SearchBrowseAboutContactDonate
Page Preview
Page 200
Loading...
Download File
Download File
Page Text
________________ " ತೃತೀಯಾಶ್ವಾಸಂ | ೧೯೫ ವll ಮತ್ತಿತ್ತ ಬೀಸುವ ಚಾಮರಂಗಳ ಪೊಳಪಿನೊಳಮೆತ್ತಿದ ಬೆಳೊಡೆಗಳ ಬೆಳ್ಳಿನೊಳಂ ದೆಸೆಗಳೆಲ್ಲಂ ಧವಳಿಸಿದನ್ನವಾಗಿ ಪೊಗಳುತ ವರ್ಷವರ ಸರಂಗಳೊಳಂ ಪಾಡುವ ಪಾಠಕಾರಿಂ ಚರಂಗಳೊಳೆಲ್ಲಂ ದಿಗ್ಧತಿಗಳ ತೆಕ್ಕನೆ ತೀವ್ರ ಮಣಿಮಯಪೀಠದ ಮೇಲೆ ಕಾಲನವಷ್ಟಂಭದಿಂ ನೀಡಿ ಮ|| ಅಲರಂಬಿಂದುದನ್ನ ಮೆಲ್ಲೆರ್ದೆಯನಿಂತುರ್ಚಿತ್ತಿದೆಂಬಂತ ನ ಯಲ ಕಾವಂ ತಿರುವುತ್ತುಮೊಂದನನಿಬರ್ ತಮ್ಮಂದಿರುಂ ತನ್ನೆರ | ಅಲದೊಳ್ ಬಂದಿರ ನೋಡಿ ಸೋಲು ನಿನಗಾ ಗೇಯಕ್ಕೆ ಸೋಲಂತೆವೋಲ್ ತಲೆಯಂ ತೂಗುವವಂ ಸುಯೋಧನನೃಪಂ ನೀನಾತನ ನೋಡುಗೇ || ವl ಮತ್ತಿತ್ತ ಮಿಂಚಂ ತಟ್ಟಿ ಮಡದಂತೆ ಸುತ್ತಿದ ಕಾಲ್ತಾಪಿನ ಕಡಿತಲೆಯ ಬಳ ಸಿದಗಣ್ಯ ಪಣ್ಯಾಂಗನಾಜನದ ನಡುವೆ ಮಣಿಮಯಪೀಠಂಗಳನೇ ಕಂ11 ಆಯತ ಯದುವಂಶ ಕುಲ ಶ್ರೀಯಂ ತಬ್ಬಿಸಿದದಟರತಿರಥರವರ | ತ್ಯಾಯತಭುಜಪರಿಘರ್ ನಾ ರಾಯಣ ಬಲದೇವರೆಂಬರಂಬುಜವದನೇ || 9999 ವ|| ಎಂದು ಕಿಳದಂತರಂ ಪೋಗಿ ಉ।। ೫೬ ಇಂತಿವರಿನ್ನರೀ ದೊರೆಯರೆಂದವಂತಿರ ಪೇಯ್ದು ಟ್ಟು ರಾ ಜಾಂತರದಿಂದ ರಾಜಸುತೆಯಂ ನಯದಿಂದವಳುಯ್ದಳಂತು ಸ | ದ್ಧಾಂತ ಸಮಾರಗೋಷ್ಠಿತ ವಿಶಾಳ ವಿಳೋಳ ತರಂಗ ರೇಖೆ ಪ ದಾಂತರದಿಂದಮಿಂಬಲೆದು ಮಾನಸಹಂಸಿಯನುಯ್ಯಮಾರ್ಗದಿಂ || ಸೂರ್ಯತೇಜಸ್ಸುಳ್ಳ ಆತ ಕಳಿಂಗದೇಶದರಸನು ನೋಡು. ವll ಈ ಕಡೆ ಬೀಸುವ ಚಾಮರಗಳ ಹೊಳಪಿನಿಂದಲೂ ಎತ್ತಿದ ಬೆಳುಗೊಡೆಗಳ ಬೆಳುಪಿನಿಂದಲೂ ದಿಕ್ಕುಗಳಲ್ಲಿ ಬಿಳಿಯಬಣ್ಣದಿಂದ ಕೂಡಿದುದಾಗಿರಲು ಹೊಗಳುತ್ತಲಿರುವವರ ಸ್ವರಗಳಿಂದಲೂ ಹಾಡುತ್ತಿರುವವರ ಹೊಗಳುಭಟ್ಟರ ಮಧುರವಾದ ಧ್ವನಿಗಳಿಂದಲೂ ದಿಗಂತಗಳೆಲ್ಲವೂ ಇದ್ದಕ್ಕಿದ್ದ ಹಾಗೆ ತುಂಬಿರಲು ರತ್ನಖಚಿತವಾದ ಆಸನದ ಮೇಲೆ ತನ್ನ ಕಾಲನ್ನು ಠೀವಿಯಿಂದ ನೀಡಿ ೫೫. ನನ್ನ ಮೃದುವಾದ ಹೃದಯವನ್ನು ಪುಷ್ಪಬಾಣವು ಈ ದಿನ ಹೀಗೆ ಚುಚ್ಚುತ್ತಿದೆ ಎನ್ನುವ ಹಾಗೆ ನೆಯ್ದಿಲ ಹೂವಿನ ಕಾವನ್ನು ಒಂದು ಕೈಯಲ್ಲಿ ತಿರುಗಿಸುತ್ತಲೂ ಅಷ್ಟು ಜನ ತಮ್ಮಂದಿರೂ ತನ್ನ ಎರಡು ಪಕ್ಕದಲ್ಲಿಯೂ ಬಂದಿರಲು ನಿನ್ನ ಸೌಂದರ್ಯಕ್ಕೆ ಸೋತಿದ್ದರೂ ಆ ಸಂಗೀತಕ್ಕೆ ಸೋತವನಂತೆ ತಲೆಯನ್ನು ತೂಗುವ ಅವನು ದುರ್ಯೋಧನ ಭೂಪತಿ; ಆತನನ್ನು ನೀನು ನೋಡು. ವ|| ಈ ಕಡೆ ಮಿಂಚನ್ನೇ ಮುಸುಕಿದ್ದಾರೆಯೋ ಎನ್ನುವಂತಿರುವ ಅಸಂಖ್ಯಾತರಾದ ವೇಶ್ಯಾಸ್ತ್ರೀಯರ ಮಧ್ಯೆ ರತ್ನಖಚಿತವಾದ ಪೀಠದ ಮೇಲೆ ೫೬. ಕುಳಿತಿರುವವರು ವಿಸ್ತಾರವಾದ ಯದುಲಕ್ಷ್ಮಿಯನ್ನು ಆಲಿಂಗನಮಾಡಿಕೊಂಡಿರುವ ಶೂರರೂ ಪರಾಕ್ರಮಿಗಳೂ ದೀರ್ಘ ವಾದ ಪರಿಘಾಯುಧದಂತಿರುವ ತೋಳುಗಳನ್ನುಳ್ಳವರೂ ಆದವರು ಕೃಷ್ಣಬಲರಾಮ ರೆಂಬುವರು. ವ|| ಎಂದು ಸ್ವಲ್ಪದೂರ ಹೋಗಿ ೫೭. ಇವರು ಇಂತಹವರು, ಈ 9:2
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy