SearchBrowseAboutContactDonate
Page Preview
Page 126
Loading...
Download File
Download File
Page Text
________________ ಪ್ರಥಮಾಶ್ವಾಸಂ | ೧೨೧ ವಅಂತು ಪಿರಿದುಮೊಸಗೆಯಂ ಮಾಡಿ ದೇವಸಭೆಯುಂ ಬ್ರಹ್ಮಸಭೆಯುಮೊಡನಿರ್ದು ನಾಮಕರಣೋತ್ಸವ ನಿಮಿತ್ತಂಗಳಪ್ಪ ನಾಮಂಗಳೊಳೀತಂ ಸಕಲ ಭುವನ ಸಂಸ್ತೂಯಮಾನಂ ಚಾಳುಕ್ಯವಂಶೋದ್ಭವಂ ಶ್ರೀಮದರಿಕೇಸರಿ ವಿಕ್ರಮಾರ್ಜುನನುದಾತ್ತನಾರಾಯಣಂ ಪ್ರಚಂಡ ಮಾರ್ತಾಂಡನುದಾರಮಹೇಶ್ವರಂ ಕದನತ್ರಿಣೇತ್ರಂ ಮನುಜ ಮಾಂಧಾತಂ ಪ್ರತಿಜ್ಞಾ ಗಾಂಗೇಯಂ ಶಾಚಾಂಜನೇಯನಕಳಂಕರಾಮಂ ಸಾಹಸಭೀಮಂ ಪ್ರತ್ಯಕಜೀಮೂತವಾಹನಂ ಜಗದೇಕಮಲ್ಲಂ ಪರಸೈನ್ಯ ಭೈರವಂ ಅತಿರಥ ಮಥನಂ ವೈರಿಗಜಘಟಾವಿಘಟನಂ ವಿದ್ವಿಷ್ಟ ವಿದ್ರಾವಣನರಾತಿ ಕಾಳಾನಳಂ ರಿಪುಕುರಂಗಕಂಠೀರವಂ ವಿಕ್ರಾಂತತುಂಗಂ ಪರಾಕ್ರಮದವಳಂ ಸಮರೈಕಮೇರು ಶರಣಾಗತ ಜಲನಿಧಿ ವಿನಯವಿಭೂಷಣಂ ಮನುನಿದಾನನನ್ನದಾನಿ ಲೋಕೈಕ ಕಲ್ಪದ್ರುಮಂ ದೇವೇಂದ್ರನು ಮುದ್ದಾಡುತ್ತಾನೆ, ಅಪ್ಪರಸ್ತ್ರೀಯರು (ಮಗುವನ್ನು ನೋಡಿ ಸಂತೋಷದಿಂದ) ಎದ್ದು ಕುಣಿದಾಡುತ್ತಾರೆ ಎಂದ ಮೇಲೆ ಗುಣಾರ್ಣವನ ಜನೋತ್ಸವದ ಸೊಗಸನ್ನು ಹೊಗಳಬೇಡವೇ? ವ! ಹಾಗೆ ವಿಶೇಷೋತ್ಸವವನ್ನು ನಡೆಸಿ ದೇವಸಭೆಯವರೂ ಬ್ರಹ್ಮಸಭೆಯವರೂ ಒಟ್ಟಿಗಿದ್ದು ಹೆಸರಿಡಲು ಕಾರಣವಾದುವುಗಳಲ್ಲಿ ಈತನು ಸಕಲಲೋಕಗಳಿಂದ ಹೊಗಳಲ್ಪಡುವ ಚಾಳುಕ್ಯವಂಶದಲ್ಲಿ ಹುಟ್ಟಿದ ಶ್ರೀಮದರಿಕೇಸರಿ, ವಿಕ್ರಮಾರ್ಜುನ, ಉದಾತ್ತನಾರಾಯಣ, ಪ್ರಚಂಡಮಾರ್ತಾಂಡ (ವಿಶೇಷತೇಜಸ್ಸನ್ನು ಸೂರ್ಯ) ಉದಾರಮಹೇಶ್ವರ (ಔದಾರ್ಯದಲ್ಲಿ ಶಿವನ ಹಾಗಿರುವವನು), ಕದನತ್ರಿಣೇತ್ರ (ಯುದ್ದದಲ್ಲಿ ಮುಕ್ಕಣ್ಣನಂತಿರುವವನು), ಮನುಜಮಾಂಧಾತ (ಮನುಷ್ಯರಲ್ಲಿ ಮಾಂಧಾತ ಚಕ್ರವರ್ತಿಯಂತಿರುವವನು), ಪ್ರತಿಜ್ಞಾಗಾಂಗೇಯ (ಪ್ರತಿಜ್ಞೆ ಮಾಡುವುದರಲ್ಲಿ ಪಣ ತೊಟ್ಟ ಭೀಷ್ಮನಂತಿರುವವನು), ಶೌಚಾಂಜನೇಯ, (ಶುಚಿತ್ವದಲ್ಲಿ ಹನುಮಂತನಂತಿರುವವನು), ಅಕಳಂಕರಾಮ (ಕಲ್ಮಷ ರಹಿತನಾದ ರಾಮನಂತಿರುವವನು), ಸಾಹಸಭೀಮ (ಭಯಂಕರವಾದ ಸಾಹಸವುಳ್ಳವನು), ಜಗದೇಕಮಲ್ಲ (ಜಗತ್ತಿನಲ್ಲೆಲ್ಲ ಶೂರನಾಗಿರುವವನು), ಪ್ರತ್ಯಕ್ಷಜೀಮೂತವಾಹನ (ಎದುರಿಗೇ ಇರುವ ದಾನಶೀಲನೂ ವಿದ್ಯಾಧರ ಚಕ್ರವರ್ತಿಯೂ ಆದ ಜೀಮೂತವಾಹನ), ವಿದ್ವಿಷ್ಟವಿದ್ರಾವಣ (ಶತ್ರುಗಳನ್ನು ಓಡಿಹೋಗುವಂತೆ ಮಾಡುವವನು), ಮನುನಿದಾನ (ಮನುಚಕ್ರವರ್ತಿಯಂತೆ ಆದಿಪುರುಷನಾದವನು), ಪರಸೈನ್ಯಭೈರವ (ಶತ್ರುಸೈನ್ಯಕ್ಕೆ ಭಯಂಕರನಾಗಿರುವವನು), ಅತಿರಥಮಥನ (ಅತಿರಥರನ್ನು ಕಡೆದುಹಾಕುವವನು), ವೈರಿಗಜಘಟಾವಿಘಟನ (ಶತ್ರುಗಳೆಂಬ ಆನೆಗಳ ಸಮೂಹವನ್ನು ಭೇದಿಸುವವನು), ಅರಾತಿಕಾಲಾನಲ (ಶತ್ರುಗಳಿಗೆ ಕಾಲಾಗ್ನಿಯಂತಿರು ವವನು), ರಿಪುಕುರಂಗಕಂಠೀರವ (ಶತ್ರುಗಳೆಂಬ ಜಿಂಕೆಗೆ ಸಿಂಹದಂತಿರುವವನು), ವಿಕ್ರಾಂತತುಂಗ (ಪರಾಕ್ರಮದ ಔನ್ನತ್ಯವನ್ನುಳ್ಳವನು) ಪರಾಕ್ರಮಧವಳ (ಶೌರ್ಯ ದಿಂದ ಬೆಳ್ಳಗಿರುವ ಯಶಸ್ಸನ್ನುಳ್ಳವನು), ಸಮರೈಕಮೇರು (ಯುದ್ದದಲ್ಲಿ ಒಂದು ಮೇರು ಪರ್ವತದಂತಿರುವವನು), ಶರಣಾಗತ ಜಲನಿಧಿ (ಆಶ್ರಿತರಿಗೆ ಸಮುದ್ರದೋಪಾದಿಯಲ್ಲಿರುವವನು), ವಿನಯವಿಭೂಷಣ (ನಮ್ರತೆಯನ್ನೇ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy