________________
೧೪ | ಪಂಪಭಾರತಂ
ಅಮರ್ದಿನ ಮಯೊಳಗೆಸೆದಪು ದಮ್ಮತಾಂಬುನಿನದಮನಿಸಿ ಸಭೆಯಿನಹೋ ಗೀ ತಮಹೋ ವಾದಿತಮೆನಿಸಿದು ದಮರೀಜನಗೀತಮ್ಮರವಾದಿತಮಾಗಳ್ || ಕಲಗೀತಂ ವಾದ್ಯ ನೃತ್ಯ ಲೀಲೆ ಪೆಣರ್ಗೊಪ್ರದೀಕೆಗಲ್ಲದೆ.... ಎನಿಸಿದ ನೀಲಾಂಜನೆ ಕ ರ್ಬಿನ ಬಿಲ್ಲಂ ಮಸೆದ ಮದನನಲರ್ಗಣೆ ಬರ್ದುಕಿ ತೆನಿಸುತೋಳಶೋಕಲ್ ಚೋರಿ ಕನೆ ನಿಖಿಲಜನಾಂತರಂಗಮಂ ರಂಗಮುಮಂ || ರಸ ಭಾವಾನುನಯಂಗಳ್ ಪೊಸವ, ಪುಗಿಲ್ ಪೊಸವೆ, ಚೆಲ್ವಿಗಳ್ ಪೊಸವ, ನಯಂ ಪೊಸವ, ಕರಣಂಗಳುಂ ನಿ ಪ್ರೊಸವೆನೆ ಪೊಸಯಿಸಿದಳಾಕೆ ನಾಟ್ಯಾಗಮಮಂ || ಕುಡುಪುಂ ಕಯ್ಯುಂ ಜತಿಯೊಳ್ ತಡವಡವರೆ ವಾದಕಂಗೆ ಪುರ್ವಿ೦ ಜತಿಯಿಂ ತೊಡರದೆ ನಡಯಿಸಿ ಪುರ್ವನೆ ಕುಡುಪನೆ ನರ್ತಕಿಯ ಸಭೆಗೆ ವಾದಕಿಯಾದಳ್ || ಸುರಗಣಿಕಾನಾಟ್ಕರಸಂ ಪರಮನ ಚಿತ್ತಮುಮನೆಯೇ ರಂಜಿಸಿದುದು ವಿ ಸುರಿತಸ್ಥಟಿಕಂ ಶುದ್ಧಾಂ
ತರಂಗಮೇನನ್ಯರಾಗದಿಂ ರಂಜಿಸದೇ ||
ಆದರೇನು? ಆ ಮಧುರಾಕಾರೆಗೂ ಆಯುರಂತವು ತಲೆದೋರಿತು. ಮಿಂಚಿನ ಹಾಗೆ ಇದ್ದಕ್ಕಿದ್ದ ಹಾಗೆಯೇ ಅದೃಶ್ಯಳಾದಳು. ಒಡನೆಯೇ ಇಂದ್ರನು ರಸಭಂಗಭಯದಿಂದ ಅವಳಂತೆಯೇ ಇದ್ದ ಮತ್ತೊಬ್ಬಳನ್ನು ಒಬ್ಬರಿಗೂ ತಿಳಿಯದಂತೆ ಏರ್ಪಡಿಸಿದನು. ಸಭೆಯವರೆಲ್ಲರೂ ನೀಳಾಂಜನೆಯೇ ಅಭಿನಯಿಸುತ್ತಿರುವಳೆಂದು ಭ್ರಾಂತಿಯಿಂದ ನೋಡುತ್ತಿದ್ದರು. ಆದರೆ ವಿದ್ಯಾನಿಳಯನಾದ ಪುರುದೇವನು ತಕ್ಷಣ ಅದನ್ನರಿತು ದೇಹಾನಿತ್ಯತೆಗೆ ಆಶ್ಚರ್ಯಪಟ್ಟು
ನಾರೀರೂಪದ ಯಂತ್ರ ಚಾರುತರಂ ನೋಡನೋಡೆ ಕರಗಿದುದೀ ಸಂ ಸಾರದನಿತ್ಯತೆ ಮನದೊಳ್ ಬೇರೂಆದುದೀಗಳಿಂತಿದಂ ಕಡೆಗಣಿಪಂ || ಕೋಟಿ ತೇಜದಿಂದಮೆಸೆವೀ | ನಾಟಕಮಂ ತೋಟಿ ಮಾಲ್ಗಳಿಲ್ಲ ಬಗೆಯೊಳ್ ನಾಟುವಿನಮಮರಿ, ಸಂಸ್ಕೃತಿ ನಾಟಕಮುಮನನಗೆ ನೆಲೆಯೆ ತೋಚಿದಳೀಗಳ್