________________
೨೧೦ | ಪಂಪಭಾರತಂ ಕರ್ಣ ಶಲ್ಯ ಶಕುನಿ ನದೀತನೂಜ ಭಾರದ್ವಾಜ ಕೃಪಾದಿಗಳೊರಸಿದಿರ್ವಂದು ಯಥೋಚಿತ ಪ್ರತಿಪತ್ತಿಗಳಿಂದಯ್ಯರುಮಂ ನಿಬಿಡಾಲಿಂಗನಂಗೆಯ್ದು ಮುಂದಿಟ್ಟೋಡಗೊಂಡು ವಂದು ಫೋಬಿಲಂ ಪಗಿಸಿ ಮುನಮ ಸಮದ ಬೀಡುಗಳೊಳ್ ಬೀಡಂ ಬಿಡಿಸಿ ಸೂಚೋಳೆ ಬಿರ್ದನಿಕ್ಕಿ ವಿವಿಧ ವಿನೋದಂಗಳಂ ತೋಳೆ ಕೆಲವು ದಿವಸಮಿರ್ದು ದೊಣ ಭೀಷ್ಮ ಕೃಪ ವಿದುರರ್ಕಲ್ ತಮೋಳಾಲೋಚಿಸಿಯೆ ನಡಪಿದುದರ್ಕಂ ಕೂರ್ತುದರ್ಕಂ ಪಾಂಡುಪುತರ್ಗ ನೆಲನ ಪಚ್ಚುಕೂಟ್ಟು ಪಟ್ಟಮಂ ಕಟ್ಟುವೆನೆನೆ ದುರ್ಯೋಧನನೇಗೆಯುಮೊಡಂಬಡದಿರೆ ಭೀಷ್ಕರ್ ಮುನಿದುಚಂ11 ಒಡೆಯರದೇವರೆಂದು ನಿನಗಿತ್ತೊಡೆ ಪಟ್ಟಮನುರ್ಕಿದಷ್ಟ ಪೇಯ್
ಪೊಡವಿಗಧೀಶರಂತವರ್ಗಳಯ್ಯರುಮಂ ಕ್ರಮದಿಂದ ಪಟ್ಟಮಂ | ತಡೆಯದೆ ಕಟಿ, ಭೂತಳಮನಾಳಿಸದಿರ್ದೊಡದರ್ಕ ಸೊರ್ಕಿ ನೀಂ ನುಡಿಯದಿರಣ್ಣ ನಿನ್ನ ನುಡಿಗಾಂ ತಡೆದಿರ್ಪನೆ ಪೇಯ್ ಸುಯೋಧನಾ || ೬ ಕಮಮದನ ಕೊಟುದನೆ ಕೋಂಡು ಮನೋಮುದದಿಂದ ಬಾಬುದಂ ತವರಿವರೆಲ್ಲರುಂ ಸಮನದಲ್ಲದೆ ಮಾರ್ಮಲೆದುರ್ಕಿ ಭೀಮನೊಳ್ | ಸಮರದೆ ಗರ್ವದಿಂ ಪೊಣರಲಾರ್ಪಿರೆ ಗಾವಿಲರಿನ್ನುಮಲ್ಲರಂ ಯಮಸುತನುಂ ಸುರೇಂದ್ರಸುತನುಂ ಪೊಸದೀಗ ಮುಕ್ಕಿ ತೋಜರೇ ೭
ಸಗಣಿ ಇವುಗಳನ್ನು ಮಿಶ್ರಮಾಡಿ ಶುದ್ದಿಗಾಗಿ ಉಪಯೋಗಿಸುವ ಪದಾರ್ಥ) ಚಿಮುಕಿಸಿ ಧ್ವಜಗಳನ್ನೂ ತೋರಣಗಳನ್ನೂ ಗುಂಪುಗುಂಪಾಗಿ ಕಟ್ಟಿಸಿ ಧೃತರಾಷ್ಟ್ರನು ದುರ್ಯೊಧನ, ಕರ್ಣ, ಶಲ್ಯ, ಶಕುನಿ, ಭೀಷ್ಮ, ದ್ರೋಣ, ಕೃಪ ಮೊದಲಾದವರನ್ನೊಳಗೊಂಡು ಎದುರಾಗಿ ಬಂದು ಯಥೋಚಿತವಾದ ಮರ್ಯಾದೆ - ಸತ್ಕಾರಗಳಿಂದ ಅಯ್ದುಜನರನ್ನೂ ಗಟ್ಟಿಯಾಗಿ ಆಲಿಂಗನ ಮಾಡಿಕೊಂಡು ಮುಂದಿಟ್ಟುಕೊಂಡು ಕರೆದುತಂದು ಪಟ್ಟಣವನ್ನು ಪ್ರವೇಶಮಾಡಿದನು. ಮೊದಲೇ ಸಿದ್ಧಮಾಡಿದ್ದ ಮನೆಗಳಲ್ಲಿ ತಂಗುವ ಹಾಗೆ ಮಾಡಿ ಸಲಸಲಕ್ಕೂ ಆತಿಥ್ಯವನ್ನು ಮಾಡಿ ನಾನಾರೀತಿಯ ವಿನೋದಗಳನ್ನು ತೋರಿಸಿ ಸಂತೋಷಪಡಿಸಿದನು. ಕೆಲವು ದಿವಸಗಳಾದ ಮೇಲೆ ದ್ರೋಣ ಭೀಷ್ಮ ಕೃಪರುಗಳು ತಮ್ಮಲ್ಲಿ ಆಲೋಚನೆ ಮಾಡಿ ನಾವು ಸಾಕಿದುದಕ್ಕೂ ಪ್ರೀತಿಸಿದುದಕ್ಕೂ (ಅನುಗುಣವಾಗಿ) ಪಾಂಡವರಿಗೆ ರಾಜ್ಯವನ್ನು ಭಾಗಮಾಡಿಕೊಟ್ಟು ಪಟ್ಟವನ್ನು ಕಟ್ಟೋಣವೆಂದು ಹೇಳಲು ದುರ್ಯೋಧನನು ಏನು ಮಾಡಿದರೂ ಒಪ್ಪಲಿಲ್ಲ. ಭೀಷ್ಮರು ಕೋಪಿಸಿಕೊಂಡು-೬. 'ಓಡೆಯರಾದ ಪಾಂಡವರು ಏನು ಮಾಡಬಲ್ಲರು ಎಂದು ನಿನಗೆ ಪಟ್ಟವನ್ನು ಕೊಟ್ಟರೆ ಕೊಬ್ಬಿಹೋಗಿದ್ದೀಯೆ. ಹೇಳು ಭೂಮಿಗೆ ಒಡೆಯರಾದ ಆ ಆಯ್ದುಜನರಿಗೂ ಸಾವಕಾಶಮಾಡದೆ ಕ್ರಮವಾಗಿ ಪಟ್ಟವನ್ನು ಕಟ್ಟದೆ ರಾಜ್ಯವನ್ನೂ ಆಳಿಸದಿದ್ದುದಕ್ಕಾಗಿ ಸೊಕ್ಕಿ ನೀನು ಮಾತನಾಡಬೇಡವಯ್ಯಾ, ನಿನ್ನ ಮಾತಿಗೆ (ಅಪ್ಪಣೆಗೆ) ನಾನು ಕಾದಿರುತ್ತೇನೆಯೇ ಹೇಳು ಸುಯೋಧನ. ೭. 'ಕ್ರಮವಾದುದು ಯಾವುದು ಎಂಬುದುನ್ನು ತಿಳಿದುಕೊಂಡು ನಾನು ಕೊಟ್ಟುದುದನ್ನು ಮನಸ್ಸಂತೋಷದಿಂದ (ತೃಪ್ತಿಯಾಗಿ) ಬಾಳುವುದು; ಹಾಗೆ ಅವರು ಇವರು (ಪಾಂಡವರು ಕೌರವರು) ಸಮ ಎಂಬುದನ್ನು ತಿಳಿಯದೆ ಪ್ರತಿಭಟಿಸಿ