SearchBrowseAboutContactDonate
Page Preview
Page 214
Loading...
Download File
Download File
Page Text
________________ ಚತುರ್ಥಾಶ್ವಾಸಂ | ೨೦೯ ಪೇಲ್ಗಟ್ಟುವುದುಮಾತನಂತೆ ಗೆಯ್ದನೆಂದು ರಥಾರೂಢನಾಗಿ ಪಾಂಚಾಳರಾಜಪುರಕ್ಕೆ ಎಂದು ಪಾಂಡುಪುತ್ರರು ಕಂಡುಚಂi ಅದು ಪಿರಿದುಂ ಪ್ರಮಾದಮದುವುಂ ಕುರುರಾಜನಿನಾಯ್ತು ಪೋಯ್ತು ಸಂ ದುದು ಮಜಟೆಯ ವೇಟ್ಟುದದನಾಳ್ವುದು ತಪ್ಪದೆ ಪಾಂಡುರಾಜನಾ ಲೌುದನೆಳೆಯಂ ಮನಂ ಬಸದೆ ಬರ್ಪುದು ಮನೆ ಪೋಪ ಕಜ್ಜಮಂ . ವಿದುರನೊಳಯ್ಯರುಂ ಸಮೆದು ಪೇಚ್ಚುದುಮಾ ದ್ರುಪದಂಗೆ ರಾಜದಿಂ ||೪ ವ|| ಆತನ ಬಟವಟಿಗೊಟ್ಟ ಮದಕರಿ ಕರೇಣು ಜಾತ್ಯತ್ವ ಶಶಿತಾರ ಹಾರ ವಸ್ತುಗಳು ಕೆಯ್ಯೋಂಡು ದ್ರುಪದಜೆಯನೊಡಗೊಂಡು ದ್ರುಪದನನಿರಟ್ಟು ಕತಿಪಯ ಪ್ರಯಾಣಂಗಳಿಂ ಮದಗಜಪುರಮನೆಯ ವಂದಾಗಳ್ಚಂll ಘನಪಥಮಂ ಪಳಂಚಲೆವ ಸೌಧಚಯಂಗಳಿನಾಡುತಿರ್ಪ ಕೇ ತನತತಿಯಿಂ ಕರೀಂದ್ರ ಗಳಗರ್ಜನೆಯಿಂ ಪಟಹಪ್ರಣಾದಮಂ | ಘನರವಮಂದೆ ನರ್ತಿಸುವ ಕೇಕಿಗಳಿಂ ಕಡುರಯ್ಯಮಪ್ಪ ಹ | ಸಿನಪುರಮಂ ಜಿತೇಂದ್ರಪುರಮಂ ಪರಮೇಶ್ವರರಾಗಳೆದರ್ || ೫ ವ|| ಆಗಳಾ ಪೊಲಲ ಬೀದಿಗಳೆಲ್ಲಂ ಗಂಧೋದಕ ಪಂಚಗವ್ಯಂಗಳಂ ತಳಿಯಿಸಿ ಗುಡಿಯಂ ತೋರಣಂಗಳುಮಂ ತುಲುಗಲುಂ ಬಂಬಲುಮಾಗೆ ಕಟ್ಟಿಸಿ ಧೃತರಾಷ್ಟ್ರ ದುರ್ಯೋಧನ ಪಾಂಡವರನ್ನು ನಿನಗೆ ತಿಳಿದ ರೀತಿಯಲ್ಲಿ ಬುದ್ದಿ ಹೇಳಿ ಒಪ್ಪಿಸಿ ಕರೆದುಕೊಂಡು ಬರುವುದು ಎಂದು ಹೇಳಿ ಕಳುಹಿಸಿದರು. ಅವನು ಹಾಗೆಯೇ ಮಾಡುತ್ತೇನೆಂದು ತೇರನ್ನು ಹತ್ತಿ ದ್ರುಪದನ ಪಟ್ಟಣಕ್ಕೆ ಬಂದು ಪಾಂಡುಪುತ್ರರನ್ನು ನೋಡಿ ೪. ಕುರುರಾಜನಿಂದ ದೊಡ್ಡ ತಪ್ಪಾಗಿಹೋಯಿತು. ಆದದ್ದಾಗಿ ಹೋಯಿತು, ಕಳೆದುಹೋದುದನ್ನು ಮರೆತು ಬಿಡಬೇಕು. ಪಾಂಡುರಾಜನು ಆಳಿದ ಭೂಮಿಯನ್ನು ಬಿಡದೆ ನೀವು ಆಳಬೇಕು. ನೀವು ದೃಢಚಿತ್ತದಿಂದ ಬರಬೇಕು ಎಂದು ಹೇಳಲು ಪ್ರಯಾಣಮಾಡುವ ಕಾರ್ಯವನ್ನು ವಿದುರನೊಡನೆಯೇ ಅಯ್ಯರೂ ಕೂಡಿ ಆಲೋಚಿಸಿ ಹೊರಡುವ ವಿಷಯವನ್ನು ದ್ರುಪದನಿಗೆ ಸಂತೋಷದಿಂದ ತಿಳಿಸಿದರು. ವಅವನು ಬಳುವಳಿಯಾಗಿ ಕೊಟ್ಟ ಮದ್ದಾನೆ, ಹೆಣ್ಣಾನೆ, ಜಾತಿಯ ಕುದುರೆಗಳು ಚಂದ್ರನಂತೆ ಹೊಳೆಯುತ್ತಿರುವ ಮುತ್ತಿನ ಹಾರ ಮೊದಲಾದ ಪದಾರ್ಥಗಳನ್ನು ಸ್ವೀಕರಿಸಿ ಬ್ರೌಪದಿಯೊಡಗೂಡಿ ದ್ರುಪದನನ್ನು ಅಲ್ಲಿಯೇ ಇರಹೇಳಿ ಕೆಲವು ದಿನದ ಪ್ರಯಾಣಗಳಿಂದ ಹಸ್ತಿನಾಪುರದ ಸಮೀಪಕ್ಕೆ ಬಂದರು. ೫. ಆಕಾಶವನ್ನೇ ಅಪ್ಪಳಿಸುವ ಉಪ್ಪರಿಗೆಮನೆಗಳ ಸಮೂಹದಿಂದಲೂ ಚಲಿಸುತ್ತಿರುವ ಧ್ವಜಗಳಿಂದಲೂ ಶ್ರೇಷ್ಠವಾದ ಆನೆಯ ಕೊರಳಿನ ಗರ್ಜನೆಯಿಂದಲೂ ತಮಟೆಯ (ವಾದ್ಯದ) ದೊಡ್ಡ ಶಬ್ದವನ್ನು ಗುಡುಗೆಂದೇ ತಿಳಿದು ಕುಣಿದಾಡುತ್ತಿರುವ ನವಿಲುಗಳಿಂದಲೂ ಬಹು ರಮ್ಯವಾದ ಅಮರಾವತಿಯನ್ನು ಗೆದ್ದಿರುವ ಹಸ್ತಿನಾಪುರವನ್ನು ರಾಜಶ್ರೇಷ್ಠರಾದ ಪಾಂಡವರು ಆಗ ಸೇರಿದರು. ವ|| ಆಗ ಪಟ್ಟಣದ ಬೀದಿಗಳಲ್ಲೆಲ್ಲ ಶ್ರೀಗಂಧದ ನೀರನ್ನೂ ಪಂಚಗವ್ಯವನ್ನೂ (ಹಸುವಿಗೆ ಸಂಬಂಧಪಟ್ಟ ಹಾಲು ಮೊಸರು, ತುಪ್ಪ, ಗಂಜಲ,
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy