SearchBrowseAboutContactDonate
Page Preview
Page 177
Loading...
Download File
Download File
Page Text
________________ ೧೭೨) ಪಂಪಭಾರತಂ ಕಂII, ಮೇಲಾದ ಪಾಂಡುಸುತರನು ಪಾಲಂಭಂಗೆಯ್ಯುತಿರ್ಪ ದುರ್ಯೊಧನನಂ | ಲೀಲೆಯ ನುಂಗುವ ಮೃತ್ಯುವ ನಾಲಗೆಯೆನೆ ನೆಗೆದುವುರಿಯ ನಾಲಗೆ ಪಲವುಂ || ವ|| ಆಗಳ್ ಭೀಮಸೇನಂ ತನ್ನ ತಲೆಯೊಳಂ ಮೆಯ್ಯೋಳಂ ಕರಗಿ ಸುರಿವರಗಿನುರಿಯ ಬಂಬಲ್ಗಳಂ ಪೊಸೆದು ಬಿದಿರ್ದು ಕಳೆದು ಸುರಂಗದೊಳಗಣಿಂದಮ ತನ್ನೊಡವುಟ್ಟಿದರ್ ಕೂಡ ವಂದನನ್ನೆಗಮಿತ್ರಂಕಂ|| ಅರಗಿನ ಮನೆಯೊಳ್ ಪಾಂಡವ ರುರಿದದರಕ್ಕಟಯ್ಯೋ ದುರ್ಯೋಧನನಂ | ಬೆರಲೆಯಿನೆಂದುತುಂ ತ ತುರಜನಮಣಿದವೆ ಪರಿದು ನೋಡಿತ್ತಾಗಳ್ | ವನೋಡಿ ರೂಪಳೆಯಲಾಗದಂತು ಕರಿಮುರಿಕನಾಗಿರ್ದ ಬೇಡಿತಿಯು ಮನವಯ್ಯರ್ ಮಕ್ಕಳುಮಂ ಕೊಂತಿಯುಂ ಪಾಂಡವರುಮಪ್ಪರೇನುಂ ತಪ್ಪಲ್ಲೊಂದು ಪುರಪ್ರಧಾನರ್ಕಲ್ ತದ್ಧತ್ತಾಂತಮಲ್ಲಮಂ ಪೇಟ್ಟು ಧೃತರಾಷ್ಟ್ರಗಂ ಪೇವಿಲಟ್ಟದೊಡೆ ಮನದೊಳ್ ವೈಭುವನಮನಾ ಇನಿತುವರಂ ತನಗೆ ಸಂತಸಂ ಪರ್ಚಿಯುಮಂ | ದಿನಿಸಂಧನೃಪಂ ತನ್ನಯ ಜನದೊಳ್ ಕೆಲನಟಿಯೆ ಕೃತಕ ಶೋಕಂಗೆಯ್ದಂ | ೮ ಅರಗಿನ ಮನೆಯನ್ನು ಅಗ್ನಿಯು ತಕ್ಷಣ ವ್ಯಾಪಿಸಿದನು. ೬. ಉತ್ತಮರಾದ ಪಾಂಡವರನ್ನು ಮೋಸಮಾಡುತ್ತಿರುವ ದುರ್ಯೋಧನನನ್ನು ಆಟದಿಂದಲೇ ನುಂಗುವ ಮೃತ್ಯುದೇವತೆಯ ನಾಲಗೆಯೆನ್ನುವ ಹಾಗೆ ಹಲವು ಅಗ್ನಿಜ್ವಾಲೆಗಳು ಹೊರಟವು. ವll ಆಗ ಭೀಮಸೇನನು ತನ್ನ ತಲೆಯ ಮೇಲೆಯೂ ಶರೀರದ ಮೇಲೆಯೂ ಕರಗಿ ಸುರಿಯುತ್ತಿದ್ದ ಅರಗಿನ ಜ್ವಾಲೆಯ ಸಮೂಹಗಳನ್ನು ಹೊಸದು ಒದರಿ ಕಳೆದು ಸುರಂಗದೊಳಗಿನಿಂದಲೇ ತನ್ನ ಸಹೋದರರ ಜೊತೆಯಲ್ಲಿ ಬಂದನು. ಅಷ್ಟರಲ್ಲಿ ಈ ಕಡೆ- ೭. ದುರ್ಯೊಧನನೆಂಬ ವಿಷದ ಹುಳುವಿನಿಂದ ಪಾಂಡವರು ಅರಗಿನ ಮನೆಯಲ್ಲಿ ಬೆಂದು ನಾಶವಾದರು; ಅಯ್ಯೋ ಅಬ್ಬ ಎಂದು ಅಳುತ್ತ ಆ ಪಟ್ಟಣಿಗರೆಲ್ಲ ಹೆಚ್ಚುತ್ತಿರುವ ದುಃಖದಿಂದ ಬಂದು ನೋಡಿದರು. ವು ನೋಡಿ ಗುರುತಿಸಲಾಗದಷ್ಟು ಕರಿಕುಮುರುಕಾಗಿದ್ದ ಬೇಡಿತಿಯನ್ನೂ ಅವಳ ಅಯ್ದು ಜನ ಮಕ್ಕಳನ್ನೂ ಕುಂತಿ ಹಾಗೂ ಪಾಂಡವರೇ ಆಗಿದ್ದಾರೆ ವ್ಯತ್ಯಾಸವಿಲ್ಲ ಎಂದು ನಿಷ್ಕರ್ಷಿಸಿ ಊರ ಮುಖ್ಯಸ್ಥರು ಆ ವಿಚಾರವನ್ನೆಲ್ಲ ಧೃತರಾಷ್ಟ್ರನಲ್ಲಿಗೂ ಹೇಳಿ ಕಳುಹಿಸಿದರು. ೮. ಅದನ್ನು ಕೇಳಿ ತನಗೆ ಆ ದಿನ ಮೂರುಲೋಕವನ್ನು ಆಳುವಷ್ಟು ಸಂತೋಷ ಹೆಚ್ಚಿದರೂ ಅಕ್ಕಪಕ್ಕದವರು ತಿಳಿಯುವ ಹಾಗೆ ಧೃತರಾಷ್ಟ್ರನು ತನ್ನ ಜನದ ಮಧ್ಯದಲ್ಲಿ ಕಪಟದುಃಖವನ್ನು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy