SearchBrowseAboutContactDonate
Page Preview
Page 202
Loading...
Download File
Download File
Page Text
________________ ತೃತೀಯಾಶ್ಚಾಸಂ | ೧೯೭ ವ|| ಆಗಿ ಪೋಗಿ ಕರ್ಣನ ಮೊಗಮಂ ನೋಡಿದೊಡೆ ಕರ್ಣನಾಳನ ಸಿಗ್ಲಾದ ಮೊಗಮಂ ಕಂಡುಕಂ|| ಆನೇಟಿಪನೆಂದಾ ಕಾ ನೀನಂ ಬಂದೆ ಬಿಲ್ಲನೇತಿಸಿ ತೆಗೆಯತ್ || ತಾನಾರ್ತನಿಲ್ಲ ತಗೆವಂ ತಾ ನೃಪತಿಗಳರಿಗನಿದಿರೊಳೇಂ ಪುಟ್ಟಿದರೇ | ವ1 ಅಂತಾ ಬಿಲ್ಲಂ ಪಿಡಿದವರೆಲ್ಲಂ ಬಿಲ್ಕುಂಬಿಗುಮಾಗಿ ಸಿಗ್ಗಾಗಿ ಪೋಗಿ ತಂತಮ್ಮಿರ್ಪಡೆಯೊಳಿರೆ ಪಾಂಚಾಳರಾಜನೀ ನೆರೆದರಸುಮಕ್ಕಳೊಳಾರುಮಾ ಬಿಲ್ಲನೇಷಿಸಲಾರ್ತ ರಿಲ್ಲಮಾ ಜನವಡೆಯೊಳಾರಾನುಮಿಾ ಬಿಲ್ಲನೇಷಿಸಲಾರ್ಫೋಡ ಬನ್ನಿಮೆಂದು ಸಾಲುವುದುಂ 9. ಚoll ಮುಸುಕಿದ ನೀರದಾವಳಿಗಳಂ ಕಿರಣಂಗಳೊಳೊತ್ತಿ ತೇಜಮ ರ್ವಿಸುವಿನಮಾರ್ಗ ದಲೆ ಮೂಡುವ ಬಾಳ ದಿನೇಶಬಿಂಬದೊಂ | ದಸಕದಿನಾ ದಿ.ಜನಸಭಯಂ ಪೊಅಮಟೂಡೆ ಮಾಸಿದಂದಮುಂ ಪಸದನದಂತ ಕಕ್ಕಸದು ತೋಚಿದುದಾ ಕದನತ್ರಿಣೇತ್ರನಾ 1 . ೬೧ ವ|| ಅಂತು ಪೊಲಮಡುವರಾತಿಕಾಲಾನಲನಂ ಕಂಡು ಕಟ್ಟುವಂದ ದೊಡ್ಡರೆಲ್ಲಂ * ಮುಸುಕಂl ಸಂಗತಸತ್ವರ್‌ ಕುರು ರಾ ಜಂಗ ಕರ್ಣಂಗಮೇಳೆಸರಿದನಿದಂ | ತಾಂ ಗಡಮೇಟಿಪನೀ 'ಪಾ ರ್ವಂಗಕ್ಕಟ ಮಯೊಳೊಂದು ಮರುಳುಂಟಕ್ಕುಂ | ವ|| ದುರ್ಯೊಧನನು ಕರ್ಣನ ಮುಖವನ್ನು ನೋಡಿದನು. ಕರ್ಣನು ಸ್ವಾಮಿಯ ನಾಚಿದ ಮೊಗವನ್ನು ನೋಡಿ ೬೦. ನಾನು ಏರಿಸುತ್ತೇನೆಂದು ಬಂದು ಎತ್ತಿ ಏರಿಸಲು ಶಕ್ತನಾಗಲಿಲ್ಲ. ಹಾಗೆ ಮಾಡುವುದಕ್ಕೆ ಆ ರಾಜರುಗಳು ಅರ್ಜುನನಿಗಿಂತ ಸಮರ್ಥರಾಗಿ ಹುಟ್ಟಿದ್ದಾರೆಯೇನು? ವll ಹಾಗೆ ಆ ಬಿಲ್ಲನ್ನು ಹಿಡಿದವರೆಲ್ಲರೂ ಅಸ್ತವ್ಯಸ್ತವಾಗಿ ಲಜ್ಜಿತರಾಗಿ ಹೋಗಿ ತಾವು ತಾವು ಇದ್ದ ಸ್ಥಳಗಳಲ್ಲಿದ್ದರು. ಆಗ ದ್ರುಪದನು ಇಲ್ಲಿರುವ ರಾಜಕುಮಾರರಲ್ಲಿ ಈ ಬಿಲ್ಲನ್ನೇರಿಸಲು ಯಾರೂ ಶಕ್ತರಾಗಲಿಲ್ಲ. ಈ ಜನದ ಗುಂಪಿನಲ್ಲಿ ಯಾರಾದರೂ ಈ ಬಿಲ್ಲನ್ನೇರಿಸುವ ಶಕ್ತಿಯಿದ್ದರೆ ಬನ್ನಿ ಎಂದು ಸಾರಿದನು. ೯೧. ಮುಚ್ಚಿಕೊಂಡಿರುವ ಮೋಡಗಳ ಸಮೂಹವನ್ನು ಕಿರಣಗಳಿಂದ ಒತ್ತಿ ತೇಜಸ್ಸು ಪ್ರಕಾಶಮಾನವಾಗುತ್ತಿರಲು ಇದ್ದಕ್ಕಿದ್ದ ಹಾಗೆ ಉದಯವಾಗುವ ಬಾಲಸೂರ್ಯ ಬಿಂಬದೊಂದು ರೀತಿಯಲ್ಲಿ ಬ್ರಾಹ್ಮಣಸಭೆಯಿಂದ ಅರ್ಜುನನು ಹೊರಟು ಬಂದನು. ಆ ಕದನತ್ರಿಣೇತ್ರನ ಮಲಿನವಾಗಿದ್ದ ರೀತಿಯೂ ಅಲಂಕಾರಮಾಡಿರು ವಂತೆಯೇ ಕಣ್ಣಿಗೆ ರಮಣೀಯವಾಗಿ ತೋರಿತು. ವ|| ಹಾಗೆ ಹೊರಟು ಬರುವ ಅರಾತಿಕಾಲಾನಲನನ್ನು ಕಂಡು ಗಡ್ಡಬಂದ ವೃದ್ದರೆಲ್ಲ ಮುತ್ತಿಕೊಂಡು ೬೨. ಸತ್ವಶಾಲಿಗಳಾದ ದುರ್ಯೊಧನಕರ್ಣರಿಗೂ ಏರಿಸುವುದಕ್ಕೆ ಅಸಾಧ್ಯವಾದ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy