SearchBrowseAboutContactDonate
Page Preview
Page 145
Loading...
Download File
Download File
Page Text
________________ ೧೪೦ | ಪಂಪಭಾರತಂ ಚಂ || ಶರದದ ಚಂದ್ರನಂ ವಿಮಲ ಚಂದ್ರಿಕೆ ಬಾಳದಿನೇಶನಂ ತಮೋ ಹರಕಿರಣಂ ಕಿಶೋರ ಹರಿಯಂ ನವಕೇಸರ ರಾಜಿ ಮಿಕ್ಕ ದಿ | ಕರಿಯನನೂನ ದಾನ ಪರಿಶೋಭೆ ಮನಂಗೊಳೆ ಪೊರ್ದುವಂತ ಸುಂ ದರ ನವವನಂ ನೆಯ ಪೊರ್ದೆ ಗುಣಾರ್ಣವನೊಪ್ಪಿ ತೋಳದಂ ೩೯ ವ|| ಅಂತು ನವವನಂ ನೆಯ ನಿನಿಗೊಂಡ ಗುಣಾರ್ಣವನ ತಲೆ ನವಿರ್ಗಳ ಲಾವಣ್ಯರಸಮನಿಡಿದಿಡಿದು ತೀವಿದ ಕಮಲಾಸನನ ಬೆರಲಚ್ಚುಗಳನ್ನವಾದುವು ಮೂಜುಂ ಲೋಕದ ಮೂಜು ಪಟ್ಟಮನಾಳಕ್ಕೆ ತಕ್ಕ ಲಕ್ಷ್ಮಣ ಸಂಪೂರ್ಣಮಪ್ಪ ಸಹಜಮನೋಜನ ಲಲಾಟಂ ಪಟ್ಟಂಗಟ್ಟದ ನೊಸ ಲಕ್ಷಣಮನಸಲ್ಲೇಡೆಂಬಂತಾದುದು ಕರ್ಬಿನ ಬಿಲ್ಲ ಕೊಂಕಿನಂತೆ ಕೊಂಕಿಯುಂ ಪರವನಿತೆಯರೆರ್ದಗೆ ಕೊಂಕಿಲ್ಲದೆಯುಂ ಸೊಗಯಿಸುವ ಸುರತ ಮಕರಧ್ವಜನ ಪುರ್ವುಗಳ ಕಾಮದೇವನ ವಿಜಯ ವೈಜಯಂತಿಗಳಂತಾದುವು ನೀಳಂ ಬೆಳ್ಳುಮಂ ತಾಳಿ ಪರವನಿತೆಯರ ದೆಸೆಗೆ ಕಿಸುಗಣ್ಣಿದಂತ ಕಿಸು ಸೆರೆವರಿದು ಸೊಗಯಿಸುವ ಶೌಚಾಂಜನೇಯನ ಕಣ್ಣಳೆಂಬಲರಂಬುಗಳ ಗಣಿಕಾಜನಂಗಳರ್ದಯಂ ನಟ್ಟು ಕೆಂಕಮಾದಂತಾದುವು ರಿಪುಜನದ ಪರ್ಚಿಂಗಂ ಪರಾಂಗನಾಜನದ ಮಚ್ಚಂಗಂ ಮೂಗಿವಂತ ಸೊಗಯಿಸುವ ಗಂಧಭ ವಿದ್ಯಾಧರನ ಮೂಗು ತನ್ನ ಸುಯ್ಯ ಕಂಪನಲ್ಲದ ಪದರ ಕಂಪನಾಸೆವಡದಂತಾದುದು ಪೊಸ ಇಂದ್ರನೀಲಮಣಿಯ ಹಾಗಿರುವ ಬಣ್ಣವು ಮನೋಹರವಾಗಿರಲು ೩೯. ಶರತ್ಕಾಲದ ಚಂದ್ರನನ್ನು ನಿರ್ಮಲವಾದ ಬೆಳದಿಂಗಳ ಬಾಲಸೂರ್ಯನನ್ನು ಕತ್ತಲೆಯನ್ನು ಹೋಗಲಾಡಿಸುವ ಕಿರಣಗಳೂ ಸಿಂಹದಮರಿಯನ್ನು ಹೊಸದಾಗಿ ಹುಟ್ಟಿದ ಅದರ ಕತ್ತಿನ ಕೂದಲರಾಶಿಯೂ ಉಳಿದ ದಿಗ್ಗಜಗಳನ್ನೂ ಸ್ವಲ್ಪವೂ ಕಡಿಮೆಯಿಲ್ಲದ ಮದೋದಕದ ಕಾಂತಿಯೂ ಆಕರ್ಷಿಸುವ ರೀತಿಯಲ್ಲಿ ಸೇರಿಕೊಳ್ಳುವಂತೆ ಸುಂದರವಾದ ಹೊಸಯೌವನವು ಪೂರ್ಣವಾಗಿ ಬಂದು ಕೂಡಲು ಗುಣಾರ್ಣವನು ಒಪ್ಪಿ ತೋರಿದನು. ವl1 ಹಾಗೆ ನವಯೌವನವು ಸಂಪೂರ್ಣವಾಗಲು ಗುಂಗುರುಗುಂಗುರಾದ ಗುಣಾರ್ಣವನ ತಲೆಯ ಕೂದಲು ಸೌಂದರ್ಯರಸವನ್ನು ಮಿದಿದುಮಿದಿದು ತುಂಬಿದ ಬ್ರಹ್ಮನ ಬೆರಳಚ್ಚುಗಳಂತಾದುವು; ಸ್ವರ್ಗ, ಮರ್ತ್ಯ ಪಾತಾಳಗಳೆಂಬ ಮೂರುಲೋಕಗಳ ಮೂರು ರಾಜ್ಯಭಾರವನ್ನು ಮಾಡುವುದಕ್ಕೂ ಯೋಗ್ಯವಾದ ಲಕ್ಷಣಗಳಿಂದ ತುಂಬಿರುವ ಸಹಜಮನೋಜನಾದ ಅರ್ಜುನನ ಹಣೆಯು ಪಟ್ಟಾಭಿಷೇಕಮಾಡಿದ ಹಣೆಗೆ ಯಾವ ಲಕ್ಷಣವಿರಬೇಕೆಂಬುದನ್ನು (ಅನ್ಯಥಾ) ಹುಡುಕಬೇಡ ಎನ್ನುವಂತಾಯಿತು; (ಅಂದರೆ ಆ ಎಲ್ಲ ಲಕ್ಷಣಗಳೂ ಈ ಹಣೆಯಲ್ಲಿಯೇ ಇವೆ ಎಂದರ್ಥ), ಮನ್ಮಥನ ಕಬ್ಬಿನ ಬಿಲ್ಲಿನ ವಕ್ರತೆಯಂತೆ ಬಗ್ಗಿದ್ದರೂ ಅನ್ಯಸ್ತ್ರೀಯರ ಪ್ರೀತಿಗೆ ಬಗ್ಗದೆ ಸೊಗಯಿಸುವ ಸುರತಮಕರಧ್ವಜನ ಹುಬ್ಬುಗಳು ಮನ್ಮಥನ ವಿಜಯದಂತಾದುವು; ದೀರ್ಘತ್ವವನ್ನೂ ಬಿಳಿಯ ಬಣ್ಣವನ್ನೂ ಹೊಂದಿ ಅನ್ಯಸ್ತ್ರೀಯರ ವಿಷಯದಲ್ಲಿ ಕೋಪಿಸಿಕೊಂಡಂತೆ ಕೆಂಪಾದ ರಕ್ತನಾಳಗಳಿಂದ ಕೂಡಿ ಸೊಗಯಿಸುವ ಶೌಚಾಂಜನೇಯನ ಕಣ್ಣುಗಳೆಂಬ ಪುಷ್ಪಬಾಣಗಳು ವೇಶ್ಯಾಸ್ತ್ರೀಯರ ಎದೆಯಲ್ಲಿ ನಾಟಿ ಕೆಂಪಾದಂತಾದುವು; ಶತ್ರುಜನಗಳ ಅಭಿವೃದ್ಧಿಗೂ ಪರಾಂಗನೆಯರ ಮೆಚ್ಚಿಕೆಗೂ ಜುಗುಪ್ಪೆ ಪಡುವ ಹಾಗೆ ಸೊಗಯಿಸುವ ಗಂದೇಭವಿದ್ಯಾಧರನ ಮೂಗು ತನ್ನ ಉಸಿರಿನ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy