SearchBrowseAboutContactDonate
Page Preview
Page 199
Loading...
Download File
Download File
Page Text
________________ ೧೯೪) ಪಂಪಭಾರತಂ ಮೊನೆಯಂಬುಗಳೊಳೆ ಪೂಣ್ಣಪ ನನಿಬರುಮಂ ಕಿಂದು ಬೇಗದಿಂ ಹರಿಗನದ | ರ್ಕೆನಗೆಡವೇಬ್ರುಮ ಎಂಬವೊ ಲನಿಬರುಮಂ ಪೂಣ್ಣನತನು ನನೆಯಂಬುಗಳಿ೦ || ವ|| ಆಗಳ್ ಪಾಂಡವರ್ ತಮ್ಮಂ ಪೆರಳಯದಂತು ಬ್ರಾಹ್ಮಣವೇಷದೊಳೆ ಬ್ರಹ್ಮಸಭೆಯೊಳ್ ಬಂದಿರೆಚಂ|| ಇಳೆಯೊಳುದಗ, ವೀರ ಭಟ ತುಂಗ ಮತಂಗಜ ವಾಜಿ ರಾಜಿ ಚಾ ಪಳಿಗೆಗಳೊಳ್ ಧರಾಧರ ಧುರಂಧರ ಬಂಧುರ ರಾಜಕಂ ವಿಯ | ತಳದೊಳನೇಕ ಕಿಂಪುರುಷ ಕಿನ್ನರ ಖೇಚರ ಸಿದ್ಧ ಬೃಂದಮ “ಎಳಿಸಿರೆ ಮೂಜು ಲೋಕಮನ ಪೋಲ್ತುದು ಮೂಲೆಯಿಂ ಸ್ವಯಂಬರಂ || ವ|| ಆಗಳ್ ವಿದಿತವೃತ್ತಾಂತೆಯಾಗಿ ದೌಪದಿಯ ಕೆಲದೊಳಿರ್ದ ಸುಂದರ ಮಾಲೆಯೆಂಬ ಚೀಟಿ ಮ|| ಕನಕೋಚ್ಛಾಸನಸಂಸ್ಥಿತಂ ನೃಪನವಂ ಬೆಂಗೀಶನುತ್ತುಂಗ ಪೀ ನ ನಿಜಾಂಸಾರ್ಪಿತ ಲಂಬಹಾರನವನಾ ಪಾಂಡಂ ಮನಂಗೊಂಡು ನಿ | ನನ ಕಿಟ್ಟಗೂಳೆ ನೋಡುತಿರ್ಪವನವಂ ಚೇರಮ್ಮನಾದಿತ್ಯ ತೇ ಜನವಂ ನೋಡು ಕಳಿಂಗದೇಶದರಸಂ ಪಂಕೇಜ ಪಕ್ಷಣೇ || ೫೪ ಅನೇಕರು ಪ್ರಯೋಗಮಾಡಿದ ಬಾಣಗಳ ಮಧ್ಯೆ ಸಿಕ್ಕಿದ ಹುಲ್ಲೆಯಂತೆ ಬ್ರೌಪದಿ ತೋರಿದಳು. ೫೨. ಅರಿಗನು ಅಲ್ಪಕಾಲದಲ್ಲಿಯೇ ಅಷ್ಟುಜನವನ್ನೂ ಮೊನಚಾದ ಬಾಣಗಳಿಂದ ಹೂಳಿಬಿಡುತ್ತಾನೆ. ಅದಕ್ಕಾಗಿ ನಾನು ಬಾಣಬಿಡುವುದಕ್ಕೆ ಸ್ಥಳಬೇಕಲ್ಲವೇ? ಎನ್ನುವ ಹಾಗೆ ಮನ್ಮಥನು ಅಷ್ಟು ಜನರನ್ನೂ ಪುಷ್ಪಬಾಣಗಳಿಂದ ಹೂಳಿದನು. ವ|| ಆಗ ಪಾಂಡವರು ತಮ್ಮನ್ನು ಇತರರು ತಿಳಿಯದಂತೆ (ಗುರುತಿಸದಂತೆ) ಬ್ರಾಹ್ಮಣವೇಷದಿಂದಲೇ ಬ್ರಹ್ಮಸಭೆಯಲ್ಲಿ ಬಂದು ಕುಳಿತಿದ್ದರು. ೫೩. ಭೂಮಿಯಲ್ಲಿ (ನೆಲದ ಮೇಲೆ) ಶ್ರೇಷ್ಠರಾದ ಭಟರೂ ಎತ್ತರವಾದ ಮದ್ದಾನೆ ಮತ್ತು ಕುದುರೆಯ ಸಮೂಹಗಳೂ ಚಚ್ಚಕವಾದ ಮಂಟಪಗಳಲ್ಲಿ ರಾಜಶ್ರೇಷ್ಠರ ಮನೋಹರವಾದ ಸಮೂಹವೂ ಅಂತರಿಕ್ಷ ಪ್ರದೇಶದಲ್ಲಿ ಕಿಂಪುರುಷ, ಕಿನ್ನರ, ಖೇಚರ, ಸಿದ್ಧಪುರುಷರ ಸಮೂಹವೂ ತುಂಬಿರಲು ಈ ಮೂರುನೆಲೆಗಳಿಂದ ಸ್ವಯಂವರಮಂಟಪವು ಮೂರುಲೋಕವನ್ನೂ ಹೋಲುತ್ತಿತ್ತು. ವ|| ಆಗ ಅಲ್ಲಿರುವವರ ವಿಷಯವನ್ನು ತಿಳಿದುಕೊಂಡು ಪಕ್ಕದಲ್ಲಿದ್ದ ಸುಂದರಮಾಲೆಯೆಂಬ ಚೇಟಿಯು ಬ್ರೌಪದಿಗೆ ಅವರ ಪರಿಚಯ ಮಾಡಿಸಿದಳು. ೫೪, ಎಲ್‌ ಕಮಲದಳಾಕ್ಷಿಯಾದ ಬ್ರೌಪದಿಯೇ ಆ ಎತ್ತರವಾದ ಚಿನ್ನದ ಪೀಠದಲ್ಲಿ ಕುಳಿತಿರುವವನು ವಂಗದೇಶದ ದೊರೆ, ಎತ್ತರವೂ ದಪ್ಪವೂ ಆದ ಭುಜದಲ್ಲಿ ಉದ್ದವಾದ ಹಾರವುಳ್ಳವನು ಪಾಂಡ್ಯ, ವಿಶೇಷ ಆಕರ್ಷಿತನಾಗಿ ಕೆಳಗಣ್ಣಿನಲ್ಲಿ ನಿನ್ನನ್ನೇ ನೋಡುತ್ತಿರುವವನು ಚೇರಮ,
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy