SearchBrowseAboutContactDonate
Page Preview
Page 178
Loading...
Download File
Download File
Page Text
________________ ತೃತೀಯಾಶ್ವಾಸಂ | ೧೭೩ ವ|| ಆಗಳ್ ನದೀತನೂಜ ಭಾರದ್ವಾಜ ಕೃಪರವಿರಳ ಬಾಷ್ಪವಾರಿ ದುರ್ದಿನ ದೀನಾನನರಾಗಿರೆ ವಿದುರಂ ತಾನಳದುಮಳಿಯದಂತ ಶೋಕಾಕ್ರಾಂತನಾಗಿ ಧೃತರಾಷ್ಟ್ರನ ಬೆಸದೊಳ್ ವಾರಣಾವತಕ್ಕೆ ಪೂಗಿ ತದರ್ಧ ದಗ್ಗ ಕಳೇವರಂಗಳಂ ಸಂಸ್ಕರಿಸಿ ಜಳದಾನಾದಿಕ್ರಿಯಗಳಂ ಮಾಡಿ ಮಗುಚಿ ವಂದನನ್ನೆಗಮಿತ್ತ ಪಾಂಡವರ್ ಸುರಂಗದಿಂ ಪೂಣಮಟ್ಟು ತಾರಾಗಣಂಗಳ ನಿಂದ ನೆಲೆಯಿಂ ದೆಸೆಯಂ ಪೊಟುಮನಳಿದು ತಂಕಮೊಗದ ಪಯಣಂಬೋಗಿ ಮI ತಡಕುಂ ಪಿಟ್ಟೆಯುಮೊತ್ತ ಮಲ್ಲಡಿಗಳಂ ಬಳ್ಳುತ್ತುಮಳ್ಳುತ್ತುಮೋ ರಡಿಗೊರ್ಮೊಮ್ರ ಕುಳುತ್ತುಮೇಲುತಿರೆ ಕಂಡಿಂತಾಗದಿನ್ನೇಟಿಮಂ | ದೂಡನಂದಯ್ಯರುಮಂ ನಿಜಾಂಸಯುಗದೊಳ್ ಪೂತ್ತ ತಳ್ಳೂಳ್ಳ ಸೀ ಮಡುವಿಂದದ್ಭುತದಾ ಹಿಡಿಂಬವನಮಂ ಪೊಕ್ಕಂ ಮರುನ್ನಂದನಂ || ೯ ಚಂ|| ಆದು ಮದದಂತಿ ದಂತ ಮುಸಲ ಪ್ರವಿಭಗ್ನ ಮಹಾಮಹೀರುಹಾ ಸದಮದು ಸಿಂಹನಾದಜನಿತ ಪ್ರತಿಶಬ್ದ ಮಹಾ ಭಯಾನಕ | ಪ್ರದಮದು ನಿರ್ಝರೋಚಳಿತ ಶೀಕರ ಶೀತಳ ವಾತ ನರ್ತಿತೋ ನದ ಶಬರೀ ಜನಾಳಕಮದಾಯತ ವೇತಲತಾವಿತಾನಂ || ವ|| ಆ ವನಾಂತರಾಳ ಮಧ್ಯಸ್ಥಿತ ವಿಶಾಳ ವಟ ವಿಟಪಿಯನೆಯಂದದಲ ಕೆಲಗಳ್ಳರುಮ ನಿಚಿಪಿದೊಡಧ್ವಾನ ಪದ ಪರಿಶ್ರಮ ಶಾಂತರ್ ನಿದ್ರಾಭರಪರವಶರಾಗಿರೆ ಭೀಮಂ ಜಾವಮಿರ್ದು ಪ್ರದರ್ಶಿಸಿದನು. ವ|| ಆಗ ಭೀಷ್ಮದ್ರೋಣ ಕೃಪರು ಏಕಪ್ರಕಾರವಾಗಿ ಸುರಿಯುವ ಕಣ್ಣೀರೆಂಬ ಮಳೆಗಾಲದಿಂದ ಬಾಡಿದ ಮುಖವುಳ್ಳವರಾಗಿರಲು ವಿದುರನು ತಾನು ತಿಳಿದಿದ್ದರೂ ತಿಳಿಯದವನಂತೆ ದುಃಖದಿಂದ ಕೂಡಿದವನಾಗಿ ಧೃತರಾಷ್ಟ್ರನ ಆಜ್ಞೆಯ ಪ್ರಕಾರ ವಾರಣಾವತಕ್ಕೆ ಹೋಗಿ ಅಲ್ಲಿ ಅರ್ಧಸುಟ್ಟಿದ್ದ ದೇಹಗಳಿಗೆ ಸಂಸ್ಕಾರಮಾಡಿ ತರ್ಪಣಾದಿಗಳನ್ನು ಕೊಟ್ಟು ಹಿಂತಿರುಗಿದನು. ಅಷ್ಟರಲ್ಲಿ ಈ ಕಡೆ ಪಾಂಡವರು ಸುರಂಗ ಮಾರ್ಗದಿಂದ ಹೊರಟು ನಕ್ಷತ್ರಸಮೂಹಗಳಿದ್ದ ಸ್ಥಾನಗಳಿಂದ ದಿಕ್ಕನ್ನೂ ಹೊತ್ತನ್ನೂ ತಿಳಿದು ಪ್ರಯಾಣ ಮಾಡಿದರು. ೯. ಮೃದುವಾದ ತಮ್ಮ ಕಾಲುಗಳನ್ನು ಕಲ್ಲುಗಳೂ ಹೆಂಟೆಯೂ ಒತ್ತುತ್ತಿರಲು ಬಳುಕುತ್ತಲೂ ಹೆದರುತ್ತಲೂ ಒಂದೊಂದು ಹೆಜ್ಜೆಗೂ ಕೂರುತ್ತಲೂ ಏಳುತ್ತಲೂ ಇರುವುದನ್ನು (ಭೀಮಸೇನನು) ನೋಡಿ ಇನ್ನು ಮುಂದೆ ಹೀಗಾಗುವುದಿಲ್ಲ ಏಳಿ ಎಂದು' ಒಟ್ಟಿಗೆ ಆ ಅಯ್ದು ಜನವನ್ನು ತನ್ನ ಎರಡು ಭುಜದ ಮೇಲೆ ಹೊತ್ತು ವ್ಯಾಪಿಸಿ ಶಬ್ದಮಾಡುತ್ತಿರುವ ಜೀರುಂಡೆಯಿಂದ ಅದ್ಭುತವಾಗಿದ್ದ ಹಿಡಿಂಬವನವೆಂಬ ಕಾಡನ್ನು ವಾಯುಪುತ್ರನಾದ ಭೀಮಸೇನನು ಪ್ರವೇಶಿಸಿದನು. ೧೦. ಆ ಹಿಡಿಂಬವನವು ಮದ್ದಾನೆಗಳ ಕೊಂಬೆಂಬ ಒನಕೆಯಿಂದ ಮುರಿಯಲ್ಪಟ್ಟ ದೊಡ್ಡಮರಗಳಿಗೆ ಆಶ್ರಯವಾಗಿದ್ದಿತು. ಸಿಂಹಗರ್ಜನೆಯಿಂದ ಉಂಟಾದ ಪ್ರತಿಧ್ವನಿಯಿಂದ ಭಯಂಕರವಾಗಿ ಕಂಡಿತು. ಬೆಟ್ಟ ಝರಿಗಳಲ್ಲಿ ಮೇಲಕ್ಕೆದ್ದ ತುಂತುರುಗಳಿಂದ ಒದ್ದೆಯಾದ ಗಾಳಿಯಿಂದ ಕುಣಿಸಲ್ಪಟ್ಟ ಮದಿಸಿರುವ ಬೇಡಿತಿಯರ ಮುಂಗುರುಳುಗಳಿಂದ ಮನೋಹರವಾಗಿತ್ತು. ವಿಸ್ತಾರವಾದ `ಬೆತ್ತದ ಬಳ್ಳಿಗಳ - ಮೇಲ್ಕಟ್ಟುಗಳಿಂದ ತುಂಬಿದ್ದಿತು. ವ|| ಆ ಕಾಡಿನ ಒಳಭಾಗದ ಮಧ್ಯದಲ್ಲಿ ವಿಸ್ತಾರವಾದ ,
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy