SearchBrowseAboutContactDonate
Page Preview
Page 17
Loading...
Download File
Download File
Page Text
________________ ೧೨ | ಪಂಪಭಾರತಂ ಭೋಗಾಂಗಮಾಗಿಯುಂ ಕೃ ಪ್ಲಾಗರುಧೂಪಂ ಮುಸುಂಕಿ ಕೊಂದಿಕ್ಕಿದುದಾ ಭೋಗಿಗಳನಿಂತು ಸಂಸ್ಕೃತಿ ಭೋಗಂಗಳ್ ಭೋಗಿಭೋಗದಿಂ ವಿಷಮಂಗಳ | ಅನಿತು ಸುಖದನಿತು ಭೋಗದ ಮನುಜಯುಗಂ ನೋಡೆ ನೋಡೆ ತತ್‌ಕ್ಷಣದೊಳ್ ತಾ ನಿನಿತೊಂದು ದೆಸೆಯನೆಯ್ದಿದುದು ಆದರೂ 'ತೋಳಂ ಸಡಿಲಿಸದೆ ಆ ಪ್ರಾಣವಲ್ಲಭರ್ ಪ್ರಾಣಮನಂದೊಡೆಗಳೆದರ್ ಓಪರೋಪಗೊಳೊಡಸಾಯಲ್ಪಡೆದರ್' ಇನ್ನಿದಕ್ಕಿಂತ ಭಾಗ್ಯವೇನು ಬೇಕು? ಹೀಗೆ ಸಹಮರಣದಿಂದ ಸತ್ತ ಶ್ರೀಮತಿವಜ್ರಜಂಘರ ಪ್ರೇಮಸಂಬಂಧ ಮುಂದಿನ ಜನ್ಮದಲ್ಲಿಯೂ ಅನುವರ್ತಿಸುತ್ತದೆ. ಅವರ ಭೋಗಕಾಂಕ್ಷೆಯೂ ಕಡಿಮೆಯಾಗುವುದಿಲ್ಲ. ಪುನಃ ಭೋಗಭೂಮಿಯಲ್ಲಿಯೇ ಹುಟ್ಟುತ್ತಾರೆ. ಹಿಂದಿನ ಸ್ವಯಂಬುದ್ದನೇ ಪ್ರೀತಿಂಕರನೆಂಬ ರೂಪದಿಂದ ಬಂದು ಸೂಕ್ತಂ ಭವ್ಯಜನಪ್ರ ವ್ಯಕ್ತಂ ಜೈನಾಗಮೋಕ್ತಮಿಂ ನಿನಗೆ ಮದೀ ಯೋಕ್ತಮಿದರ್ದಯೊಳ್ ನೆಲಸುಗೆ ಮುಕ್ತಿಶ್ರೀಹಾರವಿಭ್ರಮಂ ಸಮ್ಮತ್ವಂ || ಎಂದೆಂದೂಡಮ್ಮ ನೀನುಂ. ಸಂದಯಮಣಮಲ್ಲದಿದನೆ ನಂಬಿನಿತಂ ನಿ | ನ್ನೊಂದಿದ ನಾರೀರೂಪದ ದಂದುಗದೊಳ್ ತೊಡರ್ದು ಬಿಡದೆ ನವೆಯುತ್ತಿರ್ಪೆ | ಎಂದು ಪ್ರತಿಬೋಧಿಸುತ್ತಾನೆ. ಸಮ್ಯಕದ ಮಹಿಮೆಯಿಂದ ಶ್ರೀಮತಿ ವಜ್ರಜಂಘರು ತಮ್ಮ ಭೋಗತೃಷ್ಠೆಯನ್ನು ಕಡಿಮೆಮಾಡಿಕೊಂಡು ಬೇರೆಬೇರೆ ಜನ್ಮಗಳಲ್ಲಿ ಹುಟ್ಟಿ ತಪಶ್ಚರ್ಯೆಗಳಿಂದಲೂ ವ್ರತೋಪವಾಸಾದಿಗಳಿಂದಲೂ ಸಂಸ್ಕೃತರಾಗಿ ಪೂರ್ಣವಾಗಿ ಭೋಗವಿಮುಖರಾಗುತ್ತಾರೆ. ಕೊನೆಗೆ ವಜ್ರಜಂಘನು ಮಹಾಬಳನಿಂದ ಒಂಬತ್ತನೆಯ ಭವದಲ್ಲಿ ಅಹಮಿಂದ್ರನಾಗಿ ಸರ್ವಾರ್ಥಸಿದ್ದಿಯೆಂಬ ಸ್ವರ್ಗದಿಂದಿಳಿದು ಬಂದು ತೀರ್ಥಂಕರನಾಗಿ ಜನಿಸಲು ಹದಿನಾಲ್ಕನೆಯ ಮನುವಾದ ನಾಭಿರಾಜನ ಪತ್ನಿಯಾದ ಮರುದೇವಿಯ ಗರ್ಭದಲ್ಲಿ ಸೇರುತ್ತಾನೆ. ತೀರ್ಥಂಕರನುದಯಿಸುವುದನ್ನು ಇಂದ್ರನು ತಿಳಿದು ಅಯೋಧ್ಯಾಪುರವನ್ನು ನಿರ್ಮಿಸಿ ಆರುತಿಂಗಳು ಮುಂಚೆಯೇ ವಸುಧಾರೆಯನ್ನು ಕರೆಯಿಸಿ ದೇವತಾಸ್ತ್ರೀಯರಿಂದ ಜಿನಾಂಬಿಕೆಯ ಗರ್ಭಸಂಶೋಧನವನ್ನು ಮಾಡಿಸಿರುತ್ತಾನೆ. ತೀರ್ಥಂಕರನುದಯಿಸುವನು. ಇಂದ್ರನಿಗೆ ಆಸನಕಂಪವಾಗುವುದು. ಸೌಧರ್ಮೆಂದ್ರನು ಶಚಿಯ ಮೂಲಕ ತಾಯಿಯ ಹತ್ತಿರ ಮಾಯಾಶಿಶುವನ್ನಿಡಿಸಿ ಜಿನಶಿಶುವನ್ನು ಐರಾವತದ ಮೇಲೇರಿಸಿಕೊಂಡು ಹೋಗಿ ಸಕಲಾಮರರೊಡನೆ ಮೇರುಪರ್ವತದಲ್ಲಿ ಜನ್ಮಾಭಿಷೇಕವನ್ನು ಮಾಡಿ ಆನಂದನೃತ್ಯವನ್ನು ಮುಗಿಸಿ ಮಗುವನ್ನು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy