SearchBrowseAboutContactDonate
Page Preview
Page 124
Loading...
Download File
Download File
Page Text
________________ ಕಂ|| ಪ್ರಥಮಾಶ್ವಾಸಂ / ೧೧೯ ಬಳದ ನಿತಂಬದ ಕಾಂಚೀ ಕಳಾಪಮಂ ಕಟ್ಟಲಣಮ ನೆಯದಿದಂದ | ಗಳಿಸಿ ಕುಳಿಕೆಗಳಿನೇಂ ಕ ಜೊಳಿಸಿದುದೋ ಸುಭಗೆಯಾದ ಸುದತಿಯ ಗರ್ಭ೦ 11 ೧೪೩ ವlt ಅಂತು ತಕ್ಕನೆ ತೀವಿದ ಮೆಯೊಳಲರ್ದ ಸಂಪಗೆಯರಲಂತ ಬೆಳರ್ತ ಬಣ್ಣ ಗುಣಾರ್ಣವಂಗೆ ಮಾಡಿದ ಬಣದಂತ ಸೊಗಯಿಸಿ ಬೆಳೆದು ಕಂ|| ತುಡುಗಗಳ ಸರಿಗಯುಮಂ ಕಡುವಿಣಿತನಿಸಿ ನಡೆದುಮೊರಡಿಯನಣಂ || ನಡೆಯಲುಮಾಜದ ಕೆಮ್ಮನೆ ಬಿಡದಾರಯ್ಯನಿತುಮಾಗೆ ಬಳೆದುದು ಗರ್ಭ೦ || ವll ಅಂತಾ ಬಳೆದ ಗರ್ಭದೊಳ್ ಸಂಪೂರ್ಣಪ್ರಸವಸಮಯಂ ದೊರೆಕೊಳೆ ಗ್ರಹಂಗಳಲ್ಲಂ ತಂತಮುಚ್ಚಿ ಸ್ನಾನಂಗಳೊಳಿರ್ದು ಪಡ್ವರ್ಗ ಸಿದ್ಧಿಯನುಂಟುಮಾಡೆ ಶುಭಲಗೋದಯದೊಳ ಕotರ ಭರತಕುಲ ಗಗನ ದಿನಕರ ನರಾತಿಕುಳಕಮಳಹಿಮಕರಂ ಶಿಶು ತೇಜೋ | ಎರಚನೆಯುಂ ಕಾಂತಿಯುಮಾ ವರಿಸಿರೆ ಗರ್ಭೋದಯಾದ್ರಿಯಂದುದಯಿಸಿದಂ || ೧೪೫ ೧೪೩. ತುಂಬಿ ಬೆಳೆದ ಪೃಷ್ಟಭಾಗದಿಂದ ನಡುಕಟ್ಟನ್ನು ಕಟ್ಟಲೂ ಸ್ವಲ್ಪವೂ ಸಾಧ್ಯವಿಲ್ಲವೆನ್ನುವ ರೀತಿಯಲ್ಲಿ ಆ ಸೌಭಾಗ್ಯಶಾಲಿನಿಯಾದ ಕುಂತಿಯ ಗರ್ಭವು ಬೆಳೆದು ವಿಶೇಷವಾದ ನೂಲಿನ ಕುಳಿಕೆಗಳಿಂದ ಅತಿ ಮನೋಹರವಾಯಿತು. ವ|| ಹಾಗೆ ಪೂರ್ಣವಾಗಿ ತುಂಬಿಕೊಂಡ ಮೈಯಲ್ಲಿ ಅರಳಿದ ಸಂಪಗೆಯ ಹೂವಿನಂತೆ ಬಿಳುಪಾದ ಬಣ್ಣವು ಗುಣಾರ್ಣವನಿಗೆ ಮಾಡಿದ ಬಣ್ಣದಂತೆಯೇ ಸೊಗಸಾಗಿ ಬಳೆದು ೧೪೪. ಅವಳು ಧರಿಸಿರುವ ಆಭರಣಗಳಲ್ಲಿ ಒಂದು ಸರಿಗೆಯೂ ಬಹುಭಾರವುಳ್ಳದ್ದೆನಿಸಿ ಓಡಾಡಲು ಒಂದು ಹೆಜ್ಜೆಯನ್ನೂ ಇಡಲಾರದೆ ಸುಮ್ಮನೆ ಹಿಂದಿರುಗಿ ನೋಡುವಷ್ಟು ಗರ್ಭವು ಬೆಳೆಯಿತು. ವಹಾಗೆ ಬೆಳೆದ ಗರ್ಭದಲ್ಲಿ ತುಂಬಿದ ಹೆರಿಗೆಯ ಕಾಲವು ಪ್ರಾಪ್ತವಾಗಲು ನವಗ್ರಹಗಳೆಲ್ಲ ತಮ್ಮ ತಮ್ಮ ಉಚ್ಚಸ್ಥಾನಗಳಲ್ಲಿದ್ದು ಲಗ್ನ, ಹೋರಾ, ದ್ರೇಕ್ಕಾಣ, ನವಾಂಶ, ದ್ವಾದಶಾಂಶ ಮತ್ತು ತ್ರಿಂಶಾಂಶಗಳೆಂಬ ಷಡ್ವರ್ಗಗಳ ಸಿದ್ದಿಯನ್ನುಂಟುಮಾಡಿದ ಶುಭಲಗ್ನ ಪ್ರಾಪ್ತವಾದಾಗ ೧೪. ಭರತವಂಶವೆಂಬ ಆಕಾಶಕ್ಕೆ ಸೂರ್ಯನೂ ಶತ್ರುಗಳ ವಂಶವೆಂಬ ತಾವರೆಗೆ ಚಂದ್ರನೂ ಆದ ಶಿಶುವು ತೇಜಸ್ಸಿನ ರಚನೆಯ ಪ್ರಕಾಶವೂ ತುಂಬಿರಲು ಗರ್ಭವೆಂಬ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy