SearchBrowseAboutContactDonate
Page Preview
Page 212
Loading...
Download File
Download File
Page Text
________________ ತೃತೀಯಾಶ್ವಾಸಂ | ೨೦೭ ವll ಅಂತಾ ಯಿರುಳ ನಾಲ್ಕು ಜಾವಮುಂ ಕಾಮನ ಜಾಗರದಂತವರ್ಗೆ ಕೆಂದಿನೊಳೆ ಬೆಳಗಾಗೆ ಚಂ|| ನಿನಗಿನಿಸಪ್ರೊಡಂ ಮನದೊಳೋವದ ಕಲೆಯೆಂಬ ಪಾಪ ಕ ರ್ಮನ ಮಗಳ್ ಕರಂ ಪಲವುಮಂ ಸಜಿಗೆಯವಿವೆಂದು ತಮ್ಮ ನ | ಜೈನೊಳವನೊಪ್ಪಿಪಂತೆ ಮುಗುಳೊಳ್ ಮಸುಂದಿದ ತುಂಬಿ ಪಾಜಿ ಕೋ ಕನದ ಕುಲಂಗಳುಳ್ಳಲರ್ದುವೆಂಬಿನಮಂದೊಗದಂ ದಿವಾಕರಂ || ೮೪ ವ|| ಅಂತು ಮಾರ್ತಾಂಡನುಂ ಪ್ರಚಂಡ ಮಾರ್ತಾಂಡನುಮುದಿತೋದಿತರಾಗಮ ಕಚಭಾರಾಳಸಗಾಮಿನೀಪರಿವೃತಂ ಗಂಗಾತರಂಗೋಪಮಾ ನ ಚಳಚ್ಚಾಮರ ವಾತ ಪೀತ ನಿಜ ಘರ್ಮಾಂಭಃಕಣಂ ಬ್ರೌಪದೀ || ಕುಚಕುಂಭಾರ್ಪಿತ ಕುಂಕುಮದ್ರವ ವಿಲಿರಕ್ತಳಂ ದಾಂಟೆ ಕೀ ರ್ತಿ ಚತುರ್ವಾರ್ಧಿಯನಿರ್ದನಂದು ಸುಖದಿಂ ವಿದ್ವಿಷ್ಟ ವಿದ್ರಾವಣಂ || ೮೫ ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವವಿರಚಿತಮಪ್ಪ ವಿಕ್ರಮಾರ್ಜುನವಿಜಯದೊಳ್ ದೌಪದೀಕಲ್ಯಾಣವರ್ಣನಂ : ತೃತೀಯಾಶ್ವಾಸಂ ಸುರತಕ್ರೀಡೆಯಲ್ಲಿಯೇ ಕಳೆದವು. ಬೆಳಗಾಯಿತು. ೮೪. ಸ್ವಲ್ಪವಾದರೂ ನಿನಗೆ ಪ್ರಿಯವಲ್ಲದ ಕಳಲೆಯೆಂಬ ಪಾಪಿಷ್ಠನ ಮರಿಗಳನೇಕವನ್ನು ಇಗೋ ಸೆರೆಹಿಡಿದಿದ್ದೇನೆ. ಇದೋ ಇಲ್ಲಿ ಇದೆ, ಒಪ್ಪಿಸಿಕೋ ಎಂದು ತಮ್ಮ ಸ್ನೇಹದಿಂದ ಒಪ್ಪಿಸುವ ಹಾಗೆ ಮೊಗ್ಗುಗಳಲ್ಲಿ ಮಲಗಿದ್ದ ತುಂಬಿಗಳು ಹಾರಿಹೋಗಲು ಕಮಲಸಮೂಹಗಳು ಚೆನ್ನಾಗಿ ಅರಳಿದುವು, ಸೂರ್ಯೋದಯವಾಯಿತು. ವ|| ಹಾಗೆ ಸೂರ್ಯನೂ ಪ್ರಚಂಡಮಾರ್ತಾಂಡನಾದ ಅರ್ಜುನನೂ ಅಭಿವದ್ದಿಯಾಗುತ್ತಿರಲು-೮೫. ಕೇಶಪಾಶದ ಭಾರದಿಂದ ಬಳಲಿ ನಿಧಾನವಾಗಿ ನಡೆಯುವ ಸ್ತ್ರೀಯರಿಂದ ಸುತ್ತುವರಿಯಲ್ಪಟ್ಟವನೂ ಗಂಗೆಯ ಅಲೆಗಳ ಹಾಗೆ ಅಲುಗಾಡುತ್ತಿರುವ ಚಾಮರದ ಗಾಳಿಯಿಂದ ಕುಡಿಯಲ್ಪಟ್ಟ ತನ್ನ ಬೆವರಿನ ಹನಿಯನ್ನುಳ್ಳವನೂ ಬ್ರೌಪದಿಯ ಕುಚಕುಂಭಗಳಿಗೆ ಲೇಪನ ಮಾಡಿದ್ದ ಕುಂಕುಮಕೇಸರಿಯ ದ್ರವದಿಂದ ಕೂಡಿಕೊಂಡಿರುವ ಎದೆಯುಳ್ಳವನೂ ಆದ ಅರ್ಜುನನು ತನ್ನ ಕೀರ್ತಿಯು ನಾಲ್ಕು ಸಮುದ್ರಗಳನ್ನೂ ದಾಟಿರಲು ಆ ದಿನ ಅಲ್ಲಿ ಸುಖವಾಗಿದ್ದನು. ವ|| ಇದು ವಿವಿಧ ವಿದ್ವಾಂಸರಿಂದ ಸ್ತುತಿಸಲ್ಪಟ್ಟ ಜಿನನ ಪಾದಕಮಲದ ವರಪ್ರಸಾದದಿಂದ ಹುಟ್ಟಿದುದೂ ಪ್ರಸನ್ನವೂ ಗಂಭೀರವೂ ಆದ ಮಾತುಗಳನ್ನು ರಚಿಸುವುದರಲ್ಲಿ ಜಾಣನಾದ ಕವಿತಾಗುಣಾರ್ಣವನಿಂದ ವಿರಚಿತವಾದುದೂ ಆದ ವಿಕ್ರಮಾರ್ಜುನವಿಜಯದಲ್ಲಿ ಬ್ರೌಪದೀಕಲ್ಯಾಣ ವರ್ಣನಾತ್ಮಕವಾದ ಮೂರನೆಯ ಆಶ್ವಾಸ.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy