SearchBrowseAboutContactDonate
Page Preview
Page 219
Loading...
Download File
Download File
Page Text
________________ ೨೧೪ | ಪಂಪಭಾರತಂ ಚಂ|| ಅಜಪಿದೊಡನ್ನ ಪೋಗನಿನಿಯಳೆ ಮನಂ ಮಟಕಕ್ಕೆ ನೀಳ ಕ ಕ್ಲೋಜಿದುಗುವಸ್ತುವಾರಿಗೆ ತೂದಳ್ಳುಡಿ ಲಲ್ಲೆಗೆ ಪಕ್ಕುಗೊಟ್ಟು ಕಾ | ಲೈಂಗಿರೆ ಪೋಗು ಕೆಟ್ಟಪುದು ಮೋಹಮಯಂ ನಿಗಳಂ ಕಳತ್ರಮಂ ದಳಪದೆ ನಟ್ಟಿರುಳ ಮಣಿದು ಸಾರ್ಚಿದ ನಲ್ಗಳ ತಳ ತೋಳಳಂ || ೧೨ ವ|| ಮಲ್ಲಮೆಲ್ಲನೆ ಪತ್ತುವಿಡಿಸಿ ತನ್ನ ತೊಟ್ಟ ದಿವ್ಯಾಭರಣಂಗಳೆಲ್ಲಮಂ ಕಳೆದು ದಿವಶರದಿಗಳು ಬಿಗಿದುಕೊಂಡು ದಿವಚಾಪಮಂ ಪಿಡಿದು ಪ್ರಥಮ ಚಳಿತ ದಕ್ಷಿಣ ನಿಜ ನಿವಾಸದಿಂ ಪೂಣಮಟ್ಟು ಖಾಂಡವಪ್ರಸ್ಥದಿಂದುತ್ತರಾಭಿಮುಖನಾಗಿ ಕಾಮ್ಯಕವನದೊಳಗಡೆ ನೀಲಪರ್ವತದ ಮೇಗನೆ ಪೋಗಿಚಂಗ ಸಗರರ ಮೇಲೆ ಗಂಗೆಯನನಾಕುಲದಿಂ ತರಲಾ ಭಗೀರಥಂ ನೆಗಳ ತಪೋನಿಯೋಗದೊಳವಂಗಮರಾಪಗೆ ಮೆಚ್ಚಿ ಪಾಯ್ಯುದುಂ | ಗಗನದಿನಂಧಕ ದ್ವಿಷ ಜಟಾಟವಿಯೊಳ್ ಬಟಿಕಾದ ಶೈಲದೊಳ್ ಸೊಗಯಿಸೆ ಪಾಯುದಿಂತಿದುವೆ ಬಂಧುರ ಕೂಟ ಕುಳಂ ಹಿಮಾಚಳಂ || ೧೩ ಮ|| ಸ ವಿಲಸತ್ಕಲ್ಲೋಲ ನಾದಂ ನೆಗಟ್ಟಿರ ನಿಜ ಕೂಟಾಗ್ರದೊಳ್ ಪಾಯ್ದ ಗಂಗಾ ಜಲದಿಂ ಮೂರ್ಧಾಭಿಷೇಕೋನ್ನತಿ ನಿಲ ಚಮರೀ ಲೋಲ ಲಾಂಗೂಲಮಾಲಾ | ವಲಿ ವಿಕ್ಷೇಪಂಗಳಿಂ ತಚ್ಚಮರರುಹ ಮಹಾಶೋಭೆ ಕೈಗನ್ಮ ವಿಶ್ವಾ ಚಲ ಚಕ್ರೇಶತ್ವಮಂ ತಾಳಿದುದಖಿಳ ಧರಾರಮ್ಯಹೈಮಾಚಳೇ ದ್ರಂ || ಈ ದ್ರಂ ॥ ೧೪ ನಿಶ್ಚಯಿಸಿದನು. ೧೨. ತನ್ನ ಜೈತ್ರಯಾತ್ರಾಪ್ರಯಾಣ ವಿಷಯವನ್ನು ಪ್ರಿಯಳಾದ ಬ್ರೌಪದಿಗೆ ತಿಳಿಸಿದರೆ ಆ ಕಾರ್ಯಕ್ಕೆ ಅಡ್ಡಿಯಾಗುತ್ತದೆ. ಅವಳ ಮನಸ್ಸಿನ ದುಃಖದಿಂದ ಕೂಡಿದ ಕಣ್ಣೀರಿಗೂ ತೊದಳುಡಿಯ ಪ್ರಿಯವಾರ್ತೆಗೂ ಮನಸೋತು, ಅವಳು ನನ್ನ ಕಾಲಿಗೆರಗಿದರೆ ನನ್ನ ಪ್ರಯಾಣಕ್ಕೆ ವಿಘ್ನವುಂಟಾಗುತ್ತದೆ. ಹೆಂಡತಿಯು ಮೋಹಮಯವಾದ ಸರಪಣಿಯೇ ಸರಿ ಎಂದು ಅವಳಿಗೆ ತಿಳಿಸದೆಯೇ ನಡುರಾತ್ರಿಯಲ್ಲಿ ಮೈಮರೆತು ಮಲಗಿ ತನ್ನ ಸಮೀಪಕ್ಕೆ ನೀಡಿದ್ದ ಅವಳ ತೋಳುಗಳನ್ನು ವು ನಿಧಾನವಾಗಿ ಬಿಡಿಸಿಕೊಂಡು ತಾನು ಧರಿಸಿದ್ದ ಉತ್ತಮ ಒಡವೆಗಳನ್ನೆಲ್ಲ ಕಳೆದಿಟ್ಟು ಶ್ರೇಷ್ಠವಾದ ಬತ್ತಳಿಕೆಯನ್ನು ಬಿಗಿದುಕೊಂಡು ಉತ್ತಮವಾದ ಬಿಲ್ಲನ್ನು ಹಿಡಿದು ಬಲಗಾಲನ್ನು ಮುಂದಿಟ್ಟು ತನ್ನ ಮನೆಯಿಂದ ಹೊರಟು ಖಾಂಡವಪ್ರಸ್ಥದಿಂದ ಉತ್ತರದ ಕಡೆಗೆ ಹೊರಟು ಕಾಮ್ಯಕವನದೊಳಗಿನಿಂದಲೇ ನೀಲಪರ್ವತದ ಮೇಲಕ್ಕೆ ಬಂದನು. ೧೩. ತನ್ನ ಪಿತೃಗಳಾದ ಸಗರರ (ಭಸ್ಯರಾಶಿಯ) ಮೇಲೆ ಗಂಗೆಯನ್ನು ತರಲು ಆ ಭಗೀರಥನು ತಪಸ್ಸಿನಲ್ಲಿ ನಿರತನಾಗಲು ಅವನ ತಪಸ್ಸಿಗೆ ಮೆಚ್ಚಿ ದೇವನದಿಯಾದ ಗಂಗೆಯು ಮೊದಲು ಅಂಧಕಾಸುರನ ಶತ್ರುವಾದ ಶಿವನ ಜಟೆಯೆಂಬ ಕಾಡಿನಲ್ಲಿಯೂ ಬಳಿಕ ಅಡ್ಡವಾದ ಪರ್ವತದಲ್ಲಿಯೂ ಸೊಗಸಿನಿಂದ ಹರಿದಳು. ಅನೇಕ ಶಿಖರಗಳ ಸಮೂಹದಿಂದ ಮನೋಹರವಾಗಿರುವ ಆ ಹಿಮಾಚಲ ಪರ್ವತವೇ ಇದು. ೧೪, ಪ್ರಕಾಶಮಾನವಾದ ಅಲೆಗಳ ಧ್ವನಿಯು ಉಂಟಾಗುತ್ತಿರಲು ತನ್ನ ಶಿಖರಗಳ ತುದಿಯಲ್ಲಿ ಹರಿಯುವ ಗಂಗೋದಕದಿಂದ ಪಟ್ಟಾಭಿಷೇಕದ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy