಎನ್ನಿಸಿಕೊಂಡಿವೆ. ಭೋಗಿಗಳೆಂದರೆ ಭೋಗಪಾಲಕರೇ ವ ಎಂದು ಆ ನಾಗಕನ್ನಿಕೆ ಆ ನಾಗಲೋಕದ ವೈಭವಗಳನ್ನು ತೋರಿಸುತ್ತ ಕೆಳಭಾಗದಲ್ಲಿದ್ದ ತನ್ನ ಅಂತಃಪುರಕ್ಕೆ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy