SearchBrowseAboutContactDonate
Page Preview
Page 119
Loading...
Download File
Download File
Page Text
________________ ೧೧೪ | ಪಂಪಭಾರತಂ ಕಂ || ಪ್ರತಿಮೆಗಳುವು ಮೊಲಗಿದು ದತಿ ರಭಸದ ಧಾತ್ರಿ ದೆಸೆಗಳುರಿದುವು ಭೂತ | ಪ್ರತತಿಗಳಾಡಿದುವೊಳದು ವತಿ ರಮ್ಯಸ್ಥಾನದೊಳ್ ಶಿವಾ ನಿವಹಂಗಳ್ || ವli ಅಂತೊಗೆದನೇಕೋತ್ಸಾತಂಗಳಂ ಕಂಡು ಮುಂದಳೆವ ಚದುರ ವಿದುರನಿಂತೆಂದಂಕಂ!! ಈತನೆ ನಮ್ಮ ಕುಲಕ್ಕಂ ಕೇತು ದಲಾನಳೆವೆನಲ್ಲದಂಕಿನಿತು ! ತಾತಂ ತೋರ್ಪುವು ಬಿಸುಡುವು ದೀತನ ಪೆಜಿಗುಟಿದ ಸುತರೆ ಸಂತತಿಗಪ್ಪರ್ || ೧೩೩ ವ|| ಎಂದೆಡ೦ ಪುತ್ರವೆಹ ಕಾರಣವಾಗಿ ಧೃತರಾಷ್ಟ್ರನಂ ಗಾಂಧಾರಿಯುಮೇಗೆಯುಮೊಡಂಬಡದಿರ್ದೊಡುತ್ತಾತ ಶಾಂತಿಕ ಪೌಷ್ಟಿಕ ಕ್ರಿಯೆಗಳಂ ಮಹಾ ಬ್ರಾಹ್ಮಣರಿಂದ ಬಳೆಯಿಸಿ ಬದ್ದವಣಮಂ ಬಾಜಿಸಿ ಮಂಗಳಮಂ ಮಾಡಿಸಿ ಕೂಸಿಂಗೆ ದುರ್ಯೊಧನನೆಂದು ಹೆಸರನಿಟ್ಟು ಮತ್ತಿನ ಕೂಸುಗಳೆಲ್ಲಂ ದುಶ್ಯಾಸನಾದಿಯಾಗಿ ನಾಮಂಗಳನಿಟ್ಟು ಪರಕೆಯಂ ಕೊಟ್ಟುಮll ಸುಕಮಿರ್ಪನ್ನೆಗಮಿತ್ತ ಕುಂತಿ ಶತಶೃಂಗಾದೀಂದ್ರದೊಳ್ ದಿವ್ಯ ಬಾ ಲಕನಿನ್ನೊರ್ವನನುಗ್ರವೈರಿ ಮದವನಾತಂಗ ಕುಂಭಾರ್ದ ಮಾ | ಕಿಕ ಲಗೊಜ್ಜಲ ಬಾಣನಂ ಪ್ರವಿಲಸದ್ಗೀರ್ವಾಣ ದಾತವ್ಯ ಸಾ| ಯಕ ಸಂಪೂರ್ಣ ಕಲಾಪ್ರವೀಣನನಿಳಾಭಾರ ಕ್ಷಮಾಕ್ಕೂಣನಂ ೧೩೪ ೧೩೨. ಆಗ (ಅರಮನೆಯಲ್ಲಿದ್ದ ವಿಗ್ರಹಗಳು ರೋದನಮಾಡಿದುವು; ಬಹು ರಭಸದಿಂದ ಭೂಮಿಯು ಗುಡುಗಿತು. ದಿಕ್ಕುಗಳು ಹತ್ತಿ ಉರಿದುವು; ಪಿಶಾಚಿಗಳ ಸಮೂಹವು ಕುಣಿದಾಡಿದುವು, ಅತಿಮನೋಹರವಾದ ಸ್ಥಳಗಳಲ್ಲೆಲ್ಲ ನರಿಯ ಗುಂಪುಗಳು ಕೂಗಿಕೊಂಡವು. ವ|| ಹಾಗೆ ಉಂಟಾದ ಅನೇಕ ಉತ್ಪಾತ (ಅಪಶಕುನ)ಗಳನ್ನು ಕಂಡು ಭವಿಷ್ಯಜ್ಞಾನಿಯೂ ಬುದ್ದಿವಂತನೂ ಆದ ವಿದುರನು ಹೀಗೆಂದನು. ೧೩೩. ಈತನೇ ನಮ್ಮ ವಂಶವನ್ನು ಹಾಳುಮಾಡುವ ಕೇತುಗ್ರಹ; ಹಾಗಿಲ್ಲದಿದ್ದರೆ ಏಕೆ ಇಷ್ಟು ದುರ್ನಿಮಿತ್ತಗಳಾಗುತ್ತಿದ್ದುವು. ಇವನನ್ನು ಹೊರಗೆ ಎಸೆಯುವುದು. ಇವನ ಹಿಂದೆಯ ಉಳಿದವರೇ ವಂಶೋದ್ಧಾರಕರಾಗುತ್ತಾರೆ. ವl ಎಂಬುದಾಗಿ ಹೇಳಿದರೂ ಪುತ್ರಮೋಹ ಕಾರಣದಿಂದ ಧೃತರಾಷ್ಟ್ರನೂ ಗಾಂಧಾರಿಯೂ ಏನು ಮಾಡಿದರೂ (ಎಸೆಯುವುದಕ್ಕೆ ಒಪ್ಪದಿರಲು ಉತ್ಪಾತಶಾಂತಿಗಾಗಿಯೂ ಮಂಗಳವರ್ಧನಕ್ಕಾಗಿಯೂ ಶಾಂತಿಕರ್ಮಗಳನ್ನು ಬ್ರಾಹ್ಮಣರಿಂದ ಮಾಡಿಸಿ ಮಂಗಳ ವಾದ್ಯವನ್ನು ಹಾಡಿಸಿ ಕೂಸಿಗೆ ದುರ್ಯೊಧನನೆಂದು ಹೆಸರಿಟ್ಟು ಉಳಿದ ಮಕ್ಕಳಿಗೆಲ್ಲ ದುಶ್ಯಾಸನನೇ ಮೊದಲಾದ ಹೆಸರುಗಳನ್ನಿಟ್ಟು ಆಶೀರ್ವಾದ ಮಾಡಿದರು. ೧೩೪. ಈ ಕಡೆ ಶ್ರೇಷ್ಠವಾದ ಶತಶೃಂಗಪರ್ವತದಲ್ಲಿ ಕುಂತಿಯು ಭಯಂಕರನಾದ ಶತ್ರುಗಳೆಂಬ ಮದ್ದಾನೆಗಳ ಒದ್ದೆಯಾದ ಮುತ್ತುಗಳು ಅಂಟಿಕೊಂಡಿರುವ ಉಜ್ವಲವಾದ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy