SearchBrowseAboutContactDonate
Page Preview
Page 18
Loading...
Download File
Download File
Page Text
________________ ಉಪೋದ್ಘಾತ | ೧೩ ಅಯೋಧ್ಯೆಗೆ ಕರೆದುತಂದು ತಾಯಿತಂದೆಗಳಿಗೊಪ್ಪಿಸಿ ವೃಷಭಸ್ವಾಮಿಯೆಂದು ಹೆಸರಿಟ್ಟು ತನ್ನ ಲೋಕಕ್ಕೆ ತೆರಳುವನು. ಬಾಲಕನು ಸಹೋತ್ಪನ್ನಮತಿಶ್ರುತಾವಧಿಜ್ಞಾನ ಬೋಧನಾದುದರಿಂದ ಪ್ರತ್ಯಕ್ಷೀಕೃತ ಸಕಲವಾಹ್ಮಯನಾಗಿ ಪ್ರತಿದಿನಪ್ರವೃದ್ಧಮಾನ ತನೂವಯೋವಿಭವನಾಗಲು ಅವನ ಯವ್ವನವು ಅತಿಮನೋಹರವಾಗುವುದು. ಆದರೂ ಚಂಚಲೆಯಾದ ರಾಜ್ಯಲಕ್ಸಿಯಲ್ಲಿಯೂ ಸಾರವಿಲ್ಲದ ಸಂಸಾರದಲ್ಲಿಯೂ ಪರಮನಿಗೆ ಅನಾದರಣೆವುಂಟಾಯಿತು. ಆಗ ತಂದೆಯಾದ ನಾಭಿರಾಜನು ಮಗನ ಪರಿಪೂರ್ಣಯವನಶ್ರೀಯನ್ನು ನೋಡಿ ಇದು ದಲ್, ಅವಸ್ತುವನ್ನದೆ, ಮದುಕಿಯನೊಯ್ಯನೆ ಕೇಳು, ದಿವ್ಯಚಿ ಇದೊಳವಧಾರಿಸೆಂತನೆ ಜಗದ್ಗುರು ಲೋಹಿತಾರ್ಥದಿಂದ ಸ ಲೈುದು ವಲಮಿಂತಿದಂ ಬಗೆದು ಪುತ್ರಕಳತ್ರಪರಿಗ್ರಹಕ್ಕೆ ಮಾ ಣದೆ ಬಗೆದರ್ಪುದು, ಒಲ್ಲೆನಿದನೆಂದೊಡೆ ಸೃಷ್ಟಿಯ ಕೆಟ್ಟುಪೋಗದೇ || ಶಾಂತಾತ್ಮ ಮದುವೆನಿಲ್ ನೀ ನಿಂತೆನ್ನ ಗೃಹಸ್ಥ ಧರ್ಮದಿಂದಂ ನೀನೆಂ ತಂತೆ ಸಲೆ ನೆಗಳ ಜಗತೀ ಸಂತತಿ ನಿನ್ನ ಧರ್ಮಸಂತತಿ ನಿಲ್ಕುಂ || ಎಂದು ಒತ್ತಾಯಪಡಿಸಲು ಆತನ ಉಪರೋಧಕ್ಕಾಗಿಯೂ ಪ್ರಜಾನುಗ್ರಹಕ್ಕಾಗಿಯೂ ಯಶಸ್ವತೀ ಮತ್ತು ಸುನಂದೆ ಎಂಬ ಎರಡು ಕನ್ಯಾರತ್ನಗಳನ್ನು ಪುರುದೇವನು ವರಿಸುವನು. ಮೊದಲನೆಯವಳಲ್ಲಿ ಭರತನೂ ಬ್ರಹ್ಮಯೂ ಎರಡನೆಯವಳಲ್ಲಿ ಬಾಹುಬಲಿ ಸೌಂದರಿಯರಲ್ಲದೆ ಒಟ್ಟು ನೂರುಪುತ್ರರೂ ಇಬ್ಬರು ಪುತ್ರಿಯರೂ ಜನಿಸಿದರು. ವೃಷಭನಾಥನು ಇವರೆಲ್ಲರಿಗೂ ಮತ್ತು ಇತರರಿಗೂ ಸಮಸ್ತ ವಿದ್ಯೆಗಳನ್ನು ಉಪದೇಶಮಾಡಿ ಕೃತಯುಗವನ್ನು ಪ್ರಾರಂಭಿಸಿ ರಾಜ್ಯಾಭಿಷಿಕ್ತನಾಗಿ ವಿವಿಧ ರಾಜವಂಶಗಳನ್ನು ಸ್ಥಾಪಿಸಿ ಅನೇಕ ಸಹಸ್ರವರ್ಷಗಳ ಕಾಲ ಆಳಿ ಭೂಮಂಡಲದಲ್ಲಿ ಸಕಲ ಸಂಪತ್ಸಮೃದ್ಧಿಯನ್ನುಂಟುಮಾಡಿದನು. ಆಗ ಆದಿದೇವನ ಪರಿನಿಷ್ಟ್ರಮಣ ಕಾಲ ಪ್ರಾಪ್ತವಾಯಿತು. ಇದನ್ನರಿತು ದೇವೇಂದ್ರನು ಸಂಗೀತ ಮತ್ತು ನೃತ್ಯಪ್ರಸಂಗದಿಂದ ಪ್ರತಿ ಬೋಧಿಸಲು ಸಕಲ ದೇವಾನೀಕದ ಜೊತೆಯಲ್ಲಿ ಬಂದು ಪರಮನ ಅಪ್ಪಣೆಯನ್ನು ಪಡೆದು ದೇವಗಣಿಕೆಯಾದ ತನ್ನಿಂದ ನಿಚ್ಚವೂ ಮೆಚ್ಚನ್ನು ಪಡೆಯುತ್ತಿರುವ ನೀಳಾಂಜನೆಯೆಂಬುವಳ ನೃತ್ಯಕ್ಕೆ ಏರ್ಪಡಿಸಿದನು. ಇಲ್ಲಿ ಪಂಪನ ಕೈವಾಡ ಅತ್ಯದ್ಭುತವಾಗಿದೆ. ಇಂತಹ ಚಿತ್ರ ಅಖಂಡ ಕನ್ನಡಸಾಹಿತ್ಯದಲ್ಲಿ ಅತಿ ವಿರಳ. ಇದನ್ನು 'ಆದಿಪುರಾಣ'ದ ಸಾರವೆನ್ನಬಹುದು. ಮದನನ ಬಿಲ್ಗೊಳಮಾತನ ಸುದತಿಯ ಬೀಣೆಯೊಳಮಸವ ದನಿಯುಮನಿಟಿಸಿ ಮೈದು ದಲ್, ಎನಿಸಿದುದು, ಸುರತೂ ರ್ಯದ ರವದೊಳ್ ಪುದಿದ ಸುರವಧ್ರಗೀತರವಂ || ..
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy