SearchBrowseAboutContactDonate
Page Preview
Page 125
Loading...
Download File
Download File
Page Text
________________ ೧೨೦) ಪಂಪಭಾರತಂ ಉದಯಿಸುವುದುಮಮೃತಾಂಶುವಿ 'ನುದಯದೊಳಂಭೋಧಿ ವೇಲೆ ಭೋರ್ಗರೆವವೂಲೋ | ರ್ಮೊದಲೆಸೆದುವು ಘನಪಥದೊಳ್ ದಶಕರಾಹತಿಯಿನೊಡನೆ ಸುರದುಂದುಭಿಗಳ್ || ೧೪೬ ವ|| ಅಂತು ಮೊಲಗುವ ಸುರದುಂದುಭಿಗಳುಂ ಪರಸುವ ಜಯಜಯ ಧ್ವನಿಗಳುಂ ಬೆರಸು ದೇವೇಂದ್ರ ಬರೆ ದೇವವಿಮಾನಂಗಳೆಲ್ಲಂ ಶತಶೃಂಗಪರ್ವತಮಂ ಮುಸುಳಿಕೊಂಡು ಕಂ || ದೇವರ ಪಟಗಳ ರವದೊಳ್ ದೇವರ ಸುರಿವರಲ ಸರಿಯ ಬೆಳ್ಳರಿಯೊಳ್ ತ | ದೇವ ವಿಮಾನಾವಳಿಯೋ ತೀವಿದುದೊರ್ಮೊದಲೆ ಗಗನದಿಂ ಧರೆ ಮಧ್ಯಂ | ೧೪೭ ವ|| ಅಂತು ಹಿರಣ್ಯಗರ್ಭಬ್ರಹ್ಮ ಮೊದಲಾಗೆ ವ್ಯಾಸ ಕಶ್ಯಪ ವಸಿಷ್ಠ ವಾಲ್ಮೀಕಿ ವಿಶ್ವಾಮಿತ್ರ ಜಮದಗ್ನಿ ಭಾರದ್ವಾಜಾಗಸ್ಯ ಪುಲಸ್ಯ ನಾರದ ಪ್ರಮುಖರಪ್ಪ ದಿವ್ಯ ಮುನಿಪತಿಗಳುಮೇಕಾದಶರುದ್ರರುಂ ದ್ವಾದಶಾದಿತ್ಯರುಮಷ್ಟವಸುಗಳುಮತ್ವಿನೀ ದೇವರುಂ ಮೊದಲಾಗೆ ಮೂವತ್ತಮೂದೇವರುಂ ಇಂದ್ರಂಬೆರಸು ವೈಮಾನಿಕ ದೇವರುಂ ನೆರೆದು ಪಾಂಡುರಾಜನುಮಂ ಕುಂತಿಯುಮಂ ಪರಸಿ ಕೂಸಿಂಗೆ ಜನೋತ್ಸವಮಂ ಮಾಡಿಕಂ || ನೋಡುವನಾ ಬ್ರಹ್ಮ ಮುಂ ಡಾಡುವನಮರೇಂದ್ರನಿಂದನಚ್ಚರಸೆಯರೆ | ಉಾಡುವರೆಂದೊಡೆ ಪೊಗು ಲೈಡ ಗುಣಾರ್ಣವನ ಜನ್ಮದಿನದ ಬೆಡಂಗಂ || ೧೪೮ ಉದಯಪರ್ವತದಿಂದ ಉದಯಿಸಿದನು. ೧೪೬. ಹುಟ್ಟಲಾಗಿ ಚಂದ್ರೋದಯ ಸಮಯದಲ್ಲಿ ಸಮುದ್ರದಲೆಗಳು ಆರ್ಭಟಮಾಡುವ ಹಾಗೆ ಆಕಾಶಮಾರ್ಗದಲ್ಲಿ ದೇವತೆಗಳ ಕೈಚಪ್ಪಾಳೆಗಳೊಡನೆ ದೇವದುಂದುಭಿಗಳೂ (ದೇವತೆಗಳ ಮಂಗಳವಾದ್ಯ) ಕೂಡಲೇ ಒಟ್ಟಿಗೆ ಶಬ್ದಮಾಡಿದುವು ವರ ಹಾಗೆ ಭೋರ್ಗರೆಯುತ್ತಿರುವ ದೇವದುಂದುಭಿಗಳೊಡನೆ ಹರಕೆಯ ಜಯಜಯಶಬ್ದಗಳನ್ನೂ ಸೇರಿಸಿಕೊಂಡು ದೇವೇಂದ್ರನು ಬರಲಾಗಿ ಇತರ ದೇವತೆಗಳ ವಿಮಾನಗಳೆಲ್ಲವೂ ಶತಶೃಂಗಪರ್ವತವನ್ನು ಮುತ್ತಿಕೊಂಡು ೧೪೭. ದೇವತೆಗಳ ವಾದ್ಯಧ್ವನಿಯಿಂದಲೂ ದೇವತೆಗಳು ಸುರಿಸುತ್ತಿರುವ ಪುಷ್ಪವೃಷ್ಟಿಪ್ರವಾಹದಿಂದಲೂ ಆ ದೇವತೆಗಳ ವಿಮಾನಪಂಕ್ತಿಗಳಿಂದಲೂ ಭೂಮ್ಯಾಕಾಶಗಳ ಮಧ್ಯಭಾಗವು ತುಂಬಿಹೋಯಿತು. ವ|| ಹೀಗೆ ಹಿರಣ್ಯಗರ್ಭ ಬ್ರಹ್ಮನೇ ಮೊದಲಾಗಿ ವ್ಯಾಸ, ಕಶ್ಯಪ, ವಸಿಷ್ಠ, ವಾಲ್ಮೀಕಿ, ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜ, ಅಗಸ್ತ್ರ, ಪುಲಸ್ಯ, ನಾರದ ಪ್ರಮುಖರಾದ ದಿವ್ಯಋಷಿಶ್ರೇಷ್ಠರೂ ಏಕಾದಶರುದ್ರರೂ ದ್ವಾದಶಾದಿತ್ಯರೂ ಅಷ್ಟವಸುಗಳೂ ಅಶ್ವಿನೀದೇವತೆಗಳೂ ಮೊದಲಾದ ಮೂವತ್ತು ಮೂರು ದೇವರೂ ಇಂದ್ರನೊಡಗೂಡಿ ವೈಮಾನಿಕದೇವತೆ ಗಳೂ ಒಟ್ಟಾಗಿ ಸೇರಿ ಪಾಂಡುರಾಜನನ್ನೂ ಕುಂತಿಯನ್ನೂ ಹರಸಿ ಮಗುವಿಗೆ ಜನೋತ್ಸವವನ್ನು ಮಾಡಿ ೧೪೮, ಆ ಬ್ರಹ್ಮನು (ತೃಪ್ತಿಯಾಗದೆ) ನೋಡುತ್ತಾನೆ;
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy