SearchBrowseAboutContactDonate
Page Preview
Page 117
Loading...
Download File
Download File
Page Text
________________ ೧೧೨/ ಪಂಪಭಾರತಂ ಆ ಸುದತಿಯ ಮೃದು ಪದ ವಿ ನಾಸಮುಮಂ ಶೇಷನಾನಲಾರದೆ ಸುಯಂ | ಬೇಸನೆಂದೂಡ ಗರ್ಭದ ಕೂಸಿನ ಬಳೆದಳವಿಯಳವನಳೆವರುಮೂಳರೇ || ೧೨೬ ವ|| ಅಂತು ಗರ್ಭನಿರ್ಭರ ಪ್ರದೇಶದೊಳರಾತಿಗಳಂತಕಾಲಂ ದೊರೆಕೊಳ್ಳಂತೆ ಪ್ರಸೂತಿ ಕಾಲಂ ದೊರಕೊಳೆಕಂ|| ಶುಭ ತಿಥಿ ಶುಭ ನಕ್ಷತ್ರ ಶುಭ ವಾರಂ ಶುಭ ಮುಹೂರ್ತಮನ ಗಣಕನಿಳಾ | ಪ್ರಭುವೊಗದನುದಿತ ಕಾಯ. ಪ್ರಭೆಯೊಗೆದಿರೆ ದಳಿತ ಶತ್ರುಗೋತ್ರಂ ಪುತ್ರ | ಭೀಮಂ ಭಯಂಕರಂ ಪಃ ಈ ಮಾತೀ ಕೂಸಿನಂದಮಿಾತನ ಹೆಸರುಂ || ಭೀಮನೆ ಪೋಗನೆ ಮುನಿಜನ ಮಾ ಮಾಯಿನಾಯ್ತು ಶಿಶುಗೆ ಪೆಸರನ್ವರ್ಥಂ || ೧೨೮ ವ|| ಅಂತು ಭರತಕುಲತಿಲಕರಪ್ಪಿರ್ವಮ್ರಕ್ಕಳಂ ಪೆತ್ತು ಕೊಂತಿ ಸಂತಸದಂತ ಮನೆಯ್ದಿರ್ಪುದುಮತ್ತ ಧೃತರಾಷ್ಟ್ರನ ಮಹಾದೇವಿಯಪ್ಪ ಗಾಂಧಾರಿ ಕೇಳು ತನ್ನ ಗರ್ಭ೦ ತಡೆದುದರ್ಕೆ ಕಿಸಿ ಕಿರಿಕಿರಿವೋಗಿ ೧೨೭ ೧೨೭ ಬಿಳಿಯ ಬಣ್ಣದಂತಾಯಿತು. ಮೊದಲು ಬಳುಕುತ್ತಿದ್ದ ನಡುವು ದಪ್ಪನಾದ ಆಕಾರವನ್ನು ಪಡೆಯಿತು. ಅವಳ ಮೊಲೆಯ ತೊಟ್ಟು ಚಿನ್ನದ ಕಲಶವನ್ನು ಹೊಂಗೆಯ ಚಿಗುರಿನಿಂದ ಮುಚ್ಚಿದಂತೆ ಕಪ್ಪುಬಣ್ಣವನ್ನು ತಾಳಿತು. ೧೨೬. ಸುಂದರವಾದ ದಂತಪಂಕ್ತಿಯಿಂದ ಕೂಡಿದ ಆ ಕುಂತಿಯು ಮೃದುವಾದ ಹೆಜ್ಜೆಯಿಡುವುದನ್ನು ಆದಿಶೇಷನು ತಾಳಲಾರದೆ ಕಷ್ಟದಿಂದ ನಿಟ್ಟುಸಿರು ಬಿಟ್ಟನು, ಎಂದರೆ ಗರ್ಭದಲ್ಲಿರುವ ಕೂಸು ಬೆಳೆದ ಅಳತೆಯ ಪ್ರಮಾಣವನ್ನು ಅಳೆಯುವವರೂ ಇದ್ದಾರೆಯೇ? (ಇಲ್ಲವೆಂದೇ ಅರ್ಥ) ವ ಹಾಗೆ ಗರ್ಭವು ಬೆಳೆಯುತ್ತಿದ್ದೆಡೆಯಲ್ಲಿ ಶತ್ರುಗಳಿಗೆ ಅವಸಾನಕಾಲವುಂಟಾಗುವ ಹಾಗೆ ಹೆರಿಗೆಯ ಕಾಲವು ಸಮೀಪಿಸಲು -೧೨೭. ಜೋಯಿಸನು ಶುಭತಿಥಿ, ಶುಭನಕ್ಷತ್ರ, ಶುಭಮುಹೂರ್ತ ಎಂದು ಹೇಳುತ್ತಿರಲು ಜೊತೆಯಲ್ಲಿಯೇ ಹುಟ್ಟಿದ ಶರೀರಕಾಂತಿಯು ಹರಡುತ್ತಿರಲು ಲೋಕಕ್ಕೆಲ್ಲ ರಾಜನೂ ಶತ್ರುಸಂಹಾರಕನೂ ಆದ ಮಗನು ಹುಟ್ಟಿದನು. ೧೨೮, ಈ ಮಗುವಿನ ರೀತಿ ಅತಿಭಯಂಕರವಾದುದು. ಬೇರೆಯ ಮಾತೇನು? ಅವನ ಹೆಸರು ಕೂಡ ಭೀಮನೆಂದೇ ಆಗಲಿ ಎಂದು ಋಷಿಗಳು ಎನ್ನಲು ಅದೇ ರೀತಿ ಆ ಶಿಶುವಿಗೆ ಹೆಸರು ಅನ್ವರ್ಥವಾಗಿಯೇ (ಅರ್ಥಕ್ಕೆ ಹೊಂದಿಕೊಳ್ಳುವ ಹಾಗೆ) ಭೀಮನೆಂದಾಯಿತು. ವll ಹಾಗೆ ಭರತಕುಲತಿಲಕರಾದ ಇಬ್ಬರು ಮಕ್ಕಳನ್ನು ಹೆತ್ತು (ಪಡೆದು) ಕುಂತಿಯು ಸಂತೋಷದ ಪರಮಾವಧಿಯನ್ನು ಹೊಂದಿರಲು ಆ ಕಡೆ ಧೃತರಾಷ್ಟ್ರನ ಮಹಾರಾಣಿಯಾದ ಗಾಂಧಾರಿಯು ಕೇಳಿ ತನ್ನ ಗರ್ಭವು ತಡವಾದುದಕ್ಕೆ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy