SearchBrowseAboutContactDonate
Page Preview
Page 221
Loading...
Download File
Download File
Page Text
________________ ೨೧೬) ಪಂಪಭಾರತಂ ಉ11 ನಾಗವಿಭೂಷಣಪ್ರತತಿ ನಾಗರಖಂಡವಪೂರ್ವಮಪ್ಪ ಪು ನಾಗದ ಬಾಸಿಗಂ ಬಗೆದ ಬಣ್ಣದ ಪುಟ್ಟಿಗೆ ನಾಗಜಾಲಮಂ | ದಾಗಡೆ ನಾಗಲೋಕ ವಿಭವಂಗಳೊಳಾಚಿಸಿ ನಾಗಶಯ್ಯೊಳ್ ನಾಗಿಣಿ ನಾಗಬಂಧದೊಳ್ ತಳು ಗುಣಾರ್ಣವನಂ ಮರುಳ್ಳಿದಳ್ || ೧೭ ವ) ಅಂತಾಕೆಯ ಮುದ್ದುವೆರಸಿದ ತೂದಳ್ಳುಡಿಗಂ ಪೂಮಾಲೆವರಸಿದ ಬಬಲುಡಿಗಮಲಂಪುವೆರಸಿದ ನೋಟಕ್ಕಮಿಂಬುವರಸಿದ ಕೂಟಕ್ಕಂ ಪುರುಡುವೆರಸಿದ ಕೊಂಕಿಂಗಂ ಕದ್ದವಣಿ(?)ವೆರಸಿದ ಸೋಂಕಿಂಗಂ ಗಾಡಿವೆರಸಿದ ಹಾವಕ್ಕಂ ನಾರಸಿದ ಭಾವಕ್ಕಮೊಲ್ಲು ಮೊಬಿಲ್ಲುಮಿರೆಯಿರೆ ದೇವೇಂದ್ರಂಗಮಿಂದ್ರಾಣಿಗಂ ಜಯಂತನೆಂತಂತೆ: ಕಂ ಅಂತಾ ಫಣಿಕಾಂತೆಗಮರಿ ಕಾಂತಾಳಿಕ ಫಳಕ ತಿಳಕ ಹರನೆನಿಪರಿಗಂ || ಗಂ ತನಯನಧಿಕ ತೇಜೋ ವಂತನಿಳಾವಂತನಿಂದುಮಂಡಳಕಾಂತಂ | ವll ಅಂತು ಹುಟ್ಟುವುದುಮಾತನ ಬಾಲಕ್ರೀಡೆಯುಮಾಕಯ ಸುರತಡೆಯುಂ ತನ್ನ ನೋಟಕ್ಕಂ ಕೂಟಕ್ಕಂ ಸೊಗಯಿಸೆ ಕೆಲವು ದಿವಸಮಿರ್ದಲ್ಲಿಂ ಪೂಣಮಟ್ಟು ಬಂದು ಹಿಮವದ್ದಿರೀಂದ್ರ ತಟ ನಿಕಟವರ್ತಿಗಳಷ್ಟಗಷ್ಟವಟಮುಂ ವಸಿಷ್ಠಪರ್ವತಂಗಳೆಂಬ ಬಂದು ತಾನೂ ಆ ನಾಗಕನ್ನಿಕೆಯರೂ ತಮ್ಮ ಮನಸ್ಸಿಗೆ ತೃಪ್ತಿಯಾಗುವಂತೆ ಅವನಿಗೆ ಸ್ನಾನಮಾಡಿಸಿ ರಸಯುಕ್ತವಾದ ರಸಾಯನಗಳನ್ನು ತಿನ್ನಿಸುವಂತೆ ದಿವ್ಯಾಹಾರಗಳನ್ನು ಊಡಿಸಿದರು. ೧೭. ಆ ನಾಗಕನ್ನಿಕೆಯು ಅರ್ಜುನನನ್ನು ನಾಗರ ಒಡವೆಗಳ ಸಮೂಹ; ನಾಗರ ಖಂಡವೆಂಬ ಪ್ರದೇಶ, ಅಪೂರ್ವವಾದ ಪುನ್ನಾಗ ಪುಷ್ಟಗಳ ಹಾರ, ಬಗೆಬಗೆಯ ವಸ್ತಗಳು, ನಾಗದವಲ್ಲಿ (ತಾಂಬೂಲ) ಮೊದಲಾದ ನಾಗಲೋಕದ ವೈಭವಗಳಲ್ಲಿ ಮುಳುಗಿಸಿ ನಾಗಶಯ್ಕೆಯಲ್ಲಿ ನಾಗಬಂಧವೆಂಬ ರತಿಬಂಧದಲ್ಲಿ ಸೇರಿಕೊಂಡು ಮರುಳು ಮಾಡದಳು. ವ|| ಆಕೆಯ ಮುದ್ದಿನಿಂದ ಕೂಡಿದ ಲಲ್ಲೆಮಾತಿಗೂ (ತೊದನ್ನುಡಿ) ಹೂಮಾಲೆಯಿಂದ ಕೂಡಿ ಜೋಲಾಡುತ್ತಿರುವ ತುರುಬಿಗೂ ಪ್ರೀತಿಯಿಂದ ಕೂಡಿದ ನೋಟಕ್ಕೂ ಸುಖಮಯವಾದ ಕೂಡುವಿಕೆಗೂ ಸ್ಪರ್ಧೆಯಿಂದ ಕೂಡಿದ ವಕ್ರತೆಗೂ ಬಿಗಿದಪ್ಪಿದ ಆಲಿಂಗನಕ್ಕೂ ಸೌಂದರ್ಯದಿಂದ ಕೂಡಿದ ಶೃಂಗಾರ ಚೇಷ್ಟೆಗೂ ನಾಚಿಕೆಯಿಂದ ಕೂಡಿದ ಭಾವಗಳಿಗೂ ಒಲಿದು ಪ್ರೀತಿಸಿರಲು ದೇವೇಂದ್ರನಿಗೂ ಶಚೀದೇವಿಗೂ ಜಯಂತನು ಹುಟ್ಟುವ ಹಾಗೆ ೧೮. ಆ ಕನ್ನಿಕೆಗೂ ಶತ್ರುಸ್ತೀಯರ ಮುಖವೆಂಬ ಹಲಗೆಯಲ್ಲಿರುವ ತಿಲಕವನ್ನು ನಾಶಪಡಿಸುವವನೆಂಬ (ಕೀರ್ತಿಯನ್ನುಳ್ಳ) ಅರಿಕೇಸರಿಗೂ ಅಧಿಕ ತೇಜಸ್ಸಿನಿಂದ ಕೂಡಿದವನೂ ಚಂದ್ರಮಂಡಳದ ಕಾಂತಿಯುಳ್ಳವನೂ ಆದ ಇಳಾವಂತನೆಂಬ ಮಗನು ಹುಟ್ಟಿದನು. ವ|| ಆತನ ಬಾಲಕ್ರೀಡೆಯು ತನ್ನ ನೋಟಕ್ಕೂ ಅವಳ ಸುರತಕ್ರೀಡೆಯು ತನ್ನ ಕೂಟಕ್ಕೂ ಸೊಗಯಿಸುತ್ತಿರಲು ಕೆಲವು ದಿವಸವಿದ್ದು ಅಲ್ಲಿಂದ ಹೊರಟುಬಂದು ಶ್ರೇಷ್ಠವಾದ ಹಿಮಾಲಯ ಪರ್ವತದ ತಪ್ಪಲಿನ ಸಮೀಪದಲ್ಲಿರುವ ಅಗಸ್ಯನಟ ಮತ್ತು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy