SearchBrowseAboutContactDonate
Page Preview
Page 144
Loading...
Download File
Download File
Page Text
________________ ದ್ವಿತೀಯಾಶ್ವಾಸಂ | ೧೩೯. ವಗೆ ಅಂತಯ್ಯರುಂ ಸಮಸ್ತ ಶಸ್ತ್ರ ಶಾಸ್ತ್ರ ಪ್ರಯೋಗ ಪ್ರವೀಣರಾಗ ಧರ್ಮಪುತ್ರಂ ಧರ್ಮಶಾಸ್ತ್ರಂಗಳೊಳಂ ಶ್ರುತಿಸ್ಮತಿಗಳೊಳಂ ಪ್ರವೀಣನಾದಂ ಭೀಮಸೇನಂ ವ್ಯಾಕರಣದೊಳಾರಿಂದ ಮಗ್ಗಳಂ ಕುಶಲನಾದ ನಕುಲಂ ಕುಂತಶಸ್ತದೊಳತಿ ಪ್ರವೀಣನುಮಾಗಿ ಅಶ್ವವಿದೈಯೊಳಾರಿಂದಂ ಪಿರಿಯನಾದಂ ಸಹದೇವಂ ಜ್ಯೋತಿರ್ಜ್ಞಾನದೊಳತಿ ಪರಿಣತನಾದರೆ, ಚಂ || ಬಳೆದುವು ತೋಳಳೆಕೊಯಿನಮಳ್ ಬಳೆವಂತಿರೆ ಮುಯ್ಯುಗಳ್ ಕುಳಾ ಚಳ ಶಿಖರಂಗಳಂ ಮಸುಳೆವಂದುವು ಪರ್ವಿದ ವಕ್ಷಮಾ ಕ್ಷಮಾ | ತಳ ಕುಳಲಕ್ಷ್ಮೀ ಗಾಯ್ತು ಕುಳಮಂದಿರವೆಂದು ಮಹೀತಳಂ ಮನಂ ಗೂಳೆ ನೆವದತ್ತುದಾತ್ತ ನವಯೌವನಮೊರ್ಮೆಯ ಧರ್ಮಪುತ್ರನಾ || ೩೭ ವ|| ಅಂತು ಸೊಗಯಿಸುವ ರೂಪಿನೊಳ್ ಪೊನ್ನ ಬಣ್ಣದಂತಪ್ಪ ತನ್ನ ಮಯ್ಯ ಬಣ್ಣ ಮಳವಲ್ಲದೊಪ್ಪೆ- .. ಚಂ || ಕುಳಗಿರಿಯಂ ಸರೋಜನಿಲಯಂ ಮನುಜಾಕೃತಿಯಾಗೆ ಮಾಡಿದಂ ತೋಳವೆನಿಪಂತುಟಪ್ಪ ಪೊಸ ಬಣ್ಣದೋಳೋಂದಿದ ಪಾರಿಜಾತಮ || ಗಳಮಸೆದೊಪ್ಪುವಂತೆ ತಳಿರೀಂ ಮುಗುಳಿಂ ನವವನಂ ಮನಂ ಗೊಳೆ ಕರದೊಪ್ಪಿದಂ ದಶ ಸಹಸ್ಯ ಮಜೀಭ ಬಳಂ ವೃಕೋದರಂ || ೩೮ . ವll ಅಂತೊಪ್ಪುವ ಗಂಡಗಾಡಿಯೊಳಿಂದ್ರನೀಲದಂತಪ್ಪ ಬಣ್ಣು ಕಣ್ಣೆವರೆ-: : ವll ಹಾಗೆ ಅಯ್ತು ಜನರೂ ಸಮಸ್ತಶಸ್ತಶಾಸ್ತಪ್ರಯೋಗಗಳಲ್ಲಿಯೂ ನಿಪುಣರಾದರು. ಧರ್ಮರಾಜನು ಧರ್ಮಶಾಸ್ತ್ರಗಳಲ್ಲಿಯೂ ಶ್ರುತಿಸ್ಕೃತಿಗಳಲ್ಲಿಯೂ ಪ್ರವೀಣನಾದನು. ಭೀಮಸೇನನು ವ್ಯಾಕರಣದಲ್ಲಿ ಎಲ್ಲರಿಗಿಂತಲೂ ಮೇಲಾದ ಬುದ್ಧಿವಂತನಾದನು. ನಕುಲನು ಕುಂತಶ್ಯಾಸ್ತದಲ್ಲಿ ಪ್ರವೀಣನಾಗಿ ಅಶ್ವವಿದ್ಯೆಯಲ್ಲಿ ಎಲ್ಲರಿಗಿಂತಲೂ ಹಿರಿಯನಾದನು. ಸಹದೇವನು ಜ್ಯೋತಿಶ್ಯಸ್ತದಲ್ಲಿ ಪಂಡಿತನಾದನು. ೩೭. ಧರ್ಮ ರಾಜನ ಎರಡು ತೋಳುಗಳೂ ಅವಳಿಗಳೂ ಬೆಳೆದಂತೆ ಜೊತೆಯಲ್ಲಿಯೇ ಬೆಳೆದುವು. ಹೆಗಲುಗಳು ಕುಲಪರ್ವತಗಳ ಶಿಖರಗಳನ್ನು ತಿರಸ್ಕರಿಸಿದುವು (ಕಾಂತಿಹೀನವನ್ನಾಗಿ ಮಾಡಿದುವು). ವಿಸ್ತಾರವಾದ ಅವನ ಎದೆಯು ಅಸಮಾನಳಾದ ಈ ಭೂದೇವಿಗೆ ವಂಶಪಾರಂಪರ್ಯವಾಗಿ ಬಂದ ನಿವಾಸವಾಯಿತು ಎಂದು ಲೋಕದ ಜನ ಸಂತೋಷಿಸುವ ಹಾಗೆ ಧರ್ಮರಾಜನ ಉದಾತ್ತವಾದ ಹೊಸಯೌವನವು ಒಟ್ಟಿಗೆ ತುಂಬಿ ಬಂದಿತು. ವ|| ಹಾಗೆ ಸೊಗಯಿಸುವ ಆಕಾಶದಲ್ಲಿ ಚಿನ್ನದ ಬಣ್ಣದ ಹಾಗಿರುವ ತನ್ನ ಶರೀರದ ಬಣ್ಣವು ಅಳತೆಯಿಲ್ಲದೆ ಪ್ರಕಾಶಿಸಿತು. ೩೮. ಬ್ರಹ್ಮನು ಕುಲಪರ್ವತವನ್ನು ಮನುಷ್ಯನ ರೂಪದಲ್ಲಿ ಮಾಡಿದ್ದಾನೆ ಎನಿಸಿಕೊಂಡು ಭೀಮನು ಅದೇ ಬಣ್ಣದ ಪಾರಿಜಾತವು ಚಿಗುರಿನಿಂದಲೂ ಮೊಗ್ಗುಗಳಿಂದಲೂ ಕೂಡಿ ಪ್ರಕಾಶಮಾನವಾಗಿ ಒಪ್ಪುವಂತೆ ಅವನ ಹೊಸಪ್ರಾಯವು ಆಕರ್ಷಕವಾಗಿರಲು ಹತ್ತುಸಾವಿರ ಮದ್ದಾನೆಗಳ ಬಲವುಳ್ಳವನಾಗಿ ಒಪ್ಪಿ ತೋರಿದನು. ವ|| ಹಾಗೆ ಒಪ್ಪುವ ಸೌಂದರ್ಯದಲ್ಲಿ 10
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy