SearchBrowseAboutContactDonate
Page Preview
Page 143
Loading...
Download File
Download File
Page Text
________________ ೧೩೮ | ಪಂಪಭಾರತಂ ಗಾಂಧರ್ವವಿದ್ಯಾವಿಶೇಷಂಗಳೊಳಂ ಗಜಾಗಮಜ್ಞ ರಾಜಪುತ್ರ ಗೌತಮ ವಾದ್ವಾಕಿ ಪಾಳ ಕಶ್ಯಪ ಸುಪತಿ ಶ್ರೀಹರ್ಷಾದಿ ಪುರಾಣಪುರುಷವಿರಚಿತಂಗಳಪ್ಪ ಹಸ್ತಿಶಾಸ್ತ್ರಂಗಳೊಳಂ ಚಿತ್ರಕರ್ಮ ಪತ್ರಚ್ಛೇದ ಗ್ರಹಗಣಿತ ರತ್ನಪರೀಕ್ಷೆಗಳೊಳಂ ದಾರುಕರ್ಮ ವಾಸ್ತುವಿದ್ಯಾಪೂರ್ವಯಂತ್ರ ಪ್ರಯೋಗ ವಿಷಾಪಹರಣ ಸರಭೇದ ರತಿತಂದ್ರಜಾಲ ವಿವಿಧ ವಿದ್ಯೆಗಳೊಳಮನೇಕಾಕ್ಷರ ಸ್ವರೂಪಗಳೊಳಂ ಚಾಪ ಚಕ್ರ ಪರಶು ಕೃಷಾಣ ಶಕ್ತಿ ತೋಮರ ಮುಸಲ ಮುಸುಂಡಿ ಭಂಡಿವಾಳ ಮುದ್ಧರ ಗದಾದಿ ವಿವಿಧಾಯುಧಂಗಳೊಳಮತಿ ಪ್ರವೀಣನುವಾರೂಢಸರ್ವಜ್ಞ ಮಹೇಂದ್ರ ಜಾಣ(ನುಮಾಗಿಕಂll ಉಳೊದುಗಳೊಳಗನಿತ ವುಳರ್ಗ೦ ತಿಳಿಸಲರಿಯದೆನಿಪಡೆಗಳುಮಂ || ತೆಳ್ಳಗಿರೆ ತಿಳಿಪುಗುಂ ಬೆಸ ಗೊಳ್ಳ ಗುಣಾರ್ಣವನ ಲೆಕ್ಕಮಂ ಪೊಕ್ರಮುಮುಂ || ೩೫ ವಗಿರಿ ಎಂದು ಲೋಕಮೆಲ್ಲಂ ಪೊಗಂ ನೆಗಟ್ಟಿ ಪೊಗಗಂ ನೆಗಗಂ ತಾನೆ ಗುಚಿಯಾಗಿಕಂ | ಮಾನಸದೊಳ್ ಹಂಸೆಯವೂಲ್' ಮಾನಸ ವಾಗ್ವನಿತ ತನ್ನ ಮಾನಸದೊಳಿವಂ | ಮಾನಸನೆಂದಗಲದೆ ನಿಳೆ ಮಾನಸನಾದಂ ಸರಸ್ವತೀ ಕಳಹಂಸಂ || ಶಾಸ್ತ್ರದಲ್ಲಿಯೂ ನಾರದನೇ ಮೊದಲಾದವರಿಂದ ರಚಿತವಾದ ಸಂಗೀತ ವಿದ್ಯಾವಿಶೇಷಗಳಲ್ಲಿಯೂ ಹಸ್ತಿಶಾಸ್ತ್ರಜ್ಞರಾದ ರಾಜಪುತ್ರ ಗೌತಮ, ವಾದ್ವಾಕಿ, ಪಾಳಕಾಪ್ಯ, ಸುಗತಿ, ಶ್ರೀಹರ್ಷನೇ ಮೊದಲಾದ ಪ್ರಾಚೀನರಿಂದ ವಿರಚಿತವಾದ ಹಸ್ತಿಶಾಸ್ತ್ರದಲ್ಲಿಯೂ ಚಿತ್ರಕರ್ಮ, ಪತ್ರಚ್ಛೇದ, ಗ್ರಹಗಣಿತ, ರತ್ನಪರೀಕ್ಷೆಗಳಲ್ಲಿಯೂ ದಾರುಕರ್ಮ, ವಾಸ್ತು - ವಿದ್ಯೆಗಳಿಂದ ಕೂಡಿದ ಯಂತ್ರೋಪಯೋಗದಲ್ಲಿಯೂ ವಿಷಾಪಹರಣ, ಸ್ವರಭೇದ, ರತಿತಂತ್ರ, ಇಂದ್ರಜಾಲ ಮೊದಲಾದ ಬಗೆಬಗೆಯ ವಿದ್ಯೆಗಳಲ್ಲಿಯೂ ಅನೇಕಾಕ್ಷರಸ್ವರೂಪದಲ್ಲಿಯೂ ಚಾಪ, ಚಕ್ರ, ಪರಸು, ಕೃಪಾಣ, ಶಕ್ತಿ, ತೋಮರ, ಮುಸಲ, ಮುಸುಂಡಿ, ಭಿಂಡಿವಾಳ, ಮುದ್ಧರ, ಗದೆಯೇ ಮೊದಲಾದ ವಿಧವಿಧವಾದ ಆಯುಧಗಳ ಪ್ರಯೋಗದಲ್ಲಿಯೂ ಅತಿಪ್ರವೀಣನೂ ಸರ್ವಜ್ಞತ್ವವುಳ್ಳವನೂ ಇಂದ್ರನಂತೆ ಜಾಣನೂ ಆದನು. ೩೫. ಇರುವ ವಿದ್ಯೆಗಳಲ್ಲೆಲ್ಲ ಪೂರ್ಣಪಾಂಡಿತ್ಯಪಡೆದವರಿಗೂ ತಿಳಿಸುವುದಕ್ಕೆ ಅಸಾಧ್ಯವಾದ ಸ್ಥಳಗಳಲ್ಲಿಯೂ ಅರ್ಜುನನು (ಅರಿಕೇಸರಿಯು) ಸರಳವಾಗಿ ತಿಳಿಸುತ್ತಾನೆ. ಅರ್ಜುನನ ಲೆಕ್ಕಪೊಕ್ಕಗಳನ್ನು ವಿಚಾರಮಾಡಿ ನೋಡಯ್ಯಾ ವl ಎಂದು ಲೋಕದ ಜನರೆಲ್ಲ ಹೊಗಳುವ ಹಾಗೆ ಪ್ರಸಿದ್ಧಿಪಡೆದ ಹೊಗಳಿಕೆಗೂ ಪ್ರಸಿದ್ದಿಗೂ ತಾನೆ ಗುರಿಯಾದನು. ೩೬, ಇವನ ಮನಸ್ಸಿನಲ್ಲಿ ಹುಟ್ಟಿದ ವಾಗ್ಗೇವತೆಯು ಇವನು ಮನುಷ್ಯನೆಂದು ಬಿಟ್ಟು ಹೋಗದೆ ಮಾನಸ ಸರೋವರದಲ್ಲಿರುವ ಹಂಸಪಕ್ಷಿಯ ಹಾಗೆ ಸ್ಥಿರವಾಗಿ ನಿಲ್ಲಲು ಸರಸ್ವತಿಯ ವಾಹನವಾದ ಹಂಸದ ಹಾಗಿರುವ ಅರ್ಜುನನು ಮನುಷ್ಯಮಾತ್ರನಾಗಿದ್ದಾನೆ.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy