SearchBrowseAboutContactDonate
Page Preview
Page 201
Loading...
Download File
Download File
Page Text
________________ - ೧೯೬ | ಪಂಪಭಾರತಂ ಈ ವ|| ಅಂತು ನೆರೆದರಸುಮಕ್ಕಳಾರುಮಂ ಮೆಚ್ಚದೆ ಮಗುವವರೆ ದ್ರುಪದನಿದಳೆಲ್ಲ ಮೇನಿಂ ಹೋಮಾಗ್ನಿಸಂಭವಮಪ್ಪ ದಿವಚಾಪಮನೇಸಿಯುಮಾಯಯು ಶರದೊಳಾಕಾಶದೊಳ್ ನಲಿದು ಪೊಳೆಯುತ್ತಿರ್ಪ ಜಂತ್ರದ ಮಾನನಿಸಲಾರ್ಪೊಡೆ ಬಂದೇತಿಸಿಯುಮೆಚ್ಚು ಗೆಲ್ಲಂಗೊಂಡನ್ನ ಮಗಳ ಮದುವೆಯಪ್ಪುದೆಂಬುದುಮಾಮಾಮೆ ಬಿಲ್ಲನೇಟಿಸಿದಪವೆಂದನಿಬರನುಮರಸುಮಕ್ಕಳ ಬಂದು* ಉlು ಏಪವಂದರ್ ನೆಲದಿನೆತ್ತಲುಮಾಯಿದೆ ಬಿಟ್ಟು ನೆತ್ತರಂ ಕಾಯುಮತಿ ಕಮ್ಯುಡಿದುಮಾಗಳೆ ಕಾಲುಡಿದುಂ ಬುಲ್ಲು ಪ ಬ್ಲಾಳ ಪೊಡರ್ಪುಗಟ್ಟುಸಿರಲಪ್ರೊಡಮಾಜದ ಪೋಡಾಗಳಾ ನೇಟಿಪನೆಂದು ಪೊಚ್ಚಲಿಸಿ ಬಂದು ಸುಯೋಧನನುಗ್ರಚಾಪಮಂ || - ೫೮ ವ|| ಮೂಜು ಸೂಮ್ ಬಲವಂದು ಪೊಡಮಟ್ಟುಕ೦ll ಪಿಡಿದಾರ್ಪ ಭರದಿನ : ಲೊಡರಿಸಿದೊಡೆ ನೆಲದಿನಣಮೆ ತಳರದ ಬಿಲ್ ನಿ || ಲೊಡ ಗುಡು ಗುಡು ಗುಡು ಗೊಳ್ಳೆಂ ಡೊಡನಾರೆ ಸುಯೋಧನಂ ಕರಂ ಸಿಗ್ತಾದಂ || - ೫೯ ಯೋಗ್ಯತೆಯುಳ್ಳವರು ಎಂದು ಚೆನ್ನಾಗಿ ತಿಳಿಯುವ ಹಾಗೆ ಹೇಳಿ ಹೇಳಿ ರಾಜರೊಬ್ಬರಿಂದ ಮುಂದಕ್ಕೆ ಆ ಬ್ರೌಪದಿಯನ್ನು ಬಿರುಸಾಗಿ ಬೀಸಿದ ಗಾಳಿಯಿಂದ ಮೇಲಕ್ಕೆದ್ದ ವಿಶಾಲವೂ ಚಂಚಲವೂ ಆದ ಅಲೆಗಳ ಸಾಲು ಹದವರಿತು ಕಮಲದಿಂದ ಮೇಲಕ್ಕೆ ರಾಜಹಂಸವನ್ನು ಸೆಳೆದೊಯ್ಯುವ ರೀತಿಯಲ್ಲಿ ಈ ಚೇಟಿಯು ಕರೆದುಕೊಂಡು ಹೋದಳು. ವ|| ಹಾಗೆ ಅಲ್ಲಿ ಸೇರಿದ್ದ ರಾಜಕುಮಾರರಲ್ಲಿ ಯಾರನ್ನೂ ಮೆಚ್ಚದೆ ಬ್ರೌಪದಿಯು ಹಿಂದಿರುಗಿ ಬರಲು ದ್ರುಪದನು ಇದರಲ್ಲೇನಿದೆ, ಅಗ್ನಿಕುಂಡದಲ್ಲಿ ಹುಟ್ಟಿದ ದಿವ್ಯಧನುವನ್ನು ಹೆದೆಯೇರಿಸಿ ಈ ಅಯ್ತು ಬಾಣಗಳಿಂದ ಆಕಾಶದಲ್ಲಿ ನಲಿದು ಹೊಳೆಯುತ್ತಿರುವ ಯಂತ್ರದ ಮೀನನ್ನು ಹೊಡೆಯಲು ಸಮರ್ಥನಾದರೆ ಬಂದುಬಿಲ್ಲನ್ನು ಹೂಡಿ ಜಯವನ್ನು ಪಡೆದು ನನ್ನ ಮಗಳನ್ನು ಮದುವೆಯಾಗಬಹುದು ಎಂಬುದಾಗಿ ಸಾರಿದನು. ನಾವು ತಾವು ಬಿಲ್ಲನ್ನು ಏರಿಸುತ್ತೇವೆಂದು ಎಷ್ಟೋ ಜನ ರಾಜಕುಮಾರರು ಬಂದರು. ೫೮. ಏರಿಸುತ್ತೇನೆ ಎಂದವರು ಅದನ್ನು ನೆಲದಿಂದೆತ್ತಲೂ ಸಮರ್ಥರಾಗದೆ ಬಿದ್ದು ರಕ್ತವನ್ನು ಕಾರಿ, ಕೈಮುರಿದು ಕಾಲುಮುರಿದು ಬಳಲಿ ಬಾಯೊಣಗಿ ಶಕ್ತಿಗುಂದಿ ಉಸಿರಿಸುವುದಕ್ಕೂ ಆಗದೆ ಹೋಗಲು ದುರ್ಯೋಧನನು ನಾನು ಏರಿಸುತ್ತೇನೆಂದು ಜಂಭದಿಂದ ಬಂದನು, ಆ ಭಯಂಕರವಾದ ಬಿಲ್ಲನ್ನು ವl ಮೂರುಸಲ ಪ್ರದಕ್ಷಿಣೆಮಾಡಿ ನಮಸ್ಕರಿಸಿದನು. ೫೯. ಹಿಡಿದುಕೊಂಡು ತನ್ನ ಶಕ್ತಿಯಿದ್ದಷ್ಟನ್ನೂ ಉಪಯೋಗಿಸಿ ವೇಗದಿಂದ ಎತ್ತಲು ಪ್ರಯತ್ನಪಟ್ಟನು, ಅದು ನೆಲದಿಂದ ಸ್ವಲ್ಪವೂ ಅಲುಗದೆ ನಿಂತುಬಿಟ್ಟಿತು. ಗುಡುಗುಡುಗುಡುಗೊಳ್ಳೆಂದು ನೋಡುತ್ತಿದ್ದವರು ಕೂಗಿಕೊಂಡರು, ದುರ್ಯೋಧನನು ವಿಶೇಷವಾಗಿ ಲಜ್ಜಿತನಾದನು.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy