SearchBrowseAboutContactDonate
Page Preview
Page 100
Loading...
Download File
Download File
Page Text
________________ ಪ್ರಥಮಾಶ್ವಾಸಂ | ೯೫ ವ|| ಅಂತಚಲಿತ ಪ್ರತಿಜ್ಞಾರೂಢನಾದ ಗಾಂಗೇಯನನೇಗೆಯುಮೊಡಂಬಡಿಸಲಾಗಿದೆ ಸತ್ಯವತಿ ತಾನುಮಾತನುಮಾಳೊಚಿಸಿ ನಿಶ್ಚಿತಮಂತರಾಗಿ ಕೃಷ್ಣಪಾಯನನಂ ನೆನೆದು ಬರಿಸಿದೊಡೆ ವ್ಯಾಸಮುನೀಂದ್ರನೇಗೆಯ್ದುದೇನಂ ತೀರ್ಚುವುದೆಂದೊಡೆ ಸತ್ಯವತಿಯಿಂತೆಂದಳ್ ಹಿರಣ್ಯ ಗರ್ಭ ಬ್ರಹ್ಮರಿಂ ತಗುಳವ್ಯವಚ್ಛಿನ್ನವಾಗಿ ಬಂದ ಸೋಮವಂಶಮಿಗಳಮ್ಮ ಕುಲಸಂತತಿ ಗಮಾರುಮಿಲ್ಲದೆಡೆವಡೆದು ಕಿಡುವಂತಾಗಿರ್ದುದದು ಕಾರಣದಿಂ ನಿಮ್ಮ ತಮ್ಮಂ ವಿಚಿತ್ರವೀರ್ಯನ ಕ್ಷೇತ್ರದೊಳಂಬಿಕೆಗಮಂಬಾಲೆಗಂ ಪುತ್ರರಪ್ಪಂತು ವರಪ್ರಸಾದಮಂ ದಯೆಗೆಯ್ಯುದೆನೆ ಅಂತೆಗೆಯ್ಯನೆಂದು ಚಂ || ತ್ರಿದಶ ನರಾಸುರೋರಗ ಗಣ ಪ್ರಭು ನಿಶ್ಚಿತ ತತ್ತಯೋಗಿ ಯೋ | ಗದ ಬಲಮು ಪೊಣಿ ನಿಲೆ ಪುತ್ರ ವರಾರ್ಥಿಗಳಾಗಿ ತನ್ನ ಕ | ಓದಿರೋಳೆ ನಿಂದರಂ ನಯದೆ ನೋಡೆ ಮುನೀಂದ್ರನ ದಿವ್ಯದೃಷ್ಟಿಮಂ ಇದೊಳೆ ಪೊದಚ್ಚುದಾ ಸತಿಯರಿರ್ವರೊಳಂ ನವಗರ್ಭವಿಭ್ರಮಂ || 599 ವ! ಅಂತು ದಿವ್ಯಸಂಯೋಗದೊಳಿರ್ವರುಂ ಗರ್ಭಮಂ ತಾಳರ್ ಮತ್ತೊರ್ವ ಮಗನಂ ವರಮಂ ಬೇಡೆಂದಂಬಿಕೆಗೆ ಪೇಡಾಕೆಯುಂ ವ್ಯಾಸಭಟ್ಟಾರಕನಲ್ಲಿಗೆ ಪೋಗಲಲಸಿ ತನ್ನ ಸೂಲಾಯ್ಕೆಯಂ ತನ್ನವೊಲೆ ಕಯ್ಕೆಯು ಬರವಂ ಬೇಡಲಟ್ಟಿದೊಡಾಕೆಗೆ ವರದನಾಗಿ ವ|| ಹಾಗೆ ಸ್ಥಿರಪ್ರತಿಜ್ಞೆಯುಳ್ಳ ಗಾಂಗೇಯನನ್ನು ಏನು ಮಾಡಿದರೂ ಒಪ್ಪಿಸಲಾರದೆ ಸತ್ಯವತಿಯು ತಾನೂ ಆತನೂ ಆಲೋಚಿಸಿ ನಿಷ್ಕೃಷ್ಟವಾದ ಮಂತ್ರಾಲೋಚನೆಮಾಡಿ ಕೃಷ್ಣದೈಪಾಯನ ವ್ಯಾಸರನ್ನು ನೆನೆದು ಬರಿಸಲಾಗಿ ವ್ಯಾಸಮುನೀಂದ್ರನು ಏನು ಮಾಡಬೇಕು ಏನನ್ನು ಈಡೇರಿಸಬೇಕು ಎನ್ನಲು ಸತ್ಯವತಿಯು ಹೀಗೆಂದಳು ಹಿರಣ್ಯಗರ್ಭ ಬ್ರಹ್ಮನಿಂದ ಹಿಡಿದು ಏಕಪ್ರಕಾರವಾಗಿ ನಡೆದುಬಂದ ನಮ್ಮ ಸೋಮವಂಶವು ಈಗ ನಮ್ಮ ಸಂತತಿಗೆ ಯಾರೂ ಇಲ್ಲದೆ ಮಧ್ಯೆ ಹರಿದುಹೋಗಿ ನಾಶವಾಗುವಂತಾಗಿದೆ. ಆದಕಾರಣದಿಂದ ನಿನ್ನ ತಮ್ಮನಾದ ವಿಚಿತ್ರವೀರ್ಯನ ಕ್ಷೇತ್ರದಲ್ಲಿ ಅಂಬಿಕೆಗೂ ಅಂಬಾಲಿಕೆಗೂ ಮಕ್ಕಳಾಗುವ ಹಾಗೆ ವರಪ್ರಸಾದವನ್ನು ಕರುಣಿಸಬೇಕು ಎಂದಳು. ವ್ಯಾಸನು ಹಾಗೆಯೇ ಆಗಲೆಂದು ಒಪ್ಪಿದನು. ೮೫. ದೇವತೆಗಳು ಮನುಷ್ಯರು ರಾಕ್ಷಸರು ಮತ್ತು (ಪಾತಾಳಲೋಕದ) ಸರ್ಪಗಳು ಮೊದಲಾದವರ ಗುಂಪಿಗೆ ಪ್ರಭುವೂ ನಿಷ್ಕೃಷ್ಟವಾದ ತತ್ವಜ್ಞಾನಿಯೂ ಯೋಗಿಯೂ ಆದ ವ್ಯಾಸಮಹರ್ಷಿಯು ತನ್ನ ಯೋಗಶಕ್ತಿಯು ಹುಟ್ಟಿ ಅಭಿವೃದ್ಧಿಯಾಗಿ ಸ್ಥಿರವಾಗಿ ನಿಲ್ಲಲು ಮಕ್ಕಳು ಬೇಕೆಂಬ ವರವನ್ನು ಬೇಡುವವರಾಗಿ ತನ್ನ ಎದುರಿನಲ್ಲೇ ನಿಂತಿರುವವರನ್ನು ನಯದಿಂದ ನೋಡಲಾಗಿ ಆ ಋಷಿಶ್ರೇಷ್ಠನ ದಿವ್ಯದೃಷ್ಟಿಮಂತ್ರ ದಿಂದಲೇ 'ಆ ಇಬ್ಬರು ಸ್ತ್ರೀಯರಲ್ಲಿಯೂ ನವೀನವಾದ ಗರ್ಭಸೌಂದರ್ಯವು ವ್ಯಾಪಿಸಿತು. (ಇಬ್ಬರೂ ಗರ್ಭಧಾರಣೆ ಮಾಡಿದರು) ವ|| ಹಾಗೆ ದಿವ್ಯವಾದ (ಋಷಿ ಶ್ರೇಷ್ಠನ) ಸಂಯೋಗದಿಂದ ಇಬ್ಬರೂ ಗರ್ಭವನ್ನು ಧರಿಸಿದರು. ಇನ್ನೊಬ್ಬ ಮಗನ ವರವನ್ನು ಕೇಳು ಎಂದು ಅಂಬಿಕೆಗೆ ಹೇಳಲು ಅವಳು ವ್ಯಾಸಭಟ್ಟಾರಕನ ಹತ್ತಿರ ಹೋಗುವುದಕ್ಕೆ ಆಯಾಸಪಟ್ಟು ತನ್ನ ದಾಸಿಯನ್ನು ತನ್ನ ಹಾಗೆಯೇ ಅಲಂಕರಿಸಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy