SearchBrowseAboutContactDonate
Page Preview
Page 176
Loading...
Download File
Download File
Page Text
________________ ತೃತೀಯಾಶ್ವಾಸಂ | ೧೭೧ ನಿಚ್ಚಂ ಬೇಂಟೆವೋಗೆ ಪುರೋಚನನುಂ ಪಂಗಣ ಕಾಪಂ ಕಷ್ಟಾಪಿನಲೆ ಕಾದಿರ್ಪನ್ನೆಗಂ ವಿದುರನ - ವಿಶ್ವಾಸ ದಾಸಂ ಕನಕನೆಂಬಂ ಬಂದು ಪಾಂಡವರಂ ಕಂಡೇಕಾಂತದೊಳ್ ವಿದುರನಟ್ಟಿದ 'ವಿನ್ನಾಣಂಗಳಂ ಪೇಟ್ಟು ನಂಬಿಸಿ ನೀಮೆಂತುಂ ಬರಂತೆ ಪೋಣಮಟ್ಟು ಪೋಗಿಯೆಂದು ಜತುಗ್ರಹ ಕವಾಟ ಪುಟ ಸಂಧಿಗಳೊಳ್ ಸುರಂಗಮಂ ಗಂಗಯೊಳ್ ಮೂಡುವಂತಾಗ ಸಮದು ಪೇಟ್ಟು ಪೋಪುದುಂ ಪಾಂಡವರುಂ ಪುರೋಚನಂ ತಮ್ಮ ಮುದಿವಸಂ ಛಿದ್ರಿಸುವನೆನಲುಂ ಮುನ್ನಿನ ದಿವಸದೊಳಗಣ ಪರಿಜನಮಲ್ಲಮಂ ಪಾರ್ವರನೂಡುವ ನೆವದೂಳೆ ಪೂಜಮಡಿಸಿ ಸೂರ್ಯಾಸ್ತಮಯದೊಳ್ ಪಾರ್ವರನೂಡಿ ನಿಷಾದಿತಿಯೆಂಬ ಬೇಡಿತಿಗಮಯ್ಯರ್ ಮಗಂದಿರ್ಗಮುಣಲಿಕ್ಕಿದೋಡ ತಣಿಯುಂಡು ಬೆಂಡುಮಲ್ಲು ಮಸುಂದಿದರ್ ಪುರೋಚನನುಮಾ ಮನೆಯೊಳೊಂದೂವರಿಯೊಳ್ ಮಜಕೆಂದಿದನಾ ಪ್ರಸ್ತಾವದೂಳರ್ಧ ರಾತ್ರಿಯಾದಾಗಳ್ ಕೊಂತಿವರಸಯ್ಯರುಮಂ ಮುನ್ನಮಯ್ಯನೊಯ್ಯನೆ ಸುರಂಗದಿ ಪೂಜೆಮಡಿಸಿ ಭೀಮಸೇನಂ ಪುರೋಚನಂ ಮಜಕೆಂದಿರ್ದೊವರಿಯೊಳ್ ಕಿಚ್ಚಂ ಕೊಳಿಸಲೊಡಂ ಕಂ || ಅಡವೊತ್ತದ ಕಿಣಿಕಿದನೆ ಸುಡದಿನಿಸರೆಪೊರಕನಾಗದೆಯ ಸಸಿದಂದೋಂ | ದೆಡೆಯೊಳಗೊಟ್ಟಿರ್ದರಳೆಯ ನೋಡನಳುರ್ವಂತುಳುರ್ದನನಲನರಗಿನ ಮನೆಯಂ | ಬೇಟೆಗೆ ಹೋಗುತ್ತಿರಲು ಪುರೋಚನನೂ ಇವರ ಹೊರಗಿನ ರಕ್ಷಣೆಯನ್ನು ತನ್ನ ಕಣ್ಣಿನ ಮೇಲುನೋಟದಿಂದಲೇ ನೋಡುತ್ತಿರುವಷ್ಟರಲ್ಲಿ ವಿದುರನ ನಂಬಿಕೆಗೆ ಪಾತ್ರನಾದ ಕನಕನೆಂಬ ಸೇವಕನು ಬಂದು ಪಾಂಡವರನ್ನು ಕಂಡು ರಹಸ್ಯವಾಗಿ ಅವರಿಗೆ ವಿದುರನು ಕಳುಹಿಸಿದ ಸಂಜ್ಞೆಗಳನ್ನು ಹೇಳಿ ನಂಬುವ ಹಾಗೆ ಮಾಡಿ 'ನೀವು ಹೇಗೂ ತಿಳಿದವರಾಗಿದ್ದೀರಿ; ಹಾಗೆಯೇ ಹೊರಟು ಹೋಗಿ ಎಂದು ಅರಗಿನ ಮನೆಯ ಬಾಗಿಲಿನ ಸಂದಿಯಲ್ಲಿ ನೆಲದೊಳಗಿನ ರಂಧ್ರವನ್ನು ಗಂಗೆಯ ಆಚೆಯ ದಡದಲ್ಲಿ ಹೊರಗೆ ಬರುವಂತೆ ಸಿದ್ದಪಡಿಸಿ ಆ ವಿಷಯವನ್ನು ಅವರಿಗೆ ಹೇಳಿಹೋದನು. ಪಾಂಡವರೂ ಕೂಡ ಪುರೋಚನನು ತಮ್ಮನ್ನು ಮುಂದಿನ ದಿವಸ ಛೇದಿಸುತ್ತಾನೆಂದು ತಿಳಿದು ಮೊದಲ ದಿನವೇ ಬ್ರಾಹ್ಮಣರಿಗೆ ಭೋಜನಮಾಡಿಸುವ ನೆಪದಲ್ಲಿ ತಮ್ಮ ಪರಿವಾರವನ್ನೆಲ್ಲ ಹೊರಗೆ ಹೋಗುವ ಹಾಗೆ ಮಾಡಿದರು. ಸೂರ್ಯನು ಮುಳುಗುವ ಹೊತ್ತಿನಲ್ಲಿ ಬ್ರಾಹ್ಮಣರಿಗೆಲ್ಲ ಊಟ ಮಾಡಿಸಿ ನಿಷಾದಿತಿಯೆಂಬ ಬೇಡರವಳಿಗೂ ಅವಳ ಅಯ್ದು ಜನ ಮಕ್ಕಳಿಗೂ ಊಟ ಮಾಡಿಸಿದರು. ಅವರು ತೃಪ್ತಿಯಾಗಿ ತಿಂದು ಬಳಲಿದಂತವರಾಗಿ ಮೈಮರೆತು ನಿದ್ರಿಸಿದರು. ಪುರೋಚನನೂ ಆ ಮನೆಯ ಒಂದು ಕೋಣೆಯಲ್ಲಿ ಎಚ್ಚರತಪ್ಪಿ ಮಲಗಿದನು. ಆ ಸಂದರ್ಭದಲ್ಲಿ ಅರ್ಧರಾತ್ರಿಯಾದಾಗ ಭೀಮಸೇನನು ಕುಂತಿಯೊಡನೆ ಅಯ್ದುಜನಗಳನ್ನು ಮೊದಲೇ ನಿಧಾನವಾಗಿ ಸುರಂಗದಿಂದ ಹೊರಡಿಸಿ ಪುರೋಚನನು ಮೈಮರೆತು ಮಲಗಿದ್ದ ಕೊಟಡಿಗೆ ಬೆಂಕಿಯನ್ನು ಹಚ್ಚಿದನು. ೫. ಅಡಿಯ ಭಾಗ ಹತ್ತಿಕೊಳ್ಳದೆ ಸ್ವಲ್ಪ ಸ್ವಲ್ಪವಾಗಿ ಸುಡದೆ ಸ್ವಲ್ಪವೂ ಅರೆಕರಿಕಾಗದೆ ಬಿಡಿಸಿಟ್ಟಿದ್ದ ಹತ್ತಿಯ ರಾಶಿಯನ್ನು ಒಟ್ಟಿಗೇ ವ್ಯಾಪಿಸುವಂತೆ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy