SearchBrowseAboutContactDonate
Page Preview
Page 213
Loading...
Download File
Download File
Page Text
________________ ಕಂ ಚತುರ್ಥಾಶ್ವಾಸಂ ಶ್ರೀರಮಣಿಯಂ ದ್ವಿಷದ್ದಳ ಪಾರಾವಾರದೊಳುದಗ್ರ ಭುಜ ವಿಜಯ ಮಹಾ | ಮರುವಿನ ಕಡೆದು ಪಡೆದಳ ವಾರುಮನಿಸಿದುದುದಾತ್ತನಾರಾಯಣನಾ C ವ|| ಅಂತು ದ್ರುಪದನ ಪೊಲೊಳ್ ಪಾಂಡವರ್ ಜಾಗಕ್ಕೆ ಬೂತುಂ ಭೋಗಕ ಪೊಲ್ಕುಂ ನೆಯದನಿಸಿ ಸುಖಸಂಕಥಾವಿನೋದದಿಂ ರಾಜ್ಯಂಗೆಯ್ಯುತ್ತಿರ್ಪನ್ನೆಗಮಿತ್ತಲ್ ಮ|| ಚರರಾಗೆಯ್ದಿದರೆಯ ಹಸ್ತಿನಪುರಾ ಪಾಂಡವರ್ ತಮ್ಮುತ ಧ್ವರುಮಿರ್ದರ್ ದ್ರುಪದಾಧಿರಾಜ ಪುರದೊಳ್ ಕೆಯೊಂಡು ಪಾಂಚಾಳಿಯಂ | ಧುರದೊಳ್ ಕರ್ಣನನಾಂತು ಗೆಲ್ಲವನವಂ ಸಂದರ್ಜುನಂ ತಳ್ಳು ಸಂ ಗರದೊಳ್ ಶಲ್ಯನನಿಕ್ಕಿ ಗೆಲ್ಲದಟನಾ ಭೀಮಂ ಗಡಂ ಕಾಣಿರೇ || ವ|| ಎಂಬ ಮಾತಂ ಧೃತರಾಷ್ಟ್ರ ದುರ್ಯೋಧನಾದಿಗಳ ಕೇಳು ಬಿಲ್ಲುಂಬೆಗುಮಾಗಿ ಕoll ಕಾಯ್ದಲು ಜತುಗೃಹದೊಳ ಗಯ್ಯರುಮಂ ಮಂತ್ರಬಲದೆ ಸುಟ್ರೊಡಮವರಂ | ದೆವ್ವಬಲವೊಂದ ಕಾದುದು ದಯಮನಾರಯ್ಯ ಮಾಜಿ ಬಾಟಲ್ ನೆವರ್ | و & ವ|| ಎಂಬುದುಂ ಭೀಷ್ಮ ದ್ರೋಣಾದಿಗಳ ನಿಶ್ಚಿತಮಂತರಾಗಿ ವಿದುರನಂ ಕರೆದಾಳೋಚಿಸಿ ಪೃಥಾತನೂಜರಂ ನಿನ್ನ ಬಲ್ಲ ಮಾಯಿಂ ನುಡಿದೊಡಂಗೊಂಡು ಬರ್ಪುದೆಂದು ೧. ಲಕ್ಷ್ಮಿದೇವಿಯನ್ನು ಶತ್ರುಸೈನ್ಯವೆಂಬ ಸಮುದ್ರದಲ್ಲಿ ತನ್ನ ಬಲಿಷ್ಠವೂ ವಿಜಯಪ್ರದವೂ ಆದ ತೋಳೆಂಬ ಮಹಾಮೇರುಪರ್ವತದಿಂದ ಕಡೆದು ಪಡೆದ ಅರ್ಜುನನ ಪರಾಕ್ರಮವು ಯಾರನ್ನೂ ತಿರಸ್ಕರಿಸಿತು, ಹಾಗೆ ದ್ರುಪದನ ಪಟ್ಟಣದಲ್ಲಿ ಪಾಂಡವರು (ತಾವು ಮಾಡುವ) ದಾನಕ್ಕೆ ಪಾತ್ರರಾದವರು ಒಬ್ಬರೂ ಉಳಿಯ ಲಿಲ್ಲವೆಂಬಂತೆಯೂ ಸೌಖ್ಯಪಡುವುದಕ್ಕೆ ಕಾಲಾವಕಾಶವು ಸಾಲದೆಂಬಂತೆಯೂ ಸೌಖ್ಯದಿಂದ ರಾಜ್ಯವಾಳುತ್ತಿದ್ದರು. ೨. ಗೂಢಚಾರರು ಹಸ್ತಿನಾಪಟ್ಟಣಕ್ಕೆ ಬಂದು ಆ ಪಾಂಡವರೆದುಮಂದಿಯೂ ದ್ರುಪದರಾಜನ ಪಟ್ಟಣದಲ್ಲಿ ಇದ್ದಾರೆ. ದೌಪದಿಯನ್ನು ಪಡೆದು ಯುದ್ಧದಲ್ಲಿ ಕರ್ಣನನ್ನು ಗೆದ್ದವನು ಪ್ರಸಿದ್ಧನಾದ ಅರ್ಜುನ, ಸಂಧಿಸಿ ಯುದ್ಧದಲ್ಲಿ ಶಲ್ಯನನ್ನೂ ಹೊಡೆದು ಸೋಲಿಸಿದ ಪರಾಕ್ರಮಿಯೇ ಭೀಮ ವll ಎಂಬ ಮಾತನ್ನು ಧೃತರಾಷ್ಟ್ರ ದುರ್ಯೋಧನನೇ ಮೊದಲಾದವರು ಕೇಳಿ ಆಶ್ಚರ್ಯಭರಿತರಾದರು. ೩. ತಮ್ಮ ಮನಸ್ಸನ್ನು ಸುಡುವ ದುಃಖವು ಹೆಚ್ಚಾಗುತ್ತಿರಲು ಅರಗಿನಮನೆಯಲ್ಲಿ ಅಯ್ದುಜನರನ್ನೂ ತಮ್ಮ ಮಂತ್ರಶಕ್ತಿಯಿಂದ ಸುಟ್ಟರೂ ಅವರನ್ನು ದೈವಬಲವೊಂದೇ ರಕ್ಷಿಸಿತು. ದೈವಬಲವನ್ನು ಮೀರಿ ಯಾರು ತಾನೆ ಬದುಕಲು ಸಮರ್ಥರಾಗುತ್ತಾರೆ? ಎಂದು ವ್ಯಥೆಪಟ್ಟರು. ವ|| ಭೀಷ್ಮ ದ್ರೋಣ ಮೊದಲಾದವರು ನಿಷ್ಕೃಷ್ಟವಾದ ಮಂತ್ರಾಲೋಚನೆಯುಳ್ಳವರಾಗಿ ವಿದುರನನ್ನು ಕರೆದು ಅವನೊಡನೆ ವಿಚಾರಮಾಡಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy