________________
ಕಂ।।
ಪ್ರಥಮಾಶ್ವಾಸಂ | ೧೧೩
ಸಂತತಿಗೆ ಪಿರಿಯ ಮಕ್ಕಳ
ನಾಂ ತಡೆಯದೆ ಪಡವೆನೆಂದೊಡಂ ಮುನ್ನಂ | ಕೊಂತಿಯ ಪಡೆದಳ ಗರ್ಭದ
ಚಿಂತೆಯದಿನ್ನೇವುದೆಂದು ಬಸಿಂ ಪೊಸೆದಳ್ ||
ಪೊಸದೊಡೆ ಪಾಲ್ಗಡಲಂ ಮಗು
ಅಸುರ ಪೊಸೆದಲ್ಲಿ ಕಾಳಕೂಟಾಂಕುರಮಂ || ದಸದಳಮೊಗೆದಂತೊಗೆದುವು
ಬಸಿಂ ನೂಂದು ಪಿಂಡಮರುಣಾಕೀರ್ಣ೦ ||
೧೨೯
ಚಂ | ಒದವುಗೆ ನಿನ್ನ ಸಂತತಿಗೆ ನೂರ್ವರುದರ ಸುತರ್ಕಳೊಂದೆ ಗ
020
ವ|| ಅವಂ ಕಂಡು ಕಿನಿಸಿ ಪರ್ಚೆಟ್ಟಿವೆಲ್ಲವಂ ಪೊಗೆ ಬಿಸುಟು ಬನ್ನಿಮೆಂಬುದುಂ ವ್ಯಾಸಭಟ್ಟಾರಕಂ ಬಂದು ಗಾಂಧಾರಿಯಂ ಬಗ್ಗಿಸಿ
ರ್ಭದೊಳನ ಕೆಮ್ಮನಿಂತು ಪೊಸದಿಕ್ಕಿದೆ ಪೊಲ್ಲದುಗೆಯೆಯೆಂದು ಮಾ ಣದ ಮುನಿ ನೂಲುಪಿಂಡಮುಮನಾಗಳ ತೀವಿದ ಕಮ್ಮನಪ್ಪ ತು ಪದ ಕೊಡದೊಳ್ ಸಮಂತು ಮಡಗಿದ್ದೊಡೆ ಸೃಷ್ಟಿಗೆ ಚೋದ್ಯಮಪ್ಪಿನಂ ||
೧೩೧
ವ|| ಅಂತು ನೂರ್ವರೊಳೊರ್ವನಗುರ್ಬು ಪರ್ಬಿ ಪರಕಲಿಸಿ ಸಂಪೂರ್ಣ ವಯಸ್ಕನಾಗಿ ಧೃತಘಟವಿಘಟನುಮಾಗೆ ಪುಟ್ಟುವುದುಂ
ಕೋಪಿಸಿ ಕಿರಿಕಿರಿಯಾಗಿ -೧೨೯. ವಂಶಕ್ಕೆ ಹಿರಿಯರಾದ ಮಕ್ಕಳನ್ನು ನಾನು (ಸಾವಕಾಶವಿಲ್ಲದೆ) ಮೊದಲು ಪಡೆಯುತ್ತೇನೆಂದಿದ್ದರೆ ನನಗಿಂತ ಮುಂಚೆ ಕುಂತಿಯೇ ಪಡೆದಳು. ಇನ್ನು ಮೇಲೆ ಗರ್ಭದ ಚಿಂತೆಯದೇಕೆ ಎಂದು ಹೊಟ್ಟೆಯನ್ನು ಕಿವುಚಿದಳು. ೧೩೦. ಕ್ಷೀರಸಮುದ್ರವನ್ನು ಪುನಃ ರಾಕ್ಷಸರು ಕಡೆಯಲು ಅಂದು ಕಾಳಕೂಟವೆಂಬ ವಿಷದ ಮೊಳಕೆ ಅತಿಶಯವಾಗಿ ಹುಟ್ಟಿದ ಹಾಗೆ ಗಾಂಧಾರಿಯ ಗರ್ಭದಿಂದ ರಕ್ತದಿಂದ ತುಂಬಿದ ನೂರೊಂದು ಭ್ರೂಣಗಳು ಹುಟ್ಟಿದುವು. ವ! ಅವನ್ನು ನೋಡಿ ಕೋಪಿಸಿ ಬೆಂಕಿಬೆಂಕಿಯಾಗಿ ಇವುಗಳೆಲ್ಲವನ್ನೂ ಹೊರಗೆ ಬಿಸಾಡಿಬನ್ನಿ ಎಂದು ಹೇಳಲು ವ್ಯಾಸಮಹರ್ಷಿಯು ಬಂದು ಗಾಂಧಾರಿಯನ್ನು ಗದರಿಸಿ-೧೩೧, 'ನಿನ್ನ ಸಂತತಿಗೆ ಒಂದೇ ಗರ್ಭದಲ್ಲಿ ನೂರುಜನ ಶ್ರೇಷ್ಠರಾದ ಮಕ್ಕಳು ಹುಟ್ಟಲಿ ಎಂದಿರಲು ನಿಷ್ಟ್ರಯೋಜನವಾಗಿ ಹೀಗೆ ಹೊಟ್ಟೆಯನ್ನು ಕಿವುಚಿಬಿಟ್ಟೆ, ಅಯೋಗ್ಯವಾದುದನ್ನು ಮಾಡಿದೆ' ಎಂದು ಬಿಡದೆ ಆ ಋಷಿಯು ಆ ನೂರು ಭ್ರೂಣಗಳನ್ನು ಆಗಲೇ ಗಮಗಮಿಸುವ ತುಪ್ಪದಿಂದ ತುಂಬಿದ ಕೊಡದಲ್ಲಿ ಸುರಕ್ಷಿತವಾಗಿಡಿಸಿದನು. ಸಮಸ್ತಲೋಕಕ್ಕೂ ಆಶ್ಚರ್ಯವುಂಟಾಗುವ ಹಾಗೆ ಅವುಗಳು ಅಲ್ಲಿ ಬೆಳೆದವು. ವ|| ಆ ನೂರುಜನರಲ್ಲಿ ಒಬ್ಬನು ಭಯವು ಹಬ್ಬಿ ಹರಡುವ ಹಾಗೆ ತುಂಬಿದ ಪ್ರಾಯವುಳ್ಳವನಾಗಿ ತುಪ್ಪದ ಕೊಡವನ್ನು (ಮಡಕೆ) ಒಡೆದುಕೊಂಡು ಹುಟ್ಟಿ ಬಂದನು.